Advertisement

ಶಿಕ್ಷಕರ ಹಿತ ಕಾಯುವಲ್ಲಿ ರಾಜ್ಯ ಸರಕಾರ ವಿಫಲ: ಕೈ ನಾಯಕರ ವಾಗ್ದಾಳಿ

07:25 PM Sep 04, 2020 | Hari Prasad |

ಬೆಂಗಳೂರು: ರಾಜ್ಯ ಸರ್ಕಾರ ಶಿಕ್ಷಕರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ.

Advertisement

ಈ ಸರ್ಕಾರ ಶಿಕ್ಷಕರಿಗೆ ಶಿಕ್ಷೆ ನೀಡಿದೆ. ಬಿಜೆಪಿಯ ಆಂತರಿಕ ಜಗಳದಿಂದ ಶಿಕ್ಷಕರ ಜೀವನ ನಿರ್ನಾಮ ಆಗಿದೆ.

ಮಾತ್ರವಲ್ಲದೇ ಈ ಕೋವಿಡ್ 19 ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ ಹಾಗೂ ಖಾಸಗಿ ಶಾಲೆಗಳ ಮೇಲೆ ಈ ಸರಕಾರಕ್ಕೆ ಯಾವುದೇ ಹಿಡಿತ ಇಲ್ಲ ಎಂದು ಕಾಂಗ್ರೆಸ್ ನಾಯಕ ಸಲೀಂ ಅಹಮ್ಮದ್ ಅವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಈ ಸರ್ಕಾರದಿಂದ ಶಿಕ್ಷಕರು ಹಾಗೂ ಶಿಕ್ಷಣಕ್ಕೆ ಅನ್ಯಾಯವಾಗಿದೆ. ರಾಜ್ಯದಲ್ಲಿ 1 ಕೋಟಿ ವಿದ್ಯಾರ್ಥಿಗಳಿದ್ದಾರೆ. 75 ಸಾವಿರ ಶಾಲೆಗಳಿವೆ ಆದರೆ, ಶಾಲೆಗಳನ್ನು ಪುನರಾರಂಭಿಸುವ ಕುರಿತು ಸರಕಾರದ ಬಳಿ ಯಾವುದೇ ನೀಲ ನಕ್ಷೆಗಳಿಲ್ಲ ಎಂದು ಹೇಳಿದ್ದಾರೆ.

ಡಿಜಿಟಲ್ ಡಿವೈಡ್ ಅಂತರ
ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಅಂತರ ಹೆಚ್ಚಾಗುತ್ತಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಫೋನ್ ವ್ಯವಸ್ಥೆ ಇಲ್ಲ. ಅನೇಕ ಪೋಷಕರು ತಮ್ಮ ಬೆಲೆ ಬಾಳುವ ವಸ್ತುಗಳನ್ನು ಮಾರಾಟ ಮಾಡಿ ಫೋನ್ ತೆಗೆದುಕೊಂಡಿದ್ದಾರೆ. ಶೇ 55 ರಷ್ಟು ಮಕ್ಕಳಿಗೆ ಮಾತ್ರ ಆನ್ ಲೈನ್ ಶಿಕ್ಷಣ ನೀಡಲಾಗುತ್ತಿದೆ.

Advertisement

ಗ್ರಾಮೀಣ ಮಟ್ಟದಲ್ಲಿ ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ ಇದೆಯೇ?
ರಾಜ್ಯದಲ್ಲಿ 49,883 ಸರ್ಕಾರಿ ಶಾಲೆಗಳಿವೆ. ನಮ್ಮಲ್ಲಿ ನಾಲ್ಕರಲ್ಲಿ ಮೂರು ಶಾಲೆಗಳಲ್ಲಿ ಕಂಪುಟರ್  ವ್ಯವಸ್ಥೆಯಿಲ್ಲ ಮತ್ತು ಇದ್ದರೂ ಶೇ. 72 ರಷ್ಟು ಪ್ರಮಾಣ ಸರಿಯಾಗಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಠಿಕತೆ ಹೆಚ್ಚಿದೆ. ಇದುವರೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಮೂಲಕ ಅದನ್ನು ಕಡಿಮೆ ಮಾಡುವ ಪ್ರಯತ್ನ ನಡೆಸಿದ್ದರು. ಈಗ ಮತ್ತೆ ಅಪೌಷ್ಠಿಕತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಖರ್ಗೆ ಅವರು ಆತಂಕ ವ್ಯಕ್ತಪಡಿಸಿದರು.

ಶಾಲೆಯಿಂದ ಹೊರಗೆ ಉಳಿಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ವ ಶಿಕ್ಷಣ ಅಭಿಯಾನದ ಮಾಹಿತಿ ಪ್ರಕಾರ 13,000 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ.

97% ಶಾಲೆಗಳಲ್ಲಿ ಶಿಕ್ಷಕರಿಗೆ ಆನ್ ಲೈನ್ ತರಗತಿಯ ಬಗ್ಗೆ ತರಬೇತಿ ನೀಡಬೇಕು. 87% ರಷ್ಟು ಮೂಲ ಸೌಕರ್ಯ ಅಗತ್ಯವಿದೆ. 40. ಸಾವಿರ ಖಾಸಗಿ ಶಾಲಾ ಶಿಕ್ಷಕರು ಉದ್ಯೋಗ ಕಳೆದುಕೊಂಡಿದ್ದಾರೆ.

ವಿದ್ಯಾಗಮನ ತರಗತಿ ನಡೆಸುವಂತೆ ಹೇಳಿದ್ದಾರೆ ಆದರೆ ಇದರ ಪ್ರಾಯೋಗಿಕ ಜಾರಿ ಬಹಳ ಕಷ್ಟಕರವಾಗಿದೆ ಮತ್ತು ಶಿಕ್ಷಕರಿಗೂ ಇದು ಕಷ್ಟವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಸರ್ಕಾರಕ್ಕೆ ಸಲಹೆಗಳು

– ಮಧ್ಯಾಹ್ನದ ಬಿಸಿಯೂಟ ಯೋಜನೆ ಮನೆಗೆ ಕಳುಹಿಸಬೇಕು.

– ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ನೀಡಬೇಕು.

– ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ಬಗ್ಗೆ ಯೋಜನೆ ರೂಪಿಸಬೇಕು.

– ಈ ವರ್ಷ ಶಾಲೆ ಯಾವಾಗಿಂದ ಯಾವ ರೀತಿ ಆರಂಭಿಸುತ್ತಿದ್ದಾರೆ ಎನ್ನುವುದನ್ನು ಸರ್ಕಾರ ತಿಳಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next