ಮುಂಬಯಿ: ಪ್ರತಿಷ್ಠಿತ ಮೋಡೆಲ್ ಕೋ-ಆಪರೇಟಿವ್ ಬ್ಯಾಂಕ್ ಇದರ ಸ್ಥಳಾಂತರಿತ ಮುಲುಂಡ್ ಪಶ್ಚಿಮದ ಶಾಖೆಯು ಮಾ. 22 ರಂದು ಪೂರ್ವಾಹ್ನ ಮುಲುಂಡ್ ಪಶ್ಚಿಮದ ನಾಹೂರ್ ರಸ್ತೆಯಲ್ಲಿನ ಕಂಡೊç ಅಪಾರ್ಟ್‌ಮೆಂಟ್‌ನಲ್ಲಿ ಲೋಕಾರ್ಪಣೆಗೊಂಡಿತು.
ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯು. ಡಿ’ಸೋಜಾ ಸಾರಥ್ಯದಲ್ಲಿ ಜರಗಿದ ಸರಳ ಕಾರ್ಯಕ್ರಮದಲ್ಲಿ ಮುಂಬಯಿ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಾನೆಟ್ ಲಾರೆನ್ಸ್ ಡಿ’ಸೋಜಾ ಅತಿಥಿಯಾಗಿ ಪಾಲ್ಗೊಂಡು ರಿಬ್ಬನ್ ಕತ್ತರಿಸಿ ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿದರು. ಸೈಂಟ್ ಪಾಯಸ್-10 (ಟೆಂಥ್) ಚರ್ಚ್ ಮುಲುಂಡ್
ಇದರ ಪ್ರಧಾನ ಧರ್ಮಗುರು ರೆ| ಫಾ| ಜಾರ್ಜ್ ಅಥೈಡೆ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿ, ಶಾಖೆಯ ಸೇವೆಗಳಿಗೆ ಚಾಲನೆ ನೀಡಿದರು.
ಉಪಸ್ಥಿತ ಗಣ್ಯರಿಗೆ ಆಲ್ಬರ್ಟ್ ಡಿ’ಸೋಜಾ ಪುಷ್ಪಗುತ್ಛವನ್ನಿತ್ತು ಗೌರವಿಸಿ, ಶಾಖೆ ವಿಶಾಲವಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಅತ್ಯಾಧುನಿಕ ಸುಸಜ್ಜಿತ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಶಾಖೆಯು ಪಕ್ಕದಲ್ಲಿ ವಾರದ 24 ಗಂಟೆಗಳ ಕಾಲ ಪೂರ್ಣಕಾಲಿಕ ನಗದು ಮತ್ತು ಮರುಬಳಕೆಯ (ಎಟಿಎಂ ಕಮ್ ಕ್ಯಾಶ್ ರಿಸೈಕ್ಲರ್) ಯಂತ್ರ ಹೊಂದಿದೆ. ಇದು ಬ್ಯಾಂಕ್‌ನ ಗ್ರಾಹಕರಿಗೆ ಮತ್ತು ಇತರ ಗ್ರಾಹಕರಿಗೆ ನಗದು ಸಂಬಂಧಿತ ಚಟುವಟಿಕೆಗಳಿಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತದೆ. ಶಾಖೆಯಲ್ಲಿ ವಿನಯಶೀಲ ಸಿಬಂದಿಯಿದ್ದು, ಗ್ರಾಹಕರ ಅಗತ್ಯಗಳನ್ನು ತಮ್ಮ ವಹಿವಾಟು ನಿಶಾನೆ (ಟ್ರೇಡ್‌ಮಾರ್ಕ್) ವೃತ್ತಿಪರ ಮತ್ತು ತ್ವರಿತ ಸೇವೆಯೊಂದಿಗೆ ಪೂರೈಸಲಿದ್ದಾರೆ. ಶಾಖೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದು ತಿಳಿಸಿದರು.
ಈ ಸಂದರ್ಭ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇಶಕರಾದ ಸಿಎ ಪೌಲ್ ನಝರೆತ್, ಅಬ್ರಹಾಂ ಕ್ಲೇಮೆಂಟ್ ಲೋಬೋ, ಸಂಜಯ್ ಶಿಂಧೆ, ಲಾರೆನ್ಸ್ ಡಿ’ಸೋಜಾ, ಜೆರಾಲ್ಡ್ ಕರ್ಡೊಜಾ ಶುಭ ಕೋರಿದರು. ಸಹಾಯಕ ಪ್ರಧಾನ ಪ್ರಬಂಧಕ ನರೇಶ್ ಠಾಕೂರ್, ಉನ್ನತಾಧಿಕಾರಿಗಳು, ವಿವಿಧ ಶಾಖೆಗಳ ಮುಖ್ಯಸ್ಥರು, ಬ್ಯಾಂಕ್‌ನ ಷೇರುದಾರರು, ಸ್ಥಾನೀಯ ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದರು. ಬ್ಯಾಂಕ್‌ನ ಪ್ರಧಾನ ಪ್ರಬಂಧಕ ಝೆನೊನ್ ಡಿ’ಕ್ರೂಜ್ ಸ್ವಾಗತಿಸಿ, ಬೈಬಲ್ ವಾಚಿಸಿದರು. ಪ್ರಧಾನ ಪ್ರಬಂಧಕ ಓಸ್ಡೆನ್ ಫೂನ್ಸೆಕಾ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್