Advertisement

ಪರಿಷತ್ ಫೈಟ್: ಚಿತ್ರದುರ್ಗ, ಉ. ಕನ್ನಡ, ಚಿಕ್ಕಮಗಳೂರು, ಮಂಗಳೂರು ಕ್ಷೇತ್ರದ ಫಲಿತಾಂಶ ಪ್ರಕಟ

12:22 PM Dec 14, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ 10ರಂದು ನಡೆದಿದ್ದ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. ಹಲವು ಕ್ಷೇತ್ರಗಳ ಫಲಿತಾಂಶ ಈಗಾಗಲೇ ಲಭ್ಯವಾಗಿದೆ.

Advertisement

ಚಿತ್ರದುರ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಬೀದರ್ ನಲ್ಲಿ ಕಾಂಗ್ರೆಸ್, ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ.

ಮೂರನೇ ಪ್ರಯತ್ನದಲ್ಲಿ ಗೆಲುವು

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ವಿರುದ್ಧ ನವೀನ್ ಗೆಲುವಿನ ನಗೆ ಬೀರಿದ್ದಾರೆ. ಸತತ ಎರಡು ಅವಧಿಯಲ್ಲಿ ಸೋತಿದ್ದ ನವೀನ್ ಮೂರನೇ ಅವಧಿಯಲ್ಲಿ ಗೆಲ್ಲುವ ಸಾಧಿಸಿದ್ದಾರೆ. 2626 ಮತಗಳನ್ನು ಪಡೆದಿರುವ ನವೀನ್, 364 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಗಣಪತಿ ಉಳ್ವೇಕರ್ ಗೆ ಜಯ

Advertisement

ಕಾರವಾರ: ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರು 183 ಮತಗಳ ಅಂತರದಿಂದ ಸಮೀಪದ ಪ್ರತಿಸ್ಪರ್ಧಿ ಭೀಮಣ್ಣ ನಾಯ್ಕ ವಿರುದ್ದ ಗೆಲುವು ಸಾಧಿಸಿದರು.

ಒಟ್ಟು 2907 ಮತಗಳು ಚಲಾವಣೆಯಾಗಿದ್ದು, ಗಣಪತಿ ಉಳ್ವೇಕರ್ 1514 ಮತಗಳು, ಭೀಮಣ್ಣ ನಾಯ್ಕ 1331 ಮತಗಳನ್ನು ಪಡೆದಿದ್ದಾರೆ. 54 ಮತಗಳು ತಿರಸ್ಕೃತವಾಗಿದ್ದು, ಮೂವರು ಪಕ್ಷೇತರರಿಗೆ ಕೇವಲ 8 ಮತಗಳು ದೊರೆತಿದೆ.

ಆರು ಮತ ಅಂತರದ ಗೆಲುವು

ಚಿಕ್ಕಮಗಳೂರು: ಸಂಸ್ಥೆಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಜಿದ್ದಾಜಿದ್ದಿನ ಕಣದಲ್ಲಿ ಫಲಿತಾಂತ ಭಾರೀ ಕುತೂಹಲ ಕೆರಳಿಸಿತ್ತು. ಮೊದಲ ಸುತ್ತಿನಿಂದ ಅತ್ಯಂತ ಪೈಪೋಟಿ ಏರ್ಪಟಿದ್ದುಆರು ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಪರಾಭವಗೊಂಡರು.

ಪೂಜಾರಿ-ಭಂಡಾರಿಗೆ ಜಯ

ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದ ದ್ವಿ ಸದಸ್ಯ ಕ್ಷೇತ್ರದಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್ ನ ಮಂಜುನಾಥ ಭಂಡಾರಿ ಮತಗಳಲ್ಲಿ ಜಯ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next