Advertisement

ಅರ್ಹತೆ ಪಡೆಯಲು ವಿಫಲರಾದ ನಾಲ್ಕು ಬಾರಿಯ ಒಲಿಂಪಿಕ್ಸ್‌ ಚಾಂಪಿಯನ್‌ ಮೋ  ಫರಾ

07:18 AM Jun 27, 2021 | Team Udayavani |

ಮ್ಯಾಂಚೆಸ್ಟರ್‌: ನಾಲ್ಕು ಬಾರಿಯ ಒಲಿಂಪಿಕ್ಸ್‌ ಚಾಂಪಿಯನ್‌, ಇಂಗ್ಲೆಂಡ್‌ನ‌ ಮೋ ಫ‌ರಾ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆಯಲು ವಿಫ‌ಲರಾಗಿದ್ದಾರೆ.

Advertisement

ಮ್ಯಾಂಚೆಸ್ಟರ್‌ನಲ್ಲಿ ನಡೆದ ಬ್ರಿಟಿಷ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ 10 ಸಾವಿರ ಮೀ. ಓಟದಲ್ಲಿ ಅವರಿಗೆ ಅರ್ಹತಾ ಸಮಯದಲ್ಲಿ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ.

27 ನಿಮಿಷ, 28 ಸೆಕೆಂಡ್‌ ಅರ್ಹತಾ ಮಾನದಂಡವಾಗಿತ್ತು. ಆದರೆ ಫ‌ರಾ ಓಟ ಪೂರೈಸಲು 27 ನಿಮಿಷ, 47.4 ಸೆಕೆಂಡ್ಸ್‌ ತೆಗೆದುಕೊಂಡರು. ಈ ಮೂಲಕ ಅವರು ಲಂಡನ್‌ (2012) ಮತ್ತು ರಿಯೋದಲ್ಲಿ (2016) ಪಡೆದ ಅಗ್ರಪಟ್ಟದ ಗೌರವ ಉಳಿಸಿಕೊಳ್ಳಲಾಗದೆ ನಿರಾಸೆ ಅನುಭವಿಸಿದರು.

“ನನ್ನೆಲ್ಲ ಪ್ರಯತ್ನ ಮಾಡಿದೆ. ಗಾಳಿಯೂ ಜೋರಾಗಿ ಬೀಸುತ್ತಿತ್ತು. ಉಸಿರು ಬಿಗಿಹಿಡಿದು ಓಡಿ¨ªೆ. ಆದರೂ ಆಗಲಿಲ್ಲ. ಇದೇ ಮೊದಲ ಬಾರಿ 10 ಸಾವಿರ ಮೀ. ಓಟದಲ್ಲಿ ಸೋತಿದ್ದೇನೆ, ಬಹಳ ಬೇಸರವಾಗಿದೆ’ ಎಂದು ಫ‌ರಾ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next