Advertisement
ಬಂಟ್ವಾಳದಲ್ಲಿ ಉಜ್ವಲ ಅಡುಗೆ ಅನಿಲ ಫಲಾನುಭವಿಗಳ ಕಾರ್ಯಕ್ರಮದಲ್ಲಿದ್ದ ಶಾಸಕ ಭರತ್ ಶೆಟ್ಟಿ ಅವರು ವಿಷಯ ತಿಳಿದ ಕೂಡಲೇ ಸಂಬಂಧಪಟ್ಟ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಗೆ ಕರೆ ಮಾಡಿ ಅವರನ್ನು ಕರೆದುಕೊಂಡು ನೇರವಾಗಿ ಕಾಲೇಜಿಗೆ ಬಂದು, ಅಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ತನ್ನ ಶಾಸಕ ನಿಧಿಯಿಂದ 2.5 ಲಕ್ಷ ರೂ. ಬಿಡುಗಡೆ ಮಾಡುತ್ತೇನೆ. ಎಂಜಿನಿಯರ್ ಅವರನ್ನು ಇಲ್ಲಿಗೆ ಕರೆಸಿದ್ದು ನೀರಿನ ಸಮಸ್ಯೆ ನೀಗಿಸಲಿದ್ದಾರೆ ಎಂದರು.
ಸರಕಾರಿ ಕಾಲೇಜಿನಲ್ಲಿ ಅತ್ಯುತ್ತಮ ಶಿಕ್ಷಣ ವಿದ್ಯಾರ್ಥಿಗಳಿಗೆ ಸಿಗುತ್ತಿದೆ. ಆದರೆ ಕೆಲವು ಭಾಗದಲ್ಲಿ ಕಟ್ಟಡ, ನೀರು, ಆಟದ ಮೈದಾನದಂತಹ ಮೂಲಸೌಲಭ್ಯಗಳ ಕೊರತೆ ಇದ್ದು ನನ್ನ ಗಮನಕ್ಕೆ ಬಂದಿದೆ. ನನ್ನ ಕ್ಷೇತ್ರದಲ್ಲಿನ ಎಲ್ಲ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿರುವ ಮೂಲಸೌಕರ್ಯದ ಸಮಸ್ಯೆಯನ್ನು ಹಂತ ಹಂತವಾಗಿ ಬಗೆ ಹರಿಸಲಾಗುವುದು.
– ಡಾ| ಭರತ್ ಶೆಟ್ಟಿ, ಶಾಸಕ