Advertisement

Fake Facebook: ಶಾಸಕ ಸುರೇಶ್‌ ಕುಮಾರ್‌ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌!

10:32 AM Nov 18, 2023 | Team Udayavani |

ಬೆಂಗಳೂರು: ಮಾಜಿ ಸಚಿವ, ಶಾಸಕ ಎಸ್‌.ಸುರೇಶ್‌ ಕುಮಾರ್‌ ಅವರ ನಕಲಿ ಫೇಸ್‌ಬುಕ್‌ ಖಾತೆಯಿಂದ ಅವರ ಸ್ನೇಹಿತರಿಗೆ ಆನ್‌ಲೈನ್‌ನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

Advertisement

ಸುರೇಶ್‌ ಕುಮಾರ್‌ ಈ ಕುರಿತು ತಮ್ಮ ಫೇಸ್‌ ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಹೆಸರಿನಲ್ಲಿ ಯಾರೋ ದುರುಳರು ನಕಲಿ ನಕಲಿ ಅಕೌಂಟ್‌ ಮೂಲಕ ಎಲ್ಲರಿಗೂ ಹಣ ಕೇಳುತ್ತಿದ್ದಾರೆಂದು ನನ್ನ ಗೆಳೆಯರೊಬ್ಬರು ಗಮನಕ್ಕೆ ತಂದಿದ್ದಾರೆ.

ನನಗೆ ಯಾರಿಂದಲೂ ಫೋನ್‌ ಪೇ ಅಥವಾ ಗೂಗಲ್‌ ಪೇ ಅಥವಾ ಇನ್ಯಾವುದರ ಮೂಲಕ ಹಣವನ್ನು ಕೇಳುವ ಪರಿಸ್ಥಿತಿ ಬಂದಿಲ್ಲ. ಈ ನಕಲಿ ಅಕೌಂಟರ್‌ಗಳ ಮಾತಿನ ಮೋಡಿಗೆ ಬಲಿಯಾಗಬೇಡಿ. ಈ ಕುರಿತು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೂ ದೂರು ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next