Advertisement

ನೇರ ಪ್ರಸಾರ ವೀಕ್ಷಿಸಿದ ಶಾಸಕರು

08:12 AM Jul 28, 2020 | Suhan S |

ಮೈಸೂರು: ರಾಜ್ಯ ಸರ್ಕಾರವು ಅಸ್ತಿತ್ವಕ್ಕೆ ಬಂದು 1 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ “ಆಡಳಿತಕ್ಕೆ 1 ವರ್ಷ: ಸವಾಲುಗಳ ವರ್ಷ-ಪರಿಹಾರದ ಸ್ಪರ್ಶ’ ಕಾರ್ಯಕ್ರಮವನ್ನು ನಗರದ ಜಿಪಂ ಸಭಾಂಗಣದಲ್ಲಿ ನೇರಪ್ರಸಾರದ ಮೂಲಕ ವೀಕ್ಷಿಸಲಾಯಿತು.

Advertisement

ಸರ್ಕಾರದ 1 ವರ್ಷದ ಪ್ರಗತಿ ವರದಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೊರತರುವ ವಾರ್ತಾ ಜನಪದ ಮತ್ತು ಮಾರ್ಚ್‌ ಆಫ್ ಕರ್ನಾಟಕ ಮಾಸಿಕ ನಿಯತಕಾಲಿಕೆಗಳನ್ನು ಬಿಡುಗಡೆ ಮಾಡಲಾಯಿತು. ವಿವಿಧ ಯೋಜನೆಗಳ ಫ‌ಲಾನುಭವಿಗಳು ಸಿಎಂ ಜತೆ ನೇರ ಸಂವಾದ ನಡೆಸಿದರು. ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 10 ಮಂದಿಯನ್ನು ಸಂವಾದಕ್ಕೆ ಆಯ್ಕೆ ಮಾಡಲಾಗಿತ್ತು. ಈ ಪೈಕಿ ಜಿಲ್ಲೆಯ ಒಬ್ಬರಿಗೆ ಮಾತ್ರ ಅವಕಾಶ ದೊರೆಯಿತು.

ನಂಜನಗೂಡಿನಲ್ಲಿ ಉಂಟಾದ ಪ್ರವಾಹದಿಂದ ಮನೆ ಹಾನಿಗೊಳಗಾಗಿ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಅನುದಾನ ಪಡೆದ ಫ‌ಲಾನುಭವಿ ಎನ್‌.ಸಿ.ಬಸವಣ್ಣ ಅವರು ಸಿಎಂ ಅವರೊಂದಿಗೆ ಆನ್‌ಲೈನ್‌ ಮುಖಾಂತರ ಮಾತನಾಡಿದರು. ಪ್ರವಾಹ  ದಿಂದ ಮನೆ ಕಳೆದುಕೊಂಡ ತಕ್ಷಣ ಸ್ಪಂದಿಸಿದಕ್ಕೆ ಧನ್ಯವಾದ ಅರ್ಪಿಸಿದರು.

ಶಾಸಕರಾದ ರಾಮದಾಸ್‌, ಬಿ.ಹರ್ಷವರ್ಧನ್‌, ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ಜಿಪಂ ಅಧ್ಯಕ್ಷೆ ಬಿ.ಸಿ. ಪರಿಮಳ ಶ್ಯಾಮ್‌, ಉಪಾಧ್ಯಕ್ಷೆ ಎಂ.ವಿ. ಗೌರಮ್ಮ ಸೋಮಶೇಖರ್‌, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಪಂ ಸಿಇಒ ಪ್ರಶಾಂತ್‌ ಕುಮಾರ್‌ ಮಿಶ್ರ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next