ಕಕ್ಕೇರಾ: ತಾಲೂಕಿನ ಪ್ರತಿಯೊಂದು ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿಗೊಳಿಸುವ ದೃಢ ಸಂಕಲ್ಪ ಹೊಂದಲಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. ಸಮೀಪದ ಎಸ್.ಕೆ. ಲಿಂಗದಳ್ಳಿ ಗ್ರಾಮದಲ್ಲಿ ಗ್ರಾಮ ವಿಕಾಸ ಯೋಜನೆಡಿಯಲ್ಲಿ ಸಿಸಿ ರಸ್ತೆ ಹಾಗೂ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಅವರು ಮಾತನಾಡಿದರು. ಈಗಾಗಲೇ ಗ್ರಾಮ ವಿಕಾಸ ಯೋಜನೆಡಿಯಲ್ಲಿ 75 ಲಕ್ಷ ರೂ. ಅನುದಾನ ನೀಡಲಾಗಿದ್ದು, ಇದರಲ್ಲಿ ಚರಂಡಿ, ಕುಡಿವ ನೀರು ಹಳೆಯ ದೇವಾಲಯ ಜೀರ್ಣೋದ್ಧಾರ ಸೇರಿದಂತೆ ವಿವಿಧ ಕಾಮಗಾರಿಗೊಳ್ಳಬಹುದಾಗಿದೆ ಎಂದರು. ಸುರಪುರ ತಾಲೂಕಿನಲ್ಲಿ ಮೂಲ ಸೌಕರ್ಯದಿಂದ ವಂಚಿತವಾದ ಗ್ರಾಮಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಕೆಲವೆ ದಿನಗಳಲ್ಲಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು. ಜಿಪಂ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್ ಮಾತನಾಡಿ, ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಅಧಿಕಾರ ಅವಧಿಯಲ್ಲಿ ತಾಲೂಕಿನಲ್ಲಿ ಸಾಕಷ್ಟು ಅನುದಾನ ತಂದು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭ ಮುಖಂಡ ಸೂಲಪ್ಪ ಕಮತಗಿ, ತಾಪಂ ಸದಸ್ಯ ನಂದನಗೌಡ ಪಾಟೀಲ್, ಮಲ್ಲಿಕಾರ್ಜುನ ಸಾಹು, ಶರಣು ಮೊಕಾಶಿ, ಪರಮಣ್ಣ ಹಾಲಭಾವಿ, ಗುಂಡಪ್ಪ ಸೊಲ್ಲಾಪುರ, ಬಸವರಾಜ ದೊಡ್ಡಮನಿ, ನಿಂಗಣ್ಣ ಸಾಹುಕಾರ, ಸಣ್ಣಮಾನಯ್ಯ ಸಾಹು ಬಂಡೊಳ್ಳಿ, ಹೈಯ್ನಾಳಪ್ಪ ಸಾಹು, ಬಾಲಪ್ಪ ಕರ್ನಾಳ್, ದುರಗಪ್ಪ ಮಕಾಶಿ, ಪರಮಣ್ಣ ತೇರಿನ್ ಇತರರು ಇದ್ದರು.