Advertisement

ಬಡವರಿಗೆ ಶಾಸಕ ರಾಘವೇಂದ್ರ ಹಿಟ್ನಾಳ “ಅಭಯ ಹಸ್ತ’

08:25 PM Jun 21, 2021 | Team Udayavani |

ವರದಿ:ದತ್ತು ಕಮ್ಮಾರ

Advertisement

ಕೊಪ್ಪಳ: ಶಾಸಕ ರಾಘವೇಂದ್ರ ಹಿಟ್ನಾಳ ಅವರು ಕೋವಿಡ್‌ ಸಂಕಷ್ಟದಲ್ಲಿರುವ ಜನರ ನೆರವಿಗೆ ಮುಂದಾಗಿದ್ದು, ಜೂ.21ರಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೂಲಕ 15 ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಲು ಮುಂದಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಮೊದಲ ಅಲೆ ವೇಳೆ ಹಲವು ಕುಟುಂಬಗಳು ದುಡಿಮೆಯೇ ಇಲ್ಲದೇ ಜೀವನ ನಡೆಸಲು ಕಷ್ಟ ಪಡುವಂತಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯ ಹಲವು ಜನಪ್ರತಿನಿಧಿಗಳು ತನು, ಮನ, ಧನದಿಂದ ನೆರವಿನ ಹಸ್ತ ಚಾಚಿದರು. ಇದಕ್ಕೂ ಮಿಗಿಲಾಗಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಮೊದಲ ಅಲೆಯಲ್ಲಿ ಪ್ರತಿ ಜಿಪಂ ಕ್ಷೇತ್ರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಆಹಾರ ಧಾನ್ಯಗಳ ಕಿಟ್‌ಗಳನ್ನು ವಾರ್ಡ್‌ವಾರು, ಬೂತ್‌ ಮಟ್ಟದಲ್ಲಿ ವಿತರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಕೋವಿಡ್‌ ಮೊದಲ ಅಲೆಯು ಕಡಿಮೆಯಾಯ್ತು ಎನ್ನುವ ಹಂತದಲ್ಲೇ ಇದೇ ವರ್ಷ ಏಪ್ರಿಲ್‌ ತಿಂಗಳಿಂದ ಎರಡನೇ ಅಲೆ ಆರ್ಭಟಿಸಿತು. ಇದರಿಂದ ಕೊಪ್ಪಳ ಕ್ಷೇತ್ರದ ಬಡ ಕುಟುಂಬಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಜೂ. 21ರಂದು 15 ಸಾವಿರ ಬಡ ಕುಟುಂಬಗಳಿಗೆ 1000-1500 ರೂ. ವೆಚ್ಚದ ಕಿಟ್‌ ಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ವಿತರಿಸಲು ಸಿದ್ಧತೆ ನಡೆಸಿದ್ದಾರೆ. ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ಶಾಸಕರು ಲಾಕ್‌ಡೌನ್‌ ವೇಳೆ ಕುಟುಂಬಕ್ಕೆ ಕಿಟ್‌ ಕೊಡಲು ಸಿದ್ಧರಾಗಿದ್ದರು. ಆದರೆ ಸಿದ್ದರಾಮಯ್ಯ ಅವರಿಗೆ ಕೋವಿಡ್‌ ದೃಢಪಟ್ಟು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಕಿಟ್‌ ವಿತರಣೆ ವಿಳಂಬವಾಯಿತು. ಅವರ ಮೂಲಕವೇ ಕಿಟ್‌ ಕೊಡಿಸಬೇಕು ಎನ್ನುವ ಕಾರಣಕ್ಕೆ ತಡವಾಯ್ತು ಎನ್ನುತ್ತಿದೆ ಕಾಂಗ್ರೆಸ್‌ ಪಾಳೆಯ.

Advertisement

ಕೋವಿಡ್‌ ನಿರ್ವಹಣೆಗೆ ಶ್ರಮ: ಬಡವರ ಬಗ್ಗೆ ಕಳಕಳಿ ಜತೆಗೆ ಕೋವಿಡ್‌ ನಿರ್ವಹಣೆಯಲ್ಲೂ ಶಾಸಕ ಹಿಟ್ನಾಳ ಅವರು ಹಗಲಿರುಳು ಶ್ರಮಿಸಿದ್ದಾರೆ. ಕೋವಿಡ್‌ ಆಸ್ಪತ್ರೆಯೊಳಗೆ ತೆರಳಿ ಸೋಂಕಿತರ ಯೋಗಕ್ಷೇಮ ವಿಚಾರಿಸಿದ್ದಾರೆ. ಮುನಿರಾಬಾದ್‌ ಆಸ್ಪತ್ರೆಯಲ್ಲಿ 30 ಆಕ್ಸಿಜನ್‌ ಬೆಡ್‌ ಗಳ ವ್ಯವಸ್ಥೆ ಸೇರಿದಂತೆ ಕೋವಿಡ್‌ ನಿರ್ವಹಣೆಗೆ ಅಧಿಕಾರಿಗಳೊಟ್ಟಿಗೆ ಶ್ರಮಿಸಿದ್ದಾರೆ. ಜಿಲ್ಲಾಸ್ಪತ್ರೆಯ ಸೌಲಭ್ಯ ಹೆಚ್ಚಳಕ್ಕೂ ಒತ್ತು ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next