Advertisement

ಕೊರೊನಾ ಕಾಲದಲ್ಲಿ ನಮ್ಮ ಪೊಲೀಸರೇ ಮಾದರಿ

05:34 PM May 24, 2021 | Team Udayavani |

ಬೆಂಗಳೂರು: ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ನಗರದಲ್ಲಿಫ್ರಂಟ್‌ ಲೈನ್‌ ವಾರಿಯರ್ಸ್‌ಗಳಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವಪೊಲೀಸ್‌ ಇಲಾಖೆಯಲ್ಲಿ ಮೊದಲ ಅಲೆಗೆ ಹೋಲಿಸಿದರೆ ಎರಡನೇಅಲೆಯಲ್ಲಿಕೊರೊನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ತಟ್ಟಿಲ್ಲ.ಅದಕ್ಕೆ ಕಾರಣ ಪೊಲೀಸ್‌ ಇಲಾಖೆ (ಸಿಎಆರ್‌, ಕೆಎಸ್‌ಆರ್‌ಪಿ,ಸಿವಿಲ್‌ ಸೇರಿ ಎಲ್ಲ ವಿಭಾಗ) ಪ್ರತಿಯೊಂದು ಹಂತದ ಅಧಿಕಾರಿ-ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿರುವುದು ಮತ್ತು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು.

Advertisement

ಕಳೆದ ಬಾರಿ ಇದೇ ಸಮಯಕ್ಕೆ ರಾಜ್ಯದಲ್ಲಿ ಅಂದಾಜು ಸುಮಾರು10 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೊಳಗಾಗಿದ್ದು, 103ಕ್ಕೂ(ಬೆಂಗಳೂರಿನಲ್ಲಿ 35 ಮಂದಿ) ಮಂದಿ ಮೃತಪಟ್ಟಿದ್ದರು. ಆದರೆ, ಈಬಾರಿ ನಾಲ್ಕುವರೆ ಸಾವಿರ ಗಡಿ ದಾಟಿದ್ದು,43 ಮಂದಿ ಮೃತಪಟ್ಟಿದ್ದಾರೆ.

ಅದಕ್ಕೆ ಮುಖ್ಯ ಕಾರಣ ಎರಡನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆನೀಡುತ್ತಿದ್ದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು. ಮುಖ್ಯವಾಗಿ ವ್ಯಾಕ್ಸಿನೇಷನ್‌ ಪಡೆದು, ತಮ್ಮಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರು. ಅದು ಪೊಲೀಸ್‌ ಸಿಬ್ಬಂದಿಯಲ್ಲಿ “ಆನೆ ಬಲ’ತಂದುಕೊಟ್ಟಿತ್ತು. ಇದರೊಂದಿಗೆ ಅಧಿಕಾರಿ-ಸಿಬ್ಬಂದಿಗೆ ರಜೆ ನಿಷೇಧ,ಲಾಕ್‌ಡೌನ್‌ ಜಾರಿ, ಆನ್‌ಲೈನ್‌ ಸಭೆಗಳು, ಪ್ರತಿ ಠಾಣೆಯಲ್ಲಿಸಹಾಯವಾಣಿ ಕೇಂದ್ರಗಳ ತೆರವು, ಪೊಲೀಸ್‌ ಕೋವಿಡ್‌ ಕೇರ್‌ಸೆಂಟರ್‌, ಹಿರಿಯ ಅಧಿಕಾರಿಗಳ ಆತ್ಮಸ್ಥೈರ್ಯದ ಮಾತುಗಳು,ಆಯುಕ್ತರಿಂದ ಪತ್ರ ಹೀಗೆ ನಾನಾ ಯೋಜನೆಗಳನ್ನು ರೂಪಿಸಿಕೊಂಡಿದ್ದರು. ಅವುಗಳು ಪೊಲೀಸರಲ್ಲಿ ಆತ್ಮವಿಶ್ವಾಸ ತಂದುಕೊಟ್ಟಿತ್ತು.

ಜತೆಗೆಕಳೆದ ವರ್ಷದಲ್ಲಿಕಲಿತ ಪಾಠದಿಂದ ಎಚ್ಚೆತ್ತುಕೊಂಡರು.ವ್ಯಾಕ್ಸಿನೇಷನ್‌ ಕಡ್ಡಾಯ: ಫ್ರಂಟ್‌ ಲೈನ್‌ ವಾರಿಯರ್ಸ್‌ಗಳಿಗೆಕಡ್ಡಾಯವಾಗಿ ವ್ಯಾಕ್ಸಿನೇಷನ್‌ ಪಡೆಯಲು ಸರ್ಕಾರ ಆದೇಶಿಸಿತ್ತು.ಅದರಂತೆ ಪ್ರತಿಯೊಂದು ಹಂತದ ಅಧಿಕಾರಿ-ಸಿಬ್ಬಂದಿವ್ಯಾಕ್ಸಿನೇಷನ್‌ ಪಡೆಯಲು ಸೂಚಿಸಲಾಗಿದೆ. ಆದರೆ, ಕೆಲವರುಪಡೆಯಲು ಹಿಂದೇಟು ಹಾಕಿದರು. ಹೀಗಾಗಿ ಅವರ ಮನೆಗಳಿಗೆವ್ಯಾಕ್ಸಿನೇಷನ್‌ ಕಳುಹಿಸಿ ಪಡೆಯಲು ಆದೇಶಿಲಾಗಿತ್ತು.

ಅದರ ಫಲ ಇದೀಗಶೇ.91ರಷ್ಟುಮೊದಲ ಡೋಸ್‌ ಮುಕ್ತಾಯಗೊಂಡಿದೆ. ಎರಡನೇ ಡೋಸ್‌ ಕೂಡ ಹಂತ-ಹಂತವಾಗಿ ವಿತರಣೆಮಾಡಲಾಗುತ್ತಿದೆ. ಇದು ಪೊಲೀಸರಿಗೆ ಆನೆ ಬಲ ನೀಡಿತು. ಲಸಿಕೆಪಡೆದುಕೊಂಡ ನಂತರ ಕೊರೊನಾ ಪಾಸಿಟಿವ್‌ ಬಂದಅಧಿಕಾರಿ-ಸಿಬ್ಬಂದಿ ಕೊರೊನಾ ಗೆದ್ದು ಬಂದಿದ್ದಾರೆ.ರಜೆ ನಿಷೇಧ: ಈ ಮಧ್ಯೆ ನಗರದ ಪ್ರತಿಯೊಬ್ಬಅಧಿಕಾರಿ-ಸಿಬ್ಬಂದಿಗೆ ಕಡ್ಡಾಯವಾಗಿ ರಜೆನಿಷೇಧಿಸಲಾಗಿತ್ತು. ಲಾಕ್‌ ಡೌನ್‌ ಜಾರಿಯಾಗುತ್ತಿದ್ದಂತೆರಜೆಯಲ್ಲಿದ್ದವರನ್ನು ಕರ್ತವ್ಯಕ್ಕೆ .(ಕೊರೊನಾ ಪ್ರಮಾಣಪತ್ರ ಸಮೇತ)ಕರೆಸಿಕೊಳ್ಳಲಾಗಿತ್ತು.
ನಗರದ ಪ್ರತಿಠಾಣೆಯ ಮುಖ್ಯದ್ವಾರದಲ್ಲೇ ಹೆಲ್ಪ… ಡೆಸ್ಕ್ ತೆರೆಯಲಾಗಿತ್ತು. ಠಾಣೆಗೆ ದೂರು ನೀಡಲು ಬರುವ ಸಾರ್ವಜನಿಕರುಮೊದಲು ಈ ಡೆಸ್ಕ್ ಸಿಬ್ಬಂದಿಯ ಸಹಾಯಪಡೆಯಬೇಕು. ಗಂಭೀರ ಸ್ವರೂಪದ ಪ್ರಕರಣವಾದರೇಹಿರಿಯ ಅಧಿಕಾರಿಗಳ ಬಳಿ ಹೋಗಬೇಕು. ಇಲ್ಲವಾದಲ್ಲಿ ಹೆಲ್ಪ…ಡೆಸ್ಕ್ ಸಿಬ್ಬಂದಿಯೇ ಸಮಸ್ಯೆ ಬಗೆಹರಿಸುತ್ತಿದ್ದರು.ಇದರೊಂದಿಗೆ ಡಿಸಿಪಿಗಳು, ಎಸಿಪಿಗಳು, ಇನ್‌ಸ್ಪೆಕ್ಟರ್‌ಗಳುಪರಸ್ಪರ ಆನ್‌ಲೈನ್‌ ಮೂಲಕವೇ ಸಭೆ ನಡೆಸಲುಸೂಚಿಸಲಾಯಿತು. ಸಾರ್ವಜನಿಕ ದೂರುಗಳನ್ನು ಆನ್‌ಲೈನ್‌ ಮೂಲಕ ಪಡೆಯಲಾಗುತ್ತಿದೆ.

Advertisement

ಕೋವಿಡ್‌ ಕೇರ್‌ ಸೆಂಟರ್‌: ಎರಡನೇ ಅಲೆಯಲ್ಲಿಸಾರ್ವಜನಿಕರಿಗೆ ಬೆಡ್‌, ಆಕ್ಸಿಜನ್‌, ವ್ಯಾಕ್ಸಿನೇಷನ್‌ಸಿಗುತ್ತಿಲ್ಲ. ಅಂತಹ ಸಂದರ್ಭದಲ್ಲಿ ನಗರ ಪೊಲೀಸ್‌ಆಯುಕ್ತ ಕಮಲ್‌ ಪಂತ್‌, ನಗರದ ಎರಡು ಕಡೆಗಳಲ್ಲಿಪೊಲೀಸರಿಗಾಗಿಯೇ ಉತ್ತಮ ಸೌಲಭ್ಯಗಳಿರುವ ಕೋವಿಡ್‌ ಕೇರ್‌ ಸೆಂಟರ್‌ ತೆರೆದರು. ಕೊರೊನಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಕೊರೊನಾ ಪರೀಕ್ಷೆಗೊಳಪಟ್ಟು,ವರದಿ ಬರುವವರೆಗೂ ಕಾಯದೇ ನೇರವಾಗಿ ಕೇರ್‌ಸೆಂಟರ್‌ಗೆ ದಾಖಲಾಗಬೇಕು. ಇಲ್ಲವಾದಲ್ಲಿ ಹೋಮ್‌ಐಸೋಲೇಷನ್‌ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು.ಅಲ್ಲದೆ, ಸೋಂಕಿತ ಅಧಿಕಾರಿ-ಸಿಬ್ಬಂದಿಗೆ ಕಾಲಕಾಲಕ್ಕೆಹಿರಿಯ ಅಧಿಕಾರಿಗಳುಕರೆ ಮಾಡಿ ಅವರ ಯೋಗಕ್ಷೇಮವಿಚಾರಿಸುತ್ತಿದ್ದರು. ಈ ಮೂಲಕ ಪೊಲೀಸ್‌ ವಲಯದಲ್ಲಿ ಶುರುವಾಗಿದ್ದ ಆತಂಕ ದೂರವಾಗಿತ್ತು ಎನ್ನುತ್ತಾರೆಪೊಲೀಸ್‌ ಸಿಬ್ಬಂದಿಯೊಬ್ಬರು.

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.