ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಶ್ರಾಂತಿ ಪಡೆದ ನಂತರ ಪಕ್ಷ ಸಂಘಟನೆಗಾಗಿ ನಡೆಸಲಿ ರುವ ರಾಜ್ಯ ಪ್ರವಾಸಕ್ಕೆ ರೂಪುರೇಷೆ ತಯಾರಿಸಲಾಗಿದ್ದು ಅದಕ್ಕಾಗಿ “ಐಷಾರಾಮಿ ಸಂಚಾರಿ ಬಸ್’ ಸಜ್ಜಾಗುತ್ತಿದೆ.
ಎಚ್ಡಿಕೆ ಆರೋಗ್ಯ ಗಮನದಲ್ಲಿಟ್ಟುಕೊಂಡು ಹವಾನಿ ಯಂತ್ರಿತ ಸುಸಜ್ಜಿತ ಬಸ್ ವಿಶೇಷವಾಗಿ ವಿನ್ಯಾಸಗೊಳಿ ಸಲಾಗಿದ್ದು, ಊಟ-ತಿಂಡಿ, ವಿಶ್ರಾಂತಿ ಎಲ್ಲದಕ್ಕೂ ಬಸ್ ನಲ್ಲೇ ಅವಕಾಶ ಕಲ್ಪಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಸಿಂಗಾಪುರದಲ್ಲಿ 15 ದಿನ ವಿಶ್ರಾಂತಿ ಪಡೆದು ರಾಜ್ಯಕ್ಕೆ ವಾಪಸ್ಸಾಗಲಿರುವ ಕುಮಾರಸ್ವಾಮಿ, 3 ತಿಂಗಳ ಕಾಲ ನಿರಂತರ ಪ್ರವಾಸ ನಡೆಸಲಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿಯೂ ರಾಜ್ಯ ಪ್ರವಾಸಕ್ಕೆ ಸಾಥ್ ನೀಡಲಿರುವುದು ವಿಶೇಷ.
ದೀಪಾವಳಿ ನಂತರ ರಾಜ್ಯ ಪ್ರವಾಸ ಪ್ರಾರಂಭ ವಾಗಲಿದ್ದು, ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ತೀರ್ಮಾನಿ ಸಲಾಗಿದೆ. ತಾವು ಹುಬ್ಬಳ್ಳಿಯಲ್ಲಿ ಮನೆ ಮಾಡಿ ನಿರಂತರ ಪ್ರವಾಸ ಕೈಗೊಂಡ ನಂತರ ಕಾಂಗ್ರೆಸ್ ಮತ್ತು ಬಿಜೆಪಿಗೆ ಉತ್ತರ ಕರ್ನಾಟಕದ ಬಗ್ಗೆ ಜ್ಞಾನೋದಯ ವಾಗಿ ಆ ಪಕ್ಷಗಳ ನಾಯಕರು ಉತ್ತರ ಕರ್ನಾಟಕದತ್ತ ಮುಖ ಮಾಡಿರುವುದನ್ನೇ ಎಚ್ಡಿಕೆ “ಅಸ್ತ್ರ’ವಾಗಿ ಪ್ರಯೋಗಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಜತೆಗೆ, ದೇವೇಗೌಡರು ಪ್ರಧಾನಿಯಾಗಿದ್ದಾಗ ಉತ್ತರ ಕರ್ನಾಟಕ ಭಾಗಕ್ಕೆ ಕೈಗೊಂಡ ಕಾರ್ಯಕ್ರಮಗಳು ಹಾಗೂ ರಾಜ್ಯದಲ್ಲಿ ಜನತಾದಳ ಹಾಗೂ ಜೆಡಿಎಸ್ ಸರ್ಕಾರದಲ್ಲಿ ರೂಪಿಸಿರುವ ಯೋಜನೆಗಳ ಬಗ್ಗೆ ಕೈಪಿಡಿ ಮುದ್ರಿಸಿ ಜನರಿಗೆ ತಲುಪಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಹೆಸರುಗಳ ಪರಿಶೀಲನೆ: ಬಸ್‌ಯಾತ್ರೆಗೆ ಯಾವ ಹೆಸರಿಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯು ತ್ತಿದ್ದು, “ಈ ಬಾರಿ ಜೆಡಿಎಸ್’, “ನಿಮ್ಮ ಕುಮಾರಣ್ಣ’, “ಕರ್ನಾಟಕಕ್ಕೆ ಜೆಡಿಎಸ್’, “ನಮ್ಮ ಪಥ ಪ್ರಗತಿಯತ್ತ’ ಮತ್ತಿತರ ಹೆಸರುಗಳು ಪರಿಶೀಲನೆಯಲ್ಲಿವೆ.
ಪ್ರಣಾಳಿಕೆಗೆ “ಫೈನಲ್ ಟಚಪ್’: ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯ ಕರಡು ಸಿದ್ಧವಾಗುತ್ತಿದ್ದು, ಸಿಂಗಾಪುರದಲ್ಲಿ ವಿಶ್ರಾಂತಿ ಪಡೆಯುವ ವೇಳೆ ಪ್ರಣಾಳಿಕೆಗೆ ಅಂತಿಮ ಸ್ವರೂಪ ನೀಡಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಹಾಗೂ ರಾಜಕೀಯ ಪಕ್ಷಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಪ್ರಚಾರದಲ್ಲಿರುವುದರಿಂದ ಜೆಡಿಎಸ್ ಐಟಿ ಘಟಕ ಸಹ ಈ ಬಗ್ಗೆ ಸಕ್ರಿಯವಾಗಿದ್ದು ಇದಕ್ಕಾಗಿಯೇ 100 ಮಂದಿಯ ಯುವಕರ ತಂಡ ಸಜ್ಜುಗೊಳಿಸಲಾಗಿದೆ ಎಂದು ತಿಳಿದು ಬಂದಿ.