Advertisement

ಪರಿಷತ್ ಚುನಾವಣೆ: ಕೊಡಗಿನಲ್ಲಿ ಬಿಜೆಪಿ, ಹಾಸನದಲ್ಲಿ ಸೂರಜ್ ರೇವಣ್ಣ ಗೆಲುವು

10:34 AM Dec 14, 2021 | Team Udayavani |

ಬೆಂಗಳೂರು: ವಿಧಾನ ಪರಿಷತ್ ಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಕೊಡಗು ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Advertisement

ಹಾಸನ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಅವರು ಆರಂಭದಿಂದಲೂ ಮುನ್ನಡೆ ಸಾಧಿಸಿಕೊಂಡು ಬಂದು ಅಂತಿಮವಾಗಿ 1430  ಮತಗಳ ಅಂತರದಿಂದ ಜಯ ಸಾಧಿಸಿದರು.

ಸೂರಜ್ 2247 ಮತ ಪಡೆದರೆ, ಕಾಂಗ್ರೆಸ್ ನ ಎಂ.ಶಂಕರ್ 714,  ಬಿಜೆಪಿಯ ವಿಶ್ವನಾಥ್ 435 ಮತಗಳನ್ನಷ್ಟೇ ಪಡೆದರು.

ಇದನ್ನೂ ಓದಿ:ವಿಧಾನ ಪರಿಷತ್ ಚುನಾವಣೆ: ಮತ ಎಣಿಕೆ ಆರಂಭ

ಕೊಡಗಿನಲ್ಲಿ 102 ಮತಗಳ ಅಂತರದಿಂದ ಬಿಜೆಪಿಯ ಸುಜಾ ಕುಶಾಲಪ್ಪ ಜಯಭೇರಿ ಬಾರಿಸಿದ್ದು, ಕೊಡಗು ವಿಧಾನಪರಿಷತ್ ಸ್ಥಾನವನ್ನು ಬಿಜೆಪಿ ಉಳಿಸಿಕೊಂಡಿತು.

Advertisement

ಬಿಜೆಪಿಯ ಸುಜಾ ಅವರು 705 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಡಾ.ಮಂಥರ್ ಗೌಡ ಅವರು 603 ಮತಗಳನ್ನು ಪಡೆದರು. 17 ಮತಗಳು ಅನರ್ಹವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next