Advertisement

ಸಚಿವ ಕಾರಜೋಳ 5 ಸಾವಿರ ಮತ ಯಾರಿಗೆ ಹಾಕಿಸಿದರು:ಸುನಿಲ್ ಗೌಡ ಪ್ರಶ್ನೆ

11:23 AM Dec 19, 2021 | Team Udayavani |

ವಿಜಯಪುರ: ಸ್ಥಳೀಯ ಸಂಸ್ಥೆಗಳ ಮೇಲ್ಮನೆಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಎಚ್.ಪೂಜಾರ ಅವರನ್ನು 5 ಸಾವಿರ ಮತಗಳಿಂದ ಗೆಲ್ಲಿಸುವುದಾಗಿ ಹೇಳಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಅಷ್ಟು ಮತಗಳನ್ನು ಯಾರಿಗೆ ಹಾಕಿಸಿದರು ಎಂದು ಜನರಿಗೆ ಹೇಳಬೇಕು ಎಂದು ಮೇಲ್ಮನೆ ನೂತನ ಕಾಂಗ್ರೆಸ್ ಸದಸ್ಯ ಸುನಿಲ ಗೌಡ ಪಾಟೀಲ ವ್ಯಂಗ್ಯವಾಡಿದ್ದಾರೆ.

Advertisement

ಭಾನುವಾರ ನಗರದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ದುರಾಡಳಿತದಿಂದ ಜನರು ಸರ್ಕಾರದ ವಿರುದ್ದ ತಿರುಗಿ ಬಿದ್ದಿರುವುದಕ್ಕೆ ದಿಕ್ಸೂಚಿ ಎಂದರು.

ಗ್ರಾಮ ಪಂಚಾಯತ್ ಮೂಲಕ ನಿರ್ಮಿಸಿದ ಶೌಚಾಲಯ ನಿರ್ವಹಣೆಗೆ ಆದ್ಯತೆ, ಕೋವಿಡ್ ಒಮಿಕ್ರಾನ್ ನಿಗ್ರಹಕ್ಕೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಪ್ರಥಮ ಪ್ರಾಶಸ್ತ್ಯದ 3200 ಮತಗಳಿಂದ ನನ್ನನ್ನು ಮೊದಲ ಹಂತದಲ್ಲೇ ಗೆಲ್ಲಿಸಿದ್ದಾರೆ. ಇದು ಅವಳಿ ಜಿಲ್ಲೆಯ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಕಾರ್ಯಕರ್ತರ ಬದ್ದತೆಯ ಶ್ರಮದಿಂದ ನನ್ನ ಆಯ್ಕೆ ಸುಲಭ ಆಗಿದೆ. ಇದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು‌ ಹಾಕಿದ್ದರೆ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದಿದ್ದ ಸಚಿವ ಗೋವಿಂದ ಕಾರಜೋಳ ಅವರು, ಬಿಜೆಪಿ ಅಭ್ಯರ್ಥಿ ಪೂಜಾರ ಗೆಲುವಿಗಾಗಿ ಕೊನೆ ಕ್ಷಣದ ವರೆಗೂ ಹೈರಾಣಾಗಿಸಿದ್ದು ಏಕೆ ಎಂದು ಜನರಿಗೆ ಹೇಳಲಿ ಎಂದರು ಕುಟುಕಿದರು.

Advertisement

ಬಿಜೆಪಿ ಸರ್ಕಾರ ಅಧಿಕಾರಕ್ಜೆ ಬರುತ್ತಲೇ ಕೃಷಿಹೊಂಡ, ಬೋರವೆಲ್ ಸೇರಿದಂತೆ ರೈತಪರವಾದ ಎಲ್ಲ ಯೋಜನೆ, ಕಾರ್ಯಕ್ರಮಗಳನ್ನು ರದ್ದು ಮಾಡಿದೆ. ಇದಷ್ಟೇ ಅಲ್ಲ ಸರ್ಕಾರದ ಬಹುತೇಕ ಯೋಜನೆಗಳು ರದ್ದಾಗಿವೆ. ಇಂಥ ಜನವಿರೋಧಿ ಕ್ರಮಗಳಿಂದಾಗಿ ಜನರು ಬಿಜೆಪಿ ಪಕ್ಷವನ್ನು ಧಿಕ್ಕರಿಸಿದ್ದಾರೆ ಎಂದು ಟೀಕಿಸಿದರು.

ಗ್ರಾಮ ಪಂಚಾಯತ್ ಗಳಲ್ಲಿ ಒಂದೂ ಕೆಲಸ ಆಗುತ್ತಿಲ್ಲ. ಈ ಹಿಂದೆ ಸರ್ಕಾರದ ವಸತಿ ಯೋಜನೆ ನಂಬಿ ಸಾಲ ಮಾಡಿ ಮನೆ ನಿರ್ಮಿಸಿಕೊಂಡ ಜನರಿಗೆ ಅನುದಾನ ಬಿಡುಗಡೆ ಆಗಿಲ್ಲ. ವಸತಿ ಸಚಿವ ಸೋಮಣ್ಣ ಬಡವರಿಗೆ ನೀಡುವ ಮನೆಗಳನ್ನು ರದ್ದು ಮಾಡಿದ್ದಾರೆ. ಈ ಬಗ್ಗೆ ಸಚಿವರಿಗೆ ಪ್ರತಿ ವರ್ಷ, ಪ್ರತಿ ಗ್ರಾ.ಪಂ. ಗೆ 50 ಮನೆಗಳಿಗಾಗಿ ಪತ್ರ ಬರೆದು ಆಗ್ರಹಿಸುತ್ತೇನೆ ಎಂದು ಭರವಸೆ ನೀಡಿದರು.

ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಇದ್ದರೂ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸ್ಥಿತಿ ತಲುಪಿದೆ. ಸ್ಥಳೀಯ ಸಂಸ್ಥೆಗಳ ಸಮಸ್ಯೆ, ಪ್ರಕೃತಿ ವಿಕೋಪದಿಂದ ರೈತರ ಬೆಳೆಹಾನಿ ಸೇರಿದಂತೆ ಗಂಭೀರ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.

ಡಾ.ಗಂಗಾಧರ ಸಂಬಣ್ಣಿ, ಸಂಗಮೇಶ ಬಬಲೇಶ್ವರ, ಅಬ್ದುಲ್ ಹಮೀದ್ ಮುಶ್ರೀಫ್,ವೈಜನಾಥ ಕರ್ಪೂರಮಠ, ಡಾ.ಮಹಾಂತೇಶ ಬಿರಾದಾರ, ವಿದ್ಯಾರಾಣಿ ತುಂಗಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next