Advertisement

ಪೊಲೀಸ್‌ ಠಾಣೆ ಆವರಣದಲ್ಲಿ ಮಾದರಿ ಉದ್ಯಾನವನ

04:24 PM Sep 09, 2020 | Suhan S |

ಭಾಲ್ಕಿ: ಪಟ್ಟಣದ ಪೊಲೀಸ್‌ ಉಪಾಧೀಕ್ಷಕರ ಉಪ ವಿಭಾಗ (ಡಿವೈಎಸ್ಪಿ) ಕಚೇರಿಗೆ ಸೋಮವಾರ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಆವರಣದಲ್ಲಿ ತಲೆಯೆತ್ತುತ್ತಿರುವ ಔಷಧೀಯ ಸಸ್ಯಗಳ ಉದ್ಯಾನವನ, ಪೊಲೀಸ್‌ ಬೃಂದಾವನ ಹಾಗೂ ಕೃಷಿ ಹೊಂಡ ವೀಕ್ಷಿಸಿದರು.

Advertisement

ನಂತರ ಮಾತನಾಡಿದ ಅವರು, ಡಿವೈಎಸ್ಪಿ ಡಾ|ದೇವರಾಜ್‌ ಕ್ರಿಯಾಶೀಲರಾಗಿದ್ದು, ಅಧಿ ಕಾರ ವಹಿಸಿ ಕೊಂಡು ಕೆಲವೇ ತಿಂಗಳಾದರೂ ಪೊಲೀಸ್‌ ಇಲಾಖೆಯನ್ನು ಜನಸ್ನೇಹಿಯನ್ನಾಗಿ ರೂಪಿಸಿ ಇತರೆ ಪೊಲೀಸ್‌ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ ಪೊಲೀಸ್‌ ಆವರಣದಲ್ಲಿ ಡಿವೈಎಸ್ಪಿ ನೇತೃತ್ವದ ತಂಡ ಔಷಧೀಯ ಸಸ್ಯಗಳ ಹಾಗೂ ಉದ್ಯಾನವನ ಅಭಿವೃದ್ಧಿಪಡಿಸುತ್ತಿರುವುದು ಮಾದರಿ. ಮಾವು, ತೆಂಗು ಸೇರಿದಂತೆ ವಿವಿಧ ತಳಿಯ ಸುಮಾರು 3 ಸಾವಿರ ಸಸಿ ನೆಡುವ ಜತೆಗೆ 78 ವಿವಿಧ ಬಗೆಯ 700ಕ್ಕೂ ಅಧಿಕ ಔಷ ಧೀಯ ಗುಣ ಹೊಂದಿರುವ ಸಸಿ ಬೆಳೆಸುತ್ತಿರುವುದು ಪ್ರಯೋಜನಕಾರಿ. ಸಸಿಗಳ ನಿರ್ವಹಣೆಗೆ ನೀರಿನ ಕೊರತೆಯಾಗದಂತೆ ಕೃಷಿ ಹೊಂಡ, ಕೊಳವೆಬಾವಿ ಬಳಿ ಇಂಗು ಗುಂಡಿ, ಕಾಂಪೌಂಡ್‌ ನಿರ್ಮಿಸಿರುವುದು ಸಂತಸ ತಂದಿದೆ ಎಂದರು.

ಡಿವೈಎಸ್ಪಿ ಡಾ| ದೇವರಾಜ್‌.ಬಿ ಮಾತನಾಡಿ,  ಪೊಲೀಸ್‌ ಆವರಣದ ಖಾಲಿ ಪ್ರದೇಶದಲ್ಲಿ ಬೆಳೆದಿದ್ದ ಪಾರ್ಥೇನಿಯಂ, ಕಸ, ಕಡ್ಡಿ ಬೇರ್ಪಡಿಸಿ ದಾನಿಗಳ ಸಹಾಯದಿಂದ ಉದ್ಯಾನವನ ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಲಾಗಿದೆ ಎಂದರು. ಈ ವೇಳೆ ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಹಣಮಂತರಾವ್‌ ಚವ್ಹಾಣ, ಶಶಿಧರ ಕೋಸಂಬೆ, ಕೆ.ಡಿ. ಗಣೇಶ, ರೋಹಿತ ವೈರಾಗ್ಯ, ಕಪಿಲ್‌ ಕಲ್ಯಾಣೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next