Advertisement
ಅವರು ಕುಂಬ್ರ ಸ.ಪ.ಪೂ. ಕಾಲೇಜಿನಲ್ಲಿ ಮೇ 29ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಅನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಶೈಕ್ಷಣಿಕ ಅವಧಿಯಲ್ಲಿ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಪಬ್ಲಿಕ್ ಸ್ಕೂಲ್ ಅನ್ನು ಸರಕಾರ ಸಾಂಕೇತಿಕವಾಗಿ ಆರಂಭ ಮಾಡಿತ್ತು. ಅದು ಯಶಸ್ವಿಯಾದ ಕಾರಣ ಈ ಬಾರಿ ಎಲ್ಲ ತಾಲೂಕುಗಳಲ್ಲಿ ಪಬಿಕ್ ಸ್ಕೂಲ್ ಆರಂಭಿಸಲಾಗಿದೆ. ಆಂಗ್ಲ ಮಾಧ್ಯಮ ಎಲ್ಕೆಜಿಯಿಂದ ಶಿಕ್ಷಣ ಆರಂಭಗೊಳ್ಳುತ್ತದೆ. ಉತ್ತಮ ಬೇಡಿಕೆ ಇದ್ದು, ಮಕ್ಕಳ ದಾಖಲಾತಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಸರಕಾರಿ ಶಾಲೆಯನ್ನು ಉಳಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಆಂಗ್ಲ ಮಾಧ್ಯಮದ ಜತೆಗೆ ಕನ್ನಡ ಮಾಧ್ಯಮಕ್ಕೂ ಒತ್ತು ನೀಡುವಂತಾಗಬೇಕು ಎಂದು ಹೇಳಿದರು.
ಕನಿಷ್ಠ 30 ಮಕ್ಕಳು ಇರಬೇಕು ಎನ್ನುವುದು ಸರಕಾರದ ನಿಯಮ. ಆದರೆ ಎಲ್ಕೆಜಿಯಿಂದ 1ನೇ ತರಗತಿಗೆ ಎಷ್ಟೇ ಮಕ್ಕಳು ಬಂದರೂ ಅವರನ್ನು ದಾಖಲಾತಿ ಮಾಡಿಕೊಳ್ಳಬೇಕಾಗುತ್ತದೆ. ಒಂದನೇ ತರಗತಿಗೆ ಸರಕಾರ ಶಿಕ್ಷಕರನ್ನು ನೇಮಕ ಮಾಡುತ್ತದೆ. ಎಲ್ಕೆಜಿಗೆ ಪೋಷಕರೇ ಈ ಬಾರಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಎಲ್ಲರೂ ಒಟ್ಟಾಗಿ ಈ ಕಾರ್ಯವನ್ನು ಮಾಡಿದರೆ ನಮ್ಮ ಮಕ್ಕಳಿಗೆ ಅದರಿಂದ ಪ್ರಯೋಜನವಾಗಲಿದೆ ಎಂದು ಶಾಸಕರು ಹೇಳಿದರು. ತರಗತಿ ಕೋಣೆಗಳ ಕೊರತೆ ಇದ್ದಲ್ಲಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು. ಶಾಲಾ ಪೋಷಕರ, ಹಳೆ ವಿದ್ಯಾರ್ಥಿಗಳು, ಎಸ್ಡಿಎಂಸಿ,ಊರಿನ ಸಂಘ ಸಂಸ್ಥೆಗಳನ್ನು ಜತೆಯಗಿ ಸೇರಿಸಿ ಶಾಲೆಯನ್ನು ಅಭಿವೃದ್ಧಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.