Advertisement

ಸಾಧಕರ ವ್ಯಕ್ತಿತ್ವ ಸಮಾಜಕ್ಕೆ ಮಾದರಿ: ಟಿ.ವಿ. ಮೋಹನ್‌ದಾಸ್‌ ಪೈ

01:09 AM Feb 09, 2022 | Team Udayavani |

ಮಂಗಳೂರು: ಸಾಧನೆ ಮತ್ತುಸಮಾಜಮುಖಿ ಸ್ಪಂದನೆಯಿಂದ ಜೀವನ ಸಾರ್ಥಕ್ಯ ಪಡೆಯುತ್ತದೆ. ಯಶಸ್ವಿ ಉದ್ಯಮಿ, ಶಿಕ್ಷಣ ಪ್ರೇಮಿ, ಮಾನವತಾವಾದಿ ಹಾಗೂ ಅಸಹಾಯಕರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವ ಅನನ್ಯ ಸಾಧಕ ಪಿ. ದಯಾನಂದ ಪೈ ಇದಕ್ಕೆ ಶ್ರೇಷ್ಠ ನಿದರ್ಶನ ಎಂದು ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ ಚೇರ್‌ಮನ್‌ ಟಿ.ವಿ. ಮೋಹನದಾಸ್‌ ಪೈ ಹೇಳಿದರು.

Advertisement

ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಂಗಳವಾರ ಜರಗಿದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಚೇರ್‌ಮನ್‌, ಉದ್ಯಮಿ, ದಾನಿ ಪಿ. ದಯಾನಂದ ಪೈ ಅವರ 77ನೇ ಹುಟ್ಟುಹಬ್ಬ ಹಾಗೂ ವಿಶ್ವಕೊಂಕಣಿ ಕೇಂದ್ರದಲ್ಲಿ ಸೆಂಟ್ರಲ್‌ ಟವರ್‌ಗೆ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಅಭಿನಂದನ ಭಾಷಣ ಮಾಡಿದರು. ವಿಶ್ವ ಕೊಂಕಣಿ ಕೇಂದ್ರಕ್ಕೆ ಪೈಗಳ ಕೊಡುಗೆ ಮಹತ್ತರವಾದುದು ಎಂದರು.

ವಿಶ್ವ ಕೊಂಕಣಿ ಕೇಂದ್ರದ ಕೀರ್ತಿ ಮಂದಿರದಲ್ಲಿ ಡಾ| ಪಿ. ದಯಾನಂದ ಪೈ ಅವರ ಭಾವಚಿತ್ರ ಅನಾವರಣ ಗೊಳಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ ಮಾತನಾಡಿ, ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿ ಸುವ, ಸಹೃದಯಿ ಡಾ| ಪಿ. ದಯಾನಂದ ಪೈ ಎಲ್ಲರಿಗೂ ಪ್ರೇರಣೆ ಯಾಗಿ ದ್ದಾರೆ ಎಂದರು.

ಪೈಗಳ ಕೊಡುಗೆ ಮಹತ್ತರ
ವಿಶ್ವ ಕೊಂಕಣಿ ಕೇಂದ್ರ ವಿದ್ಯಾರ್ಥಿ ನಿಧಿಯ ಸಂಚಾಲಕರಾದ ಪ್ರದೀಪ್‌ ಜಿ. ಪೈ ಮಾತನಾಡಿ, ವಿಶ್ವ ಕೊಂಕಣಿ ಕೇಂದ್ರ ಸಾಕಾರಗೊಳ್ಳುವಲ್ಲಿ ದಯಾ ನಂದ ಪೈಗಳ ಕೊಡುಗೆ ಮಹತ್ತರ ಎಂದರು.

ಸಾರ್ಥಕ್ಯದ ಬದುಕು
ನಮ್ಮದಾಗಬೇಕು
ಸಮಾಜದಲ್ಲಿ ಸಂಕಷ್ಟದಲ್ಲಿರುವ, ಅಸಹಾಯಕರಿಗೆ ಸ್ಪಂದಿಸಿ ಅವರ ಕಣ್ಣೀರು ಒರೆಸಿದಾಗ ಅವರ‌ ಸಂಭ್ರಮ ಕ್ಷಣಗಳಲ್ಲಿ ನಮ್ಮ ಬದುಕಿನ ಸಾರ್ಥಕತೆ ಆಡಗಿದೆ ಎಂದು ಸಮ್ಮಾನ ಸ್ವೀಕರಿಸಿದ ಡಾ| ಪಿ. ದಯಾನಂದ ಪೈ ಹೇಳಿದರು. ವಿಶ್ವಕೊಂಕಣಿ ಕೇಂದ್ರದ ಸಮಾಜ ಮುಖೀ ಕಾರ್ಯಗಳಿಗೆ ಅವ ರು 1 ಕೋ.ರೂ. ನೆರವು ಘೋಷಿಸಿದರು.

Advertisement

ಸಮ್ಮಾನ
ಡಾ| ಪಿ. ದಯಾನಂದ ಪೈ ಹಾಗೂ ಮೋಹಿನಿ ಡಿ. ಪೈ ಅವರನ್ನು ಶಾಲು ಹೊದೆಸಿ, ಹಾರಾರ್ಪಣೆಗೈದು, ಸ್ಮರಣಿಕೆ
ನೀಡಿ ಡಾ| ಪಿ.ಎಸ್‌. ಯಡಪಡಿ ತ್ತಾಯ, ವಿಶ್ವಕೊಂಕಣಿ ಕೇಂದ್ರ ಅಧ್ಯಕ್ಷ ನಂದಗೋಪಾಲ ಶೆಣೈ, ಉಪಾಧ್ಯಕ್ಷರಾದ ಗಿಲ್ಬರ್ಟ್‌ ಡಿ’ಸೋಜಾ, ಕುಡಿ³ ಜಗದೀಶ ಶೆಣೈ ಹಾಗೂ ಮೆಲ್ವಿನ್‌ ರೊಡ್ರಿಗಸ್‌, ಡಾ| ಕೆ. ಮೋಹನ ಪೈ, ಬಿ.ಆರ್‌. ಭಟ್‌, ಶಕುಂತಳಾ ಆರ್‌. ಕಿಣಿ ಸಮ್ಮಾನಿಸಿದರು. ಸಂಸದ ನಳಿನ್‌ ಕುಮಾರ್‌ ಕಟೀಲು, ಕ್ಷಮತಾ ಯು ಗೆಟ್‌ಇನ್‌ ಮುಖ್ಯಸœ ಕೆ. ಉಲ್ಲಾಸ್‌ ಕಾಮತ್‌ ಅವರು ವರ್ಚುವಲ್‌ ಮೂಲಕ ಶುಭ ಹಾರೈಸಿದರು. ಕೇಂದ್ರದ ಕಾರ್ಯದರ್ಶಿ ಗಿರಿಧರ್‌ ಕಾಮತ್‌ ಅಭಿನಂದನಾ ನಿರ್ಣಯ ವಾಚಿಸಿದರು.ವಿಶ್ವ ಕೊಂಕಣಿ ಸೋಶಿಯಲ್‌ ಸಪೋರ್ಟ್‌ ಪೋರ್ಟಲ್‌ ಅನ್ನು ಪಿ. ಸತೀಶ್‌ ಪೈ ಬಿಡುಗಡೆಗೊಳಿಸಿದರು.

ಸತೀಶ್‌ ಪೈ ಹಾಗೂ ಪಿ. ಸಬಿತಾ ಎಸ್‌. ಪೈ ಅವರನ್ನು ಸಮ್ಮಾನಿಸಲಾಯಿತು. ಪಿ. ರವೀಂದ್ರ ಪೈ ಹಾಗೂ ಪಿ. ಅಶ್ವಿ‌ನಿ ಪೈ ಉಪಸ್ಥಿತರಿದ್ದರು. ಸಮಾರಂಭ ಆರಂಭಕ್ಕೆ ಮೊದಲು ವಿಶ್ವ ಕೊಂಕಣಿ ಕೇಂದ್ರದಲ್ಲಿ ಬಸ್ತಿ ವಾಮನ ಶೆಣೈ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿ, ಗುರುದತ್ತ ಬಂಟ್ವಾಳ ವಂದಿಸಿದರು.

ಬಸ್ತಿ ಪುತ್ಥಳಿ ಸ್ಥಾಪನೆಗೆ ಮನವಿ
ನಾನು ಎಂದೂ ಹುಟ್ಟು ಹಬ್ಬ ಆಚರಿಸಿದವನಲ್ಲ. ಆದರೆ ನನ್ನ 77ನೇ ಹುಟ್ಟುಹಬ್ಬದ ಸಮಯದಲ್ಲಿ ನನ್ನ ಪ್ರತಿಜ್ಞೆಗೆ ಭಂಗವಾಗಿದೆ ಎಂದು ಡಾ| ಪಿ. ದಯಾನಂದ ಪೈ ಹೇಳಿದರು. ವಿಶ್ವಕೊಂಕಣಿ ಕೇಂದ್ರದ ಪ್ರಮುಖ ರೂವಾರಿ, ಕೊಂಕಣಿ ಭಾಷೆ,ಸಾಹಿತ್ಯ, ಸಂಸ್ಕೃತಿಗಾಗಿ ಶ್ರಮಿಸಿದ ಬಸ್ತಿ ವಾಮನ ಶೆಣೈ ಅವರ ಅಳೆದೆತ್ತರದ ಪುತ್ಥಳಿಯನ್ನು ಸ್ಥಾಪಿಸುವಂತೆ ಸಲಹೆ ಮಾಡಿದರು.

ಪ್ರಶಸ್ತಿ ಘೋಷಣೆ
ದಯಾನಂದ ಪೈ ಅವರ 77ನೇ ಹುಟ್ಟುಹಬ್ಬದ ಸಂದರ್ಭದ ಪ್ರಯುಕ್ತ ಪ್ರತೀವರ್ಷ ಡಾ| ಪಿ. ದಯಾನಂದ ಪೈ ವಿಶ್ವಕೊಂಕಣಿ ಸಾಹಿತ್ಯ ಅನುವಾದ ಪ್ರಶಸ್ತಿ ಹಾಗೂ ಡಾ| ಪಿ. ದಯಾನಂದ ಪೈ ರಂಗಶ್ರೇಷ್ಠ ಪ್ರಶಸ್ತಿ ನೀಡಲಾಗುವುದು ಹಾಗೂ ಪ್ರಶಸ್ತಿ ತಲಾ 1 ಲಕ್ಷ ರೂ. ಮೊತ್ತವನ್ನು ಹೊಂದಿದೆ ಎಂದು ನಂದಗೋಪಾಲ ಶೆಣೈ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next