Advertisement
ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಗೋಲ್ಡನ್ ಜುಬಿಲ್ ಹಾಲ್‌ನಲ್ಲಿ ಜಿ.ಪಂ., ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಲಜೀವನ್ ಮಿಷನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕೆನರಾ ಬ್ಯಾಂಕ್ ವೃತ್ತ ಕಚೇರಿ ಸಹಯೋಗದಲ್ಲಿ ಸೋಮ ವಾರ ನಡೆದ ಸಂಜೀವಿನಿ ಗ್ರಾ.ಪಂ. ಮಟ್ಟದ ಒಕ್ಕೂಟಗಳು ಹಾಗೂ ಉಪಸಮಿತಿಗಳಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳ ಕುರಿತು ಉಚಿತ ಕಾನೂನು ನೆರವು ಪಡೆಯಬಹುದು. ಮಹಿಳೆಯರು ಸಂವಿಧಾನ ನೀಡಿರುವ ಹಕ್ಕುಗಳನ್ನು ಸದುಪ ಯೋಗಪಡಿಸಿಕೊಳ್ಳಬೇಕು ಎಂದರು.
Related Articles
ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿ ಜನರಲ್ ಮ್ಯಾನೇಜರ್ ರಾಮ ನಾಯ್ಕ ಮಾತನಾಡಿ, ಮಹಿಳಾ ಸ್ವ-ಸಹಾಯ ಸಂಘಗಳು ಸಾಲವನ್ನು ಸಕಾಲದಲ್ಲಿ ಮರುಪಾವತಿಸು ತ್ತಿದ್ದು, ಈ ವೃತ್ತದ 5 ಜಿಲ್ಲೆಗಳಲ್ಲಿ 4,070 ಗುಂಪುಗಳ 61,000 ಸದಸ್ಯರಿಗೆ ಒಟ್ಟು 139 ಕೋ.ರೂ. ಸಾಲ ವಿತರಿಸಲಾ ಗಿ ದೆ. ಹೆಚ್ಚಿನ ಸಾಲ ಪಡೆದು ಹೆಚ್ಚಿನ ಅಭಿವೃದ್ಧಿ ಚಟು ವಟಿಕೆಗಳನ್ನು ಕೈಗೊಳ್ಳಬೇಕು ಎಂದರು.
Advertisement
ಪ್ರಶಸ್ತಿ ವಿತರಣೆಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ನವಶಕ್ತಿ ಸಂಜೀವಿನಿ ಗ್ರಾ.ಪಂ. ಒಕ್ಕೂಟ ಬಡಾ ನಿಡಿಯೂರು ಅವರಿಗೆ ಪ್ರಶಸ್ತಿ ವಿತರಿಸಲಾಯಿತು. ಜಿ.ಪಂ. ಯೋಜನಾ ನಿರ್ದೇಶಕ ಬಾಬು ಪ್ರಸ್ತಾವನೆಗೈದರು. ಜಲ ಜೀವನ್ ಮಿಷನ್ ಯೋಜನೆಯ ಮುಖ್ಯಸ್ಥ ಗಿರೀಶ್, ನ್ಯಾಯವಾದಿ ಪ್ರದೀಪ್ ಹಾಜರಿದ್ದರು. ರಾ. ಗ್ರಾಮೀಣ ಜೀವನೋಪಾಯ ಅಭಿಯಾನದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಸ್ವಾಗತಿಸಿ, ಜಿ.ಪಂ. ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿ’ಸಿಲ್ವಾ ವಂದಿಸಿದರು. ಅಶ್ವಿನಿ ಬಾರಕೂರು, ಗಣೇಶ್ ನಾಯ್ಕ ನಿರೂಪಿಸಿದರು. ಉದ್ಯೋಗಿಗಳೀಗ ಉದ್ಯಮಿಗಳು!
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಸಿಇಒ ಡಾ| ನವೀನ್ ಭಟ್ ಮಾತನಾಡಿ, ಒಂದು ವರ್ಷದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಗೆ ರಾಷ್ಟ್ರ ಮಟ್ಟದ ಪ್ರಾಮುಖ್ಯ ದೊರೆತ ಕಾರಣ, ಉದ್ಯೋಗಿಗಳೆಲ್ಲ ಉದ್ಯಮಿಗಳಾಗಿ ಎಂಬಂತೆ ಮಹಿಳೆಯರು ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ ಎಂದರು. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಸಂಜೀವಿನಿ ಸಂತೆಗಳನ್ನು ಆಯೋಜಿಸಲಾಗಿದೆ. 60 ಮಂದಿ ಚಾಲನೆ ಪರವಾನಿಗೆ ಪಡೆದು ಸ್ವ-ಉದ್ಯೋಗಿಗಳಾಗಿದ್ದಾರೆ. ಸಂಚಾರಿ ಕ್ಯಾಂಟೀನ್ ಆರಂಭ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕ್ಯಾಂಟೀನ್ ನಿರ್ವಹಣೆ, ಬ್ಯಾಂಕಿಂಗ್ ನೆರವು ನೀಡುವ ಸಖೀಯರಾಗಿ 110 ಕ್ಕೂ ಅಧಿಕ ಮಂದಿ ಕಾರ್ಯನಿರ್ವಹಣೆ, ಹಡಿಲು ಭೂಮಿ ಕೃಷಿ ಕಾರ್ಯ, ಹೈನುಗಾರಿಕೆ, ಕೃಷಿ ಯಂತ್ರೋಪಕರಣ ಕೇಂದ್ರದ ನಿರ್ವಹಣೆ, ಉದ್ಯೋಗ ಮೇಳದ ಮೂಲಕ 600ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಲಾಗಿದೆ. ಪ್ರತೀ ತಾಲೂಕಿನಲ್ಲಿ ತಲಾ 2 ಸಂಜೀವಿನಿ ನರ್ಸರಿ, ಸಂಜೀವಿನಿ ಕಲಾತಂಡ ರಚನೆ, ಬ್ಯೂಟಿ ಪಾರ್ಲರ್, ಸೂಪರ್ ಮಾರ್ಕೆಟ್ ಆರಂಭಿಸುವ ಜತೆಗೆ ಆಹಾರ ಉತ್ಪನ್ನಗಳ ಸರಬರಾಜು ಮಾಡುವ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಆರಂಭಿಸುವ ಮೂಲಕ ಜಿಲ್ಲೆಯ ಮಹಿಳೆಯರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಹೆಚ್ಚಿನ ಸಶಕ್ತರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.