ವಿಜಯಪುರ: ದೇಶದ ಎಲ್ಲ ನಾಗರಿಕರು ಕೋವಿಡ್ ಲಸಿಕೆ ಪಡೆದು, ಕೋವಿಡ್ ಮುಕ್ತ ಭಾರತ ನಿರ್ಮಾಣಕ್ಕೆ ಸಹಕರಿಸಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಶುಕ್ರವಾರ ವಿಜಯಪುರ ನಗರದ ವಾರ್ಡ ನಂ-3 ರಲ್ಲಿ ಗ್ಯಾಂಗ್ ಬಾವಡಿ ಸರಕಾರಿ ಶಾಲೆ ನಂ-10 ರಲ್ಲಿ ಎರಡನೇ ಹಂತದ ಕೋವಿಡ್ ಲಸಿಕೆ ಪಡೆದು ಬಳಿಕ ಜನರಿಗೆ ಲಸಿಕೆ ಪಡೆಯುವ ಅಗತ್ಯ ಹಾಗೂ ಮಹತ್ವದ ಕುರಿತು ವಿವರಿಸಿದರು.
ಭಾರತದಲ್ಲೇ ಅಭಿವೃದ್ಧಿ ಪಡಿಸಿದ, ಅತ್ಯಂತ ಸುರಕ್ಷಿತ, ಕೋವಿಡ್ ಸೋಂಕು ನಿಗ್ರಹದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಸರ್ಕಾರದ ಮಾರ್ಗಸೂಚಿ ಅನ್ವಯ ಲಸಿಕೆ ಪಡೆಯಲು ಅರ್ಹತೆ ಇರುವ ಹಿರಿಯ ನಾಗರಿಕರು, ವಯಸ್ಕರು ಲಸಿಕೆ ಹಾಕಿಸಿಕೊಂಡು ಕೋವಿಡ್ ಮುಕ್ತ ವಿಜಯಪುರ ನಿರ್ಮಾಣಕ್ಕೆ ಕೈಜೋಡಿಸಿ ಎಂದು ವಿನಂತಿಸಿದರು.
ಇದನ್ನೂ ಓದಿ:ಕಾಳಸಂತೆಯಲ್ಲಿ ರೆಮಿಡಿಸಿವಿರ್ ಮಾರಾಟಕ್ಕೆ ಯತ್ನ: ಐವರ ಬಂಧನ
ಶ್ರೀ ಸಿದ್ಧೇಶ್ವರ ಸಂಸ್ಥೆ ಚೇರ್ಮನ್ ಬಸಯ್ಯ ಹಿರೇಮಠ, ವೈದ್ಯಾಧಿಕಾರಿ ಡಾ.ಕೇಸಸಿಂಗ್ ಗುಂಡಬಾವಡಿ, ಡಾ.ಕವಿತಾ ದೊಡ್ಡಮನಿ, ವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.