Advertisement

ಅತ್ತ ಅಣಕು ಪ್ರದರ್ಶನ; ಇತ್ತ ರಿಯಲ್‌ ಘಟನೆ

06:27 AM Feb 20, 2019 | |

ಬೆಂಗಳೂರು: ಅತ್ತ ವಿಮಾನಗಳ ದುರಂತ ಸಂಭವಿಸಿದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅಣಕು ಪ್ರದರ್ಶನ ನಡೆಯುತ್ತಿತ್ತು. ಇತ್ತ ಆ ಘಟನೆಯೇ ನಿಜರೂಪದಲ್ಲಿ ಸಂಭವಿತ್ತು. – ನಗರದಲ್ಲಿ ಮಂಗಳವಾರ ಈ ಕಾಕತಾಳೀಯ ನಡೆದಿದೆ.

Advertisement

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಲ್ಫಾ-3ರಲ್ಲಿ ಬೆಳಗ್ಗೆ 9.30ರಿಂದ 11.30ರವರೆಗೆ ವಿಮಾನ ದುರಂತಗಳು ಸಂಭವಿಸಿದಾಗ, ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿಗೆ ತಿಳಿವಳಿಕೆ ನೀಡಲಾಗುತ್ತಿತ್ತು.

ಇದೇ ಸಮಯಕ್ಕೆ ಸೂರ್ಯಕಿರಣ ಪತನದ ಸುದ್ದಿ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದವರಿಗೆ ತಲುಪಿತು. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. “ನಮ್ಮಲ್ಲಿ ಸುಮಾರು 200 ಜನ ಸಿಬ್ಬಂದಿ ಇದ್ದು, ಈ ಪೈಕಿ ಸುಮಾರು 70ರಿಂದ 80 ಜನ ಹಾಗೂ 8-10 ವಾಹನಗಳು ವಿಮಾನ ದುರಂತದ ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯ ಕೈಗೊಂಡರು.

ಬೆಂಕಿ ನಂದಿಸುವುದು, ವಿಮಾನಗಳ ಅವಶೇಷಗಳನ್ನು ಸಂಗ್ರಹಿಸುವುದು, ಪೈಲಟ್‌ಗಳ ರಕ್ಷಣೆಯಲ್ಲಿ ಇವರು ತೊಡಗಿದ್ದರು’ ಎಂದು ಅಗ್ನಿಶಾಮಕ, ತುರ್ತು ಸೇವೆಗಳ ಎಡಿಜಿಪಿ ಸುನೀಲ್‌ ಅಗ‌ರವಾಲ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next