Advertisement

ನಗರದಲ್ಲಿ ನಿರ್ಮಾಣವಾಗಲಿ ಮಾದರಿ ಸೇತುವೆ

07:42 AM Feb 03, 2019 | Team Udayavani |

ತಂತ್ರಜ್ಞಾನ ಮುಂದುವರಿದಂತೆ, ಆಧುನಿಕತೆ ಓಡುತ್ತಿದ್ದಂತೆ ನಾವು ಅದಕ್ಕೆ ತಕ್ಕ ಹೆಜ್ಜೆ ಹಾಕುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಈ ರೀತಿಯಾಗಿ ಇರದೆ ಹೋದರೆ ನಮ್ಮ ಕೆಲಸದ ವೇಗವನ್ನು ತಲುಪಲು ಅಸಾಧ್ಯ. ಇಂದು ಹೆಚ್ಚಾಗಿ ಮೊಬೈಲ್, ಲ್ಯಾಪ್‌ಟಾಪ್‌ ಗಳಲ್ಲಿಯೇ ಕೆಲಸ ಮಾಡುತ್ತಿರುವುದರಿಂದ ನಗರಗಳನ್ನು ಸುತ್ತಾಡಿಕೊಂಡು ಹವ್ಯಾಸದ ರೀತಿಯಲ್ಲಿ ಕೆಲಸ ಮಾಡುವವರು, ಇಂದು ಹೆಚ್ಚಿನ ಸಂಖ್ಯೆಯಲ್ಲೇ  ಇದ್ದಾರೆ. ಇನ್ನೂ ಕೆಲವು ತುಂಬಾ ಬ್ಯುಸಿ ಶೆಡ್ನೂಲ್‌ನಲ್ಲಿರುವ
ವ್ಯಕ್ತಿಗಳು ನಗರದಲ್ಲಿ ಯಾವುದೋ ಸಿನೆಮಾ ಬಗ್ಗೆ ಆಥವಾ ಬೇರೆ ಯಾವುದೋ ಪ್ರಾಜೆಕ್ಟ್ ಬಗ್ಗೆ ಚರ್ಚಿಸಲು, ತುರ್ತಾಗಿ ಕಳಿಸಬೇಕಾದ ಲೇಖನಗಳನ್ನು ನಗರದೊಳಗೆ ಕುಳಿತು ಬರೆಯಲು ಸೂಕ್ತ ಸ್ಥಳದ ಕೊರತೆ ಕಾಣಬಹುದು. 

Advertisement

ಸದ್ಯ ನಮ್ಮ ನಗರಗಳಲ್ಲಿ ಕೆಲವೊಂದು ಬಸ್‌ ಸ್ಟಾಂಡ್‌ ಗಳು ಮತ್ತು ಮಾಲ್‌ಗ‌ಳ ಫ‌ುಡ್‌ ಕೋರ್ಟ್‌ಗಳು ಕಣ್ಣಿಗೆ ಕಾಣಿಸುತ್ತವೆ. ಆದರೆ ಅಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ನಮ್ಮ ಏಕಾಂತಕ್ಕೆ ಭಂಗವಾಗಬಹುದು, ಇಲ್ಲವೇ ನಮಗೆ‌ ಹೊಳೆವ ಯೋಚನೆಗಳು ಅಲ್ಲಿ ಗೌಜು ಗದ್ದಲಕೆ ಟುಸ್ಸಾಂತ ಮಾಯವಾಗಿಬಿಡಬಹುದು. ಇನ್ನೂ ಮಾಲ್‌ಗ‌ಳಲ್ಲಿ ತುಂಬಾ ಹೊತ್ತು ಕುಳಿತರೆ ಮಾಲ್‌ ಸುಪರ್‌ ವೈಸರ್‌ಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಈಯೋಜನೆ ಈಗಾಗಲೇ ವಿದೇಶಗಳಲ್ಲಿ ಮನ್ನಣೆ ಪಡೆದುಕೊಂಡಿದೆ ಎಂಬುದು ಗಮನಾರ್ಹವಾದುದು. ಸೇತುವೆಗಳು ನಮಗೆ ಸಂಚಾರಕ್ಕೆಂದು ಕಂಡರೆ ಅಮೆರಿಕದ ಕ್ಯಾಲಿಪೋರ್ನಿಯಾದ ಅಟ್ವಾಟರ್‌ ವಿಲೇಜ್‌ ಎಂಬಲ್ಲಿ ಉದ್ಯೋಗಿಗಳು, ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಅಳವಡಿಸಿಕೊಂಡಿದ್ದಾರೆ.

ಸನ್ನಿನುಕ್‌ ಬ್ರಿಡ್ಜ್ ಎನ್ನುವ ಈ ಸೇತುವೆ ನಗರದವಾಸಿಗಳ ಬಗ್ಗೆ ಮೇಲೆ ಹೇಳಿರುವ ಸಮಸ್ಯೆಗಳಿಗೆ ಕಂಡುಕೊಂಡ ಪರಿಹಾರವಾಗಿದೆ. ಏನಿದು ಸನ್ನಿನುಕ್‌ ಬ್ರಿಡ್ಜ್ ಈ ಸನ್ನಿನುಕ್‌ ಬ್ರಿಡ್ಜ್ ನ್ನು ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ನಗರಗಳಲ್ಲಿ ಕೆಲಸ ಮಾಡಲು ಸೂಕ್ತವಾಗುವಂತೆ ನಿರ್ಮಿಸಲಾಗಿದೆ. ಈ ಬ್ರಿಡ್ಜ್ ಜನರು ನಡೆದಾಡುವ ಸೇತುವೆಯ ರೀತಿಯಲ್ಲಿ ಕಂಡರೂ ಇಲ್ಲಿ ಮೇಜುಗಳು ಇವೆ. ಉಚಿತ ವೈಫೈ, ಕಾಫಿ ಡೇಗಳು ಮತ್ತು ಮೊಬೈಲ್‌, ಲ್ಯಾಪ್‌ಟಾಪ್‌ ಗಳನ್ನು ಚಾರ್ಜ್‌ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ರೀತಿಯ ವ್ಯವಸ್ಥೆಗಳು ಒಂದೇ ಕಡೆಯಲ್ಲಿ ಸಿಗುವುದರಿಂದ ಉದ್ಯೋಗಿಗಳ, ವಿದ್ಯಾರ್ಥಿಗಳು ನಗರದ ಸೌಂದರ್ಯವನ್ನು ಸವಿಯುವುದರ ಜತೆಗೆ ತಮ್ಮ ಆಕಾಡೆಮಿಕ್‌ ಕೆಲಸ ಗಳನ್ನು ನಿರ್ವಹಿಸಬಹುದು. ಈ ಸೇತುವೆಯೂ ಆಹ್ಲಾದಕರ ವಾತಾವರಣ ಹೊಂದಿದ್ದು, ಉದ್ಯೋಗಿಗಳು ಕುಳಿತು ಚರ್ಚಿಸಲು ಯೋಗ್ಯ ಸ್ಥಳವೆಂದೇ ಹೇಳಬಹುದು. 

ಇದೊಂದು ರೀತಿಯಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸುವ ಕ್ರಮವೂ ಕೂಡ ಹೌದು, ಅಲ್ಲದೇ ಡಿಜಿಟಲ್‌ ವ್ಯವಸ್ಥೆಯನ್ನು ಸರಿಯಾಗಿ ಅಳವಡಿಸಿಕೊಂಡಿರುವುದಕ್ಕೆ ಇದೊಂದು ಮಾದರಿಯ ನಡೆಯೂ ಹೌದು. ಅಂತೇಯೇ ಇಂದು ಸ್ಮಾರ್ಟ್‌ಸಿಟಿ ನಗರಗಳ ಪಟ್ಟಿಯಲ್ಲಿರುವ ಮಂಗಳೂರು ನಗರವೂ ಕೂಡ ಡಿಜಿಟಲ್‌ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ, ಸ್ಮಾರ್ಟ್‌ಸಿಟಿಯಾಗುವತ್ತ ಹೊರಟಿದೆ.
ಈ ನಿಟ್ಟಿನಲ್ಲಿ ನಗರದಲ್ಲಿ ಕೂಡ ಸನ್ನಿನುಕ್‌ ಬ್ರಿಡ್ಜ್ ಮಾದರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಆಡಳಿತ ವ್ಯವಸ್ಥೆ ಮನಸು ಮಾಡಬೇಕಿದೆ. 

Advertisement

ವಿಶ್ವಾಸ್‌ ಅಡ್ಯಾರು

Advertisement

Udayavani is now on Telegram. Click here to join our channel and stay updated with the latest news.

Next