Advertisement

ಮಂಗಳೂರು: ವಿಧಾನ ಪರಿಷತ್‌ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರಾ ಧಿಕಾರದ ಕ್ಷೇತ್ರದ ಉಪಚುನಾವಣೆ ಅ.21ರಂದು ನಡೆಯಲಿದ್ದು, ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ.

Advertisement

ರವಿವಾರ ಮತಗಟ್ಟೆಗಳಿಗೆ ಮತಪತ್ರ ಮತ್ತು ಸಿಬಂದಿ ಕಳುಹಿಸಿಕೊಡುವ ಮಸ್ಟರಿಂಗ್‌ ಕಾರ್ಯ ಜಿಲ್ಲಾದ್ಯಂತ ನಡೆಯಿತು. ಚುನಾವಣಾ ಧಿಕಾರಿ ಹಾಗೂ ಜಿಲ್ಲಾ ಧಿಕಾರಿ ಮುಲ್ಲೈ ಮುಗಿಲನ್‌ ಅವರು ಜಿಲ್ಲೆಯ ವಿವಿಧ ಕಡೆಗಳ ಚುನಾವಣೆ ಮಸ್ಟರಿಂಗ್‌ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಗಳನ್ನು ಪರೀಶೀಲಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಚುನಾವಣೆ ಕಣದಲ್ಲಿ
ಚುನಾವಣ ಕಣದಲ್ಲಿ ಕಿಶೋರ್‌ ಬಿ.ಆರ್‌. (ಭಾರತೀಯ ಜನತಾ ಪಾರ್ಟಿ), ರಾಜು ಪೂಜಾರಿ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌), ಅನ್ವರ್‌ ಸಾದತ್‌ ಎಸ್‌. (ಸೋಶಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ), ಮತ್ತು ದಿನಕರ ಉಳ್ಳಾಲ (ಪಕ್ಷೇತರ) ಸ್ಪರ್ಧಿಸುತ್ತಿದ್ದಾರೆ.

ನಿಷೇಧಾಜ್ಞೆ ಜಾರಿ
ಮತಗಟ್ಟೆ ಕೇಂದ್ರದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೆ ವ್ಯಾಪಾರ ವಹಿವಾಟು, ಜನಸಂದಣಿ ಗುಂಪು ಗುಂಪಾಗಿ ಜನ ಸೇರದಂತೆ ಸೂಚಿಸಲಾಗಿದೆ. ಈ ಬಗ್ಗೆ ಮತಗಟ್ಟೆಗಳು ಇರುವ ಪ್ರದೇಶ ವ್ಯಾಪ್ತಿಗೆ ಸಂಬಂ ಧಿಸಿದಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೆ ಭದ್ರತೆ ಸಂಬಂಧಿಸಿ ಒಟ್ಟು 540 ಪೊಲೀಸ್‌ ಅ ಧಿಕಾರಿ/ ಸಿಬಂದಿ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 328 ಪೊಲೀಸ್‌ ಅಧಿ ಕಾರಿ/ಸಿಬಂದಿ ಕೂಡ ನಿಯೋಜಿಸಲಾಗಿದೆ.

ಅ.24ರಂದು ಮತ ಎಣಿಕೆ
ಅ.21ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಅ.24ರಂದು ಮಂಗಳೂರು ಸಂತ ಅಲೋಶಿಯಸ್‌ ಪದವಿಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

Advertisement

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು, 6,032 ಮತದಾರರಿದ್ದಾರೆ. ಉಭಯ ಜಿಲ್ಲೆಗಳು ಗ್ರಾಮ ಪಂಚಾಯತ್‌ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಹಾಗೂ ಶಾಸಕರು ಮತ್ತು ಸಂಸದರು ಈ ಕ್ಷೇತ್ರದ ಮತದಾರರಾಗಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next