Advertisement

ಐಎಎಸ್ ಗಳ ಹಾದಿ ರಂಪದ ಹಿಂದೆ ರಾಜಕಾರಣಿಗಳು, ಭೂಗಳ್ಳರ ಕೈವಾಡವಿದೆ : ವಿಶ್ವನಾಥ್

10:07 PM Jun 04, 2021 | Team Udayavani |

ಹುಣಸೂರು: ಇಬ್ಬರು ಐಎಎಸ್ ಅಧಿಕಾರಿಗಳ ಕಾಳಗದಿಂದ ಸಾಂಸ್ಕೃತಿಕ ನಗರಿ ಹೆಸರಿಗೆ ಕಂಟಕ ಬಂದೊದಗಿದೆ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಕಿಡಿಕಾರಿದ್ದಾರೆ.

Advertisement

ಹುಣಸೂರು ನಗರದಲ್ಲಿ ಹಳ್ಳಿಕಡೆಗೆ ವೈದ್ಯರ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಶ್ವನಾಥ್, ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮತ್ತು ಡಿಸಿ ರೋಹಿಣಿ ಸಿಂಧೂರಿಯವರ ಮುಸುಕಿನ ಗುದ್ದಾಟದ ಹಿಂದೆ ಕಾಣದ ಕೈ ಕೆಲಸಮಾಡುತ್ತಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ತಮ್ಮ ರಾಜಕೀಯ ವೈರಿಗಳ ಹೆಸರೇಳದೆ ಆಕ್ರೋಶ ಹೊರ ಹಾಕಿದ್ದಾರೆ.

ಜಿಲ್ಲೆಯ ಈ ಇಬ್ಬರು ಹೆಣ್ಣು ಮಕ್ಕಳ ಗುದ್ದಾಟದಿಂದ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಹಿರಿಯ ಅಧಿಕಾರಿಗಳ ಕಚ್ಚಾಟದ ಹಿಂದೆ ಕೆಲ ರಾಜಕಾರಣಿಗಳು, ಭೂ ಅಭಿವೃದ್ದಿ ದಂಧೆಯಲ್ಲಿ ತೊಡಗಿರುವವರು ಶಿಲ್ಪಾನಾಗ್ ಹೆಗಲ ಮೇಲೆ ಬಂದೂಕು ಇಟ್ಟು ರೋಹಿಣಿ ಸಿಂಧೂರಿಗೆ ಶೂಟ್ ಮಾಡಲು ಹೊರಟಿರುವ ಇವರ ತಂತ್ರಗಾರಿಕೆ ಮೇಲ್ನೋಟಕ್ಕೆ ವರ್ಗಾವಣೆಗೆ ಒತ್ತಡ ಹೇರುವ ಕೆಲಸ ನಡೆದಿರುವುದು ಅಲ್ಲೆಗೆಳೆಯುವಂತಿಲ್ಲವೆಂದರು.

ಇದನ್ನೂ ಓದಿ : ಸಿಂಧೂರಿ  v/s ಶಿಲ್ಪಾನಾಗ್ : ಇನ್ನೂ ಮುಗಿದಿಲ್ಲ ಐಎಎಸ್ ಅಧಿಕಾರಿ ಸಮರ..!

ಆಯುಕ್ತೆ ಶಿಲ್ಪಾನಾಗ್ ಪತ್ರಿಕಾಗೋಷ್ಟಿಯಲ್ಲಿ ರಾಜಿನಾಮೆ ಪ್ರಹಸನ ಬಿಚ್ಚಿಡುವ ಬದಲಿಗೆ ನೇರವಾಗಿ ಸರಕಾರದ ಮುಖ್ಯ ಕಾರ್ಯದರ್ಶಿಗಳ ಗಮನ ಸೆಳೆಯಬೇಕಾದ್ದು ಅವರ ಕರ್ತವ್ಯವೂ ಆಗಿತ್ತು. ಗಮನಕ್ಕೆ ತಂದು ರಾಜಿನಾಮೆ ನೀಡುವ ಪ್ರಯತ್ನವೇಕೆ ಮಾಡಲಿಲ್ಲವೆಂದು ಪ್ರಶ್ನಿಸಿದರು.

Advertisement

ಇದಲ್ಲದೆ ಮೈಸೂರು ನಗರ ವ್ಯಾಪ್ತಿಯಲ್ಲಿ ಮೂವರು ಐಎಎಸ್ ಅಧಿಕಾರಿಗಳು ಕಾರ್ಯಭಾರ ನಡೆಸುತ್ತಿದ್ದಾರೆ, ಹೀಗಿರುವಾಗ ಆಯುಕ್ತರ ಮೇಲೆಗೆ ಡಿಸಿ ಒತ್ತಡ ಹಾಕುತ್ತಾರೆ, ಸಿ.ಇ.ಓ. ಮೇಲೇಕೆ ಹೀಗಾಗುತ್ತಿಲ್ಲ. ಇದರಲ್ಲೇ ಸಂಶಯ ಮೂಡಿತ್ತಿದೆ.

ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿಸಿ ಆ ಸ್ಥಳಕ್ಕೆ ಶಿಲ್ಪಾನಾಗ್ ರನ್ನು ಕೂರಿಸುವ ತೆರೆ ಮರೆಯ ಪ್ರಯತ್ನ ನಡೆದಿದೆ. ಈ ಕಾರ್ಯದಲದ್ಲಿ ಸಂಸದರು, ಸಾರಾ ಮಹೇಶ್ ಜೊತೆಗೆ ಹಲವು ಭೂಗಳ್ಳರು ಸೇರಿಕೊಂಡು ಒತ್ತಡ ಹಾಕುತ್ತಿದ್ದಾರೆಂದು ತೀಷ್ಣವಾಗಿ ಪ್ರತಿಕ್ರಿಯಿಸಿದರು.

ಸಚಿವರ ಮೌನ : ಉಸ್ತುವಾರಿ ಸಚಿವರು ಕೋವಿಡ್ ಸಾಂಕ್ರಾಮಿಕ ರೋಗ ಉಲ್ಪಣಗೊಳ್ಳುತ್ತಿರುವ ಸಂದಿಗ್ದ ಸ್ಥಿತಿಯಲ್ಲಿ ಐಎಎಸ್ ಅಧಿಕಾರಿಗಳ ಕಿತ್ತಟ ಶಮನ ಮಾಡಲು ಪ್ರಯತ್ನಿಸದಿರುವುದು ಸಹ ಹಲವು ಅನುಮಾನಕ್ಕೆಡೆ ಮಾಡಿದೆ ಎಂದು ತಮ್ಮದೇ ಪಕ್ಷದ ಸಚಿವರ ನಡೆಯನ್ನು ಟೀಕಿಸಿದ್ದಾರೆ.

ಇದನ್ನೂ ಓದಿ : ಟಿ20 : ಪಾಕ್‌ ತಂಡದಲ್ಲಿ ಮೊಯಿನ್‌ ಖಾನ್‌ ಪುತ್ರ ಆಜಂ ಖಾನ್‌ ಗೆ ಅವಕಾಶ

Advertisement

Udayavani is now on Telegram. Click here to join our channel and stay updated with the latest news.

Next