ಬೆಂಗಳೂರು: ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ, ಪ್ರಶ್ನಿಸಿದ ಪೊಲೀಸರ ಮೇಲೆ ಕಾಂಗ್ರೆಸ್ ಪಕ್ಷದ ಎಂಎಲ್ ಸಿ ಪುತ್ರ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿದ ಘಟನೆ ರವಿವಾರ ರಾತ್ರಿ ನಗರದಲ್ಲಿ ನಡೆದಿದೆ.
ಹೆಬ್ಬಾಳದ ಬಿಎಂಟಿಸಿ ಡಿಪೋ ಬಳಿ ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಎಂಎಲ್ ಸಿ ಮಗ ಮತ್ತು ಆತನ ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಎಂಎಲ್ ಸಿ ಪುತ್ರ ಕಂಠಪೂರ್ತಿ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದ ಹಿನ್ನಲೆಯಲ್ಲಿ ಅಮೃತಹಳ್ಳಿ ಠಾಣೆಯ ಇಬ್ಬರು ಪೊಲೀಸರು ಕಾರು ತಡೆದು ಪ್ರಶ್ನೆ ಮಾಡಿದ್ದರು. ಈ ಕಾರಣಕ್ಕೆ ಪೊಲೀಸರ ಮೇಲೆ ದರ್ಪ ತೋರಿದ ಎಂಎಲ್ ಸಿ ಪುತ್ರ ಮತ್ತು ಸ್ನೇಹಿತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ:ಆಂಧ್ರದ ಹಳ್ಳಿಯೊಂದರಲ್ಲಿ ಕಾಡುತ್ತಿದೆ ವಿಚಿತ್ರ ಕಾಯಿಲೆ: ಓರ್ವ ಸಾವು, 292 ಮಂದಿ ಅಸ್ವಸ್ಥ
ಹಲ್ಲೆ ನಡೆಸಿದ ಮೂವರನ್ನೂ ಅಮೃತಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.