Advertisement

ಆಸ್ಕರ್ ರೇಸಿನಲ್ಲಿ ಬುಡಕಟ್ಟು ಭಾಷೆಯ ‘ಮ್ಮ್ಮ‍್ಮ’ ಸಿನಿಮಾ

05:56 PM Feb 27, 2021 | Team Udayavani |

ನವದೆಹಲಿ : ಕೇರಳದ ಬುಡಕಟ್ಟು ಭಾಷೆಯ ‘ಮ್ಮ್ಮ‍್ಮ’ (sound of Pain) ಸಿನಿಮಾ ಆಸ್ಕರ್ ಪ್ರಶಸ್ತಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

Advertisement

ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಅರ್ಹತೆಹೊಂದಿರುವ 366 ಸಿನಿಮಾಗಳ ಪಟ್ಟಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್ ಇಂದು  (ಫೆ.27) ಬಿಡುಗಡೆ ಮಾಡಿದೆ. ಇದರಲ್ಲಿ ‘ಮ್ಮ್ಮ‍್ಮ’ ಸಿನಿಮಾ ಕೂಡ ಸ್ಥಾನ ಗಿಟ್ಟಿಸಿಕೊಂಡಿದೆ. ಮಾರ್ಚ್ 5 ರಿಂದ 10 ರವರೆಗೆ ಮತದಾನ ನಡೆಯಲಿದೆ. ಮಾರ್ಚ್ 15 ರಂದು ಪ್ರಶಸ್ತಿ ಪಡೆದ ಚಿತ್ರಗಳ ಹೆಸರು ಪ್ರಕಟಗೊಳ್ಳಲಿದೆ.

ವಿಜೇಶ್ ಮನಿ ನಿರ್ದೇಶನದ ‘ಮ್ಮ್ಮ‍್ಮ’ ಸಿನಿಮಾ ಕೇರಳದ ಬುಡಕಟ್ಟು ಕುರುಂಬಾ ಭಾಷೆಯಲ್ಲಿ ಸಿದ್ಧವಾಗಿದೆ. ಭಾರತದ ಮಾಜಿ ಫುಟ್ಬಾಲ್ ಆಟಗಾರ ಐ.ಎಂ.ವಿಜಯನ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕುರುಂಬಾ ಬುಡಕಟ್ಟು ಜನಾಂಗದವರು ಜೇನುತುಪ್ಪ ಸಂಗ್ರಹಿಸಿ ಜೀವನ ಸಾಗಿಸುವ ಕಥಾ ಹಂದರ ಹೊಂದಿದೆ. ಪರಿಸರದ ಮೇಲೆ ಮಾನವನ ಮಿತಿಮೀರಿದ ಹಸ್ತಕ್ಷೇಪದಿಂದ ಉಂಟಾಗುವ ಪ್ರಕೃತಿ ಅಸಮತೋಲನ ಹಾಗೂ ಇದರ ಪರಿಣಾಮ ಜೇನುತುಪ್ಪದ ಕೊರತೆಯುಂಟಾಗುವ ಕಥಾಹಂದರ ಈ ಸಿನಿಮಾದಲ್ಲಿದೆ.

ಇನ್ನು ತಮಿಳಿನ ಸೂರ್ಯ ನಟನೆಯ ಸೂರರೈ ಪೊಟ್ರು ಚಿತ್ರವೂ ಕೂಡ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡಿದೆ. 366 ಸಿನಿಮಾಗಳ ಪೈಕಿ ಯಾವದು ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ ಎನ್ನುವುದು ಮಾರ್ಚ್ 15 ರಂದು ತಿಳಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next