Advertisement

ಆನೆ ಮೇಲೆ ಮಲಗಿ ಬೆತ್ತಲೆ ಫೋಟೊ…ಮಾಡೆಲ್ ಮಂಗಾಟಕ್ಕೆ ಟೀಕೆಗಳ ಸುರಿಮಳೆ

01:57 PM Feb 20, 2021 | Team Udayavani |

ಬಾಲಿ : ರಷ್ಯಾ ಮೂಲದ ಮಾಡೆಲ್ ಅಲೆಸ್ಯ ಕಾಫೆಲ್ನಿಕೋವಾ ಯಡವಟ್ಟು ಮಾಡಿಕೊಂಡಿದ್ದಾರೆ.  ಅಳಿವಿನಂಚಿನಲ್ಲಿರುವ ಸುಮಾತ್ರನ್ ಆನೆ ಮೇಲೆ ಬೆತ್ತಲೆ ಮಲಗಿ ಪ್ರಾಣಿ ಪ್ರೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement

ಇತ್ತೀಚಿಗೆ ಇಂಡೋನೇಷಿಯಾದ ಬಾಲಿಗೆ ಹಾರಿದ್ದ ಅಲೆಸ್ಯ, ಅಲ್ಲಿ ಹೊಸ ಫೋಟೊ ಶೂಟ್ ನಡೆಸಿದ್ದರು. 2012 ರಿಂದ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿದ ಸುಮಾತ್ರನ್ ಆನೆ ಮೇಲೆ ವಿವಸ್ತ್ರಳಾಗಿ ಮಲಗಿ ಕ್ಯಾಮರಾಗಳಿಗೆ ಪೋಸ್ ನೀಡಿದ್ದರು. ಈ ಶೂಟ್ ನ ವಿಡಿಯೋ ತುಣುಕೊಂದನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಅಲೆಸ್ಯ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರೀ ವಿರೋಧ ಪಡೆದುಕೊಂಡಿತು. ಆಕೆಯ ಹುಚ್ಚಾಟಕ್ಕೆ ಕೆಂಡಾಮಂಡಲಗೊಂಡ ಪ್ರಾಣಿದಯಾ ಸಂಘದವರು, ಪರಿಸರ ಪ್ರೇಮಿಗಳು ಇದೊಂದು ಅತಿರೇಕದ ವರ್ತನೆ ಎಂದು ಖಂಡಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಅಲೆಸ್ಯಾ ತಮ್ಮ ಇನ್ಸ್ಟಾ ಖಾತೆಯಿಂದ ವಿಡಿಯೋ ಡಿಲೀಟ್ ಮಾಡಿದ್ದಾರೆ.

ವಿಡಿಯೋ ಡಿಲೀಟ್ ಮಾಡಿದ ನಂತರವೂ ಕೇಳಿ ಬಂದ ಟೀಕೆಗಳಿಂದ ಪಾರಾಗಲು ಮತ್ತೊಂದು ಫೋಟೊ ಶೇರ್ ಮಾಡಿದ್ದಾರೆ ಅಲೆಸ್ಯ. ಈ ಚಿತ್ರದಲ್ಲಿ ಆನೆಯೊಂದಕ್ಕೆ ಸ್ನಾನ ಮಾಡಿಸುತ್ತಿದ್ದಾರೆ. ಈ ಚಿತ್ರದೊಂದಿಗೆ ತಮ್ಮ ಪ್ರಮಾದದ ಕುರಿತು ಸ್ಪಷ್ಟನೆ ನೀಡಿರುವ ಆಕೆ, ನಾನು ಪ್ರಾಣಿ ಪ್ರೇಮಿ. ಈ ಹಿಂದೆ ಪ್ರಾಣಿಗಳ ಸಂರಕ್ಷಣೆಗೆ ಸಾಕಷ್ಟು ದಾನ ಮಾಡಿರುವುದು ಯಾರಿಗೂ ಕಾಣಿಸುವುದಿಲ್ಲ. ನಾನು ಪ್ರಾಣಿಗಳನ್ನು ತುಂಬ ಪ್ರೀತಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next