Advertisement

ಮಾದರಿ ವಿದ್ಯುತ್‌ ಗ್ರಾಮ ಪರಿವರ್ತನೆ ಯೋಜನೆ ಜಾರಿ

11:15 AM Sep 04, 2017 | Team Udayavani |

ಮಂಡ್ಯ: ರಾಜ್ಯದ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಮಾದರಿ ವಿದ್ಯುತ್‌ ಗ್ರಾಮಗಳನ್ನಾಗಿ ಪರಿವರ್ತಿಸುವ ಹೊಸ ಯೋಜನೆಯೊಂದನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.

Advertisement

2017-18ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ವಿದ್ಯುತ್ಛಕ್ತಿ ಸಮರ್ಥ ಬಳಕೆಗೆ ಇಂಧನ ಸಚಿವಾಲಯ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದೀಗ ಪ್ರತಿಯೊಂದು ವಿಧಾನಸಭಾ ಸದಸ್ಯರ ಮತ ಕ್ಷೇತ್ರ ವ್ಯಾಪ್ತಿಯ ಐದು ಗ್ರಾಮಗಳನ್ನು ಮಾದರಿ ವಿದ್ಯುತ್‌ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲು ಉದ್ದೇಶಿಸಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯುತ್‌ ವಿತರಣಾ ಜಾಲದ ವ್ಯವಸ್ಥೆಯ ಬಗ್ಗೆ ಸಾಕಷ್ಟು ಅಸಮಾಧಾ ನದ ಮಾತುಗಳು ಕೇಳಿಬರುತ್ತಿದೆ. ಸಮರ್ಪಕ ವಿದ್ಯುತ್‌ ಸರಬರಾಜಿಲ್ಲದೆ ಹಳ್ಳಿಗಾಡಿನ ಜನರು ಸಾಕಷ್ಟು ಪರಿತಪಿಸುತ್ತಿದ್ದಾರೆ. ವಿದ್ಯುತ್‌ ಅಡಚಣೆಯಿಂದ ಕುಡಿಯುವ ನೀರು ಸೇರಿ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ವಿದ್ಯುತ್‌ ವ್ಯತ್ಯಯದಿಂದಾಗಿ ಗ್ರಾಮೀಣ ಜನರು ಅನುಭವಿಸುತ್ತಿರುವ ಸಂಕಷ್ಟ ನಿವಾರಿ ಸುವ ಉದ್ದೇಶದಿಂದ ವಿದ್ಯುತ್‌ ಬಳಕೆಯ ನಿಖರತೆ, ಪೋಲು ತಡೆಗಟ್ಟುವುದು, ತ್ರೀಫೇಸ್‌ ವಿತರಣಾ ಮಾರ್ಗ, ನಿರಂತರ ವಿದ್ಯುತ್‌ ಪೂರೈಕೆ ಮಾಡುವ ಮೂಲಕ ವಿದ್ಯುತ್‌ ವಿತರಣಾ ಜಾಲದಲ್ಲಿ ಸುಧಾರಣೆಗೆ ಮುಂದಾಗಿದೆ.

ವಿತರಣಾ ವ್ಯವಸ್ಥೆ ಬಲವರ್ಧನೆ: ಮಾದರಿ ವಿದ್ಯುತ್‌ ಗ್ರಾಮ ಹೇಗಿರಬೇಕೆಂಬ ಪರಿಕಲ್ಪನೆ ಗಳೊಂದಿಗೆ ಇಂಧನ ಸಚಿವಾಲಯ ಈ ಯೋಜನೆ ಜಾರಿಗೆ ತರುತ್ತಿದೆ. ಪ್ರತಿ ಮಾದರಿ ವಿದ್ಯುತ್‌ ಗ್ರಾಮದಲ್ಲಿ ವಿತರಣಾ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಿ, ಸುಸ್ಥಿತಿಯಲ್ಲಿರುವಂತೆ ಕಾಪಾಡುವುದು. ಆ ಗ್ರಾಮಗಳ ಬೀದಿ ದೀಪಗ ಳಿಗೆ ಎಲ್‌ಇಡಿ, ಸೋಲಾರ್‌ ದೀಪ ಹಾಗೂ ಟೈಮರ್‌ ಸ್ವಿಚ್‌ಗಳನ್ನು ಅಳವಡಿಸಲು ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವುದು. ವಿದ್ಯುತ್‌ ಹೊರೆಗೆ ಅನುಗುಣವಾಗಿ ವಿದ್ಯುತ್‌ ಪರಿವರ್ತಕ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ಸ್ಥಾವರಗಳಿಗೆ ಮಾಪಕ ಅಳವಡಿಕೆ: ಪ್ರತಿ ಮಾದರಿ ವಿದ್ಯುತ್‌ ಗ್ರಾಮಗಳಲ್ಲೂ ಎಲ್ಲಾ ಸ್ಥಾವರಗಳಿಗೂ ಮಾಪಕ ಅಳವಡಿಸಿ ವಿದ್ಯುತ್‌ ಬಳಕೆಯನ್ನು ನಿಖರವಾಗಿ ದಾಖಲಿಸುವಂತೆ ಖಾತ್ರಿಪಡಿಸಿ ಕೊಳ್ಳಲಾಗುವುದು. ವಿದ್ಯುತ್‌ ಪೋಲಾಗುವು ದನ್ನು ತಡೆದು, ಎಲ್ಲಾ ಕಡೆಗಳಲ್ಲಿ ತ್ರೀ-ಫೇಸ್‌ ವಿತರಣಾ ಮಾರ್ಗ ರಚಿಸಲು ನಿರ್ಧರಿಸಿದೆ. ವಿದ್ಯುತ್‌ ಗ್ರಾಮಗಳಲ್ಲಿ 24 ಗಂಟೆಗಳ ಕಾಲ ವಿದ್ಯುತ್ಛಕ್ತಿ ಲಭ್ಯತೆಗಾಗಿ ವಿಕೇಂದ್ರೀಕೃತ ವಿತರಣಾ ಉತ್ಪಾದನೆ ಮೂಲಕ ಉತ್ಪಾದನೆಗೆ ಅಗತ್ಯ ಕ್ರಮ ವಹಿಸುವುದಲ್ಲದೆ, ಸ್ಥಾವರಗಳ ವಿದ್ಯುತ್ಛಕ್ತಿ ಬಳಕೆಗೆ ಬಿಲ್‌ ನೀಡಿ ಶೇ.100ರಷ್ಟು ಕಂದಾಯ ವಸೂಲಾತಿಗೆ ಮೊಬೈಲ್‌ ವ್ಯಾನ್‌ ಅಥವಾ ಇತರೆ ವ್ಯವಸ್ಥೆಯಡಿ ಕ್ರಮ ಕೈಗೊಳ್ಳಲು ಮುಂದಾಗಿದೆ. ಯಾವುದೇ ರೀತಿಯ ಅಪಾಯಕಾರಿ ಸ್ಥಿತಿಯ ಲ್ಲಿರುವ ವಿದ್ಯುತ್‌ ಮಾರ್ಗ, ವಿದ್ಯುತ್‌ ಕಂಬ,  ವಿದ್ಯುತ್‌ ಪರಿವರ್ತಕ ಇತ್ಯಾದಿಗಳನ್ನು ಸರಿಪಡಿಸಿ ಅಪಘಾತ ರಹಿತ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸುವುದರೊಂದಿಗೆ ವಿದ್ಯುತ್‌ ಅಡಚಣೆ ರಹಿತ ಗ್ರಾಮಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ. ವಿದ್ಯುತ್‌ ವಿತರಣಾ ಜಾಲದ ವ್ಯವಸ್ಥೆ, ಸುಧಾರಣಾ ಕಾರ್ಯಕ್ರಮಗಳನ್ನು ಅತಿ ಅವಶ್ಯವಿರುವ ಗ್ರಾಮಗಳಲ್ಲಿ ಕೈಗೊಳ್ಳುವುದಕ್ಕೆ ಆದ್ಯತೆ ನೀಡುವುದು ಯೋಜನೆಯ ಮೂಲ ಉದ್ದೇಶವಾಗಿದೆ.

Advertisement

ಪ್ರತಿ ವಿದ್ಯುತ್‌ ಸರಬರಾಜು ಕಂಪನಿಗಳು ತಮ್ಮ ಕಂಪನಿ ವ್ಯಾಪ್ತಿಯ ಶಾಸಕರೊಂದಿಗೆ ಚರ್ಚಿಸಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಗ್ರಾಮಗಳನ್ನು
ಆಯ್ಕೆ ಮಾಡಬೇಕಿದೆ. ಆಯ್ಕೆಯಾಗುವ ಗ್ರಾಮಗಳನ್ನು ಮಾದರಿ ವಿದ್ಯುತ್‌ ಗ್ರಾಮಗಳನ್ನಾಗಿ ಪರಿವರ್ತಿಸಲು ಕಾರ್ಯಸೂಚಿಗಳನ್ನು
ಸಿದ್ಧಪಡಿಸಿ, ಅನುಷ್ಠಾನಗೊಳಿಸುವಂತೆಯೂ ಇಂಧನ ಸಚಿವಾಲಯ ಸೂಚನೆ ನೀಡಿದೆ. ಬಂಡವಾಳ ಕಾಮಗಾರಿಯಡಿ ವೆಚ್ಚ ನೂತನ ಯೋಜನೆಯನ್ನು ಅನುಷ್ಠಾನಗೊಳಿಸಲು ವೆಚ್ಚವಾಗುವ ಹಣವನ್ನು ವಿದ್ಯುತ್‌ ಸರಬರಾಜು ಕಂಪನಿಗಳು ತಮ್ಮ ಕಂಪನಿಯ ಬಂಡವಾಳ ಕಾಮಗಾರಿ ಯೋಜನೆಯಡಿ
ಭರಿಸುವಂತೆ ತಿಳಿಸಲಾಗಿದೆ. ವಿದ್ಯುತ್‌ ನಷ್ಟವಾಗದಂತೆ ತಡೆಯುವುದು, ವಿತರಣಾ ವ್ಯವಸ್ಥೆ ಯಲ್ಲಿ ಸುಧಾರಣೆ ತರುವ, ವಿದ್ಯುತ್‌ ಉಳಿತಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾದರಿ ಗ್ರಾಮಗಳನ್ನು ರೂಪಿಸಲು ನಿರ್ಧರಿಸಿದೆ. ಯೋಜನೆ ಯಶಸ್ಸು ಕಂಡಲ್ಲಿ ಎಲ್ಲಾ ಗ್ರಾಮಗಳನ್ನು ಮಾದರಿ ವಿದ್ಯುತ್‌ ಗ್ರಾಮಗಳನ್ನಾಗಿ ಪರಿವರ್ತಿಸಲು ಇಂಧನ ಸಚಿವಾಲಯ ನಿರ್ಧರಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next