Advertisement

ಪೊಲೀಸ್‌ ಸೋಗಿನಲ್ಲಿ ಮೊಬೈಲ್‌ ಕಳವು; ಬಂಧನ

05:09 AM Jun 25, 2020 | Lakshmi GovindaRaj |

ಬೆಂಗಳೂರು: ಪೊಲೀಸ್‌ ಸಿಬ್ಬಂದಿ ಸೋಗಿನಲ್ಲಿ ಬಂದು ಸಾರ್ವಜನಿಕರ ಮೊಬೈಲ್‌ ಕಳವು ಮಾಡುತ್ತಿದ್ದವನನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಕಲಿ ಪೊಲೀಸ್‌ ಗಾಯಿತ್ರಿನಗರದ ಆರ್‌. ಮಹೇಶ್‌ ನಾಯ್ಕ (42). ಆರೋಪಿಯಿಂದ 2.87 ಲಕ್ಷ ಮೌಲ್ಯದ ವಿವಿಧ ಕಂಪನಿಯ 20 ಮೊಬೈಲ್‌ ಫೋನ್‌ಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಆರೋಪಿ ಕೆಲ ವರ್ಷಗಳಿಂದ ಕಳ್ಳತನ  ಕೃತ್ಯದಲ್ಲಿ ತೊಡಗಿದ್ದು, ಈ ಮೊದಲು ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ರೋಗಿ ಗಳು ಹಾಗೂ ಅವರ ಸಂಬಂಧಿ ಕರು ಚಾರ್ಜ್‌ಗೆ ಹಾಕುತ್ತಿದ್ದ ಮೊಬೈಲ್‌ಗ‌ಳನ್ನು ಕಳವು ಮಾಡುತ್ತಿದ್ದ. 2019 ರಲ್ಲಿ ಜೆ.ಸಿ. ನಗರ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ  ವಾಹನ ಕಳವು ಮಾಡಿ, ನಂಬರ್‌ ಪ್ಲೇಟ್‌ ಬದಲಾಯಿಸಿ ನಕಲಿ ನಂಬರ್‌ ಪ್ಲೇಟ್‌ ಹಾಕಿಕೊಂಡಿ ದ್ದ. ದ್ವಿಚಕ್ರ ವಾಹನದ ಮೇಲೆ ಪೊಲೀಸ್‌ ಎಂದು ಬರೆಸಿಕೊಂಡು ಸಾರ್ವಜನಿಕರಿಗೆ ಪೊಲೀಸ್‌ ಎಂದು ಹೇಳಿಕೊಂಡು ಮೊಬೈಲ್‌  ಫೋನ್‌ಗಳನ್ನು ಕಳವು ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಇತ್ತೀಚೆಗೆ ಆರೋಪಿ ರಸ್ತೆ ಬದಿ ಕಾರು ನಿಲ್ಲಿಸಿಕೊಂಡು ನಿಂತಿದ್ದ ವೇದಮೂರ್ತಿ ಎಂಬವರನ್ನು “ನಾನು ಪೊಲೀಸ್‌ ಆಗಿದ್ದು, ತಮ್ಮ ಅಧಿಕಾರಿಯವರ ಮನೆಗೆ ಬಾಡಿಗೆ  ಕಾರು ಬೇಕಾಗಿರುತ್ತದೆ. ಆದರಿಂದ ನೀವು ನನ್ನ ಜತೆಯಲ್ಲಿ ಬನ್ನಿ’ ಎಂದು ರಾಜಾಜಿನಗರದ 17 ಕ್ರಾಸ್‌ನಲ್ಲಿ ಕರೆದುಕೊಂಡು ಹೋಗಿ ಅಧಿಕಾರಿಗೆ ಕರೆ ಮಾಡಬೇಕೆಂದು ಮೊಬೈಲ್‌ ಪಡೆದು, ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next