ಶಿವಮೊಗ್ಗ : ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಇರುವ ವೇಳೆ ಸೊರಬ ಕ್ಷೇತ್ರದಲ್ಲಿ ಸಹೋದರರ ಸವಾಲ್ ತೀವ್ರಗೊಂಡಿದ್ದು ಆರೋಪ-ಪ್ರತ್ಯಾರೋಪಗಳ ಸುರಿಮಳೆ ಮಾಡಲಾಗುತ್ತಿದ್ದು, ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರು ಸಹೋದರ ಕಾಂಗ್ರೆಸ್ ನಾಯಕ, ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವಿರುದ್ಧ ಬುಧವಾರ ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ,ಸೊರಬದಲ್ಲಿ ಅಧಿಕಾರಿಗಳ ವರ್ಗಾವಣೆ ಕುರಿತು ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ, ಸಹೋದರ ಮಧು ಬಂಗಾರಪ್ಪ ಹೇಳಿಕೆ ವಿಚಾರಕ್ಕೆ ಕಿಡಿ ಕಾರಿದ ಅವರು, ಮಧು ಬಂಗಾರಪ್ಪ ಮೂರ್ಖತನದ ಹೇಳಿಕೆ ನೀಡಿದ್ದಾರೆ.ಟೀಚರ್ಸ್ ಟ್ರಾನ್ಸ್‌ಫರ್ ಆಗುವುದು ಕೌನ್ಸೆಲಿಂಗ್ ಮೂಲಕ.ಸಿಎಂ ಕೂಡ ವರ್ಗಾವಣೆಯಲ್ಲಿ ಎನು ಮಾಡೋಕೆ ಆಗುವುದಿಲ್ಲ. ಅವರು ತಾಲೂಕು ಹಾಗೂ ರಾಜಕಾರಣ ಬಿಟ್ಟು ಬಹಳ ದಿನ ಆಗಿದೆ.ಇವಾಗ ಸ್ವಲ್ಪ ಬೇಲ್ ಮೇಲೆ ಓಡಾಡುತ್ತಿದ್ದಾರೆ.ಬೇಲ್ ಕೊಡೋ ರಾಜ್ಯಾಧ್ಯಕ್ಷರು. ಬೇಲ್ ಸಿಕ್ಕಿರೋ ಹಿಂದುಳಿದ ವರ್ಗದ ಅಧ್ಯಕ್ಷರು ಬೇಸ್ ಲೆಸ್ ಅಗಿ ಮಾತನಾಡುತ್ತಿದ್ದಾರೆ ಎಂದರು.
6.6 ಕೋಟಿ ಚೆಕ್ ಬೌನ್ಸ್ ಕೇಸ್ ಅಲ್ಲಿ ಬೇಲ್ ಪಡೆದುಕೊಂಡು ಮಧು ಬಂಗಾರಪ್ಪ ಓಡಾಡುತ್ತಿದ್ದಾರೆ.ನನಗೆ ಬಿಜೆಪಿ ಪಾರ್ಟಿ ಸಿದ್ದಾಂತ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ.ಕಳೆದ ಐದು ವರ್ಷದಲ್ಲಿ ನನಗೆ ಪಕ್ಷ ಸಿದ್ದಾಂತ ಕಲಿಸಿಕೊಟ್ಟಿದೆ. ನಾನು ಕಲಿಯುತ್ತಿದ್ದೇನೆ. ಮುಂದೆಯೂ ಸಿದ್ದಾಂತ ಕಲಿಯುತ್ತೇನೆ. ಇವರು ಮೊದಲು ಸ್ಫರ್ಧೆ ಮಾಡಿದ್ದು, ಯಾವ ಪಾರ್ಟಿಯಿಂದ? ಇವರು ರನ್ನಿಂಗ್ ನಲ್ಲಿದ್ದಾರೆ.ಬಿಜೆಪಿ, ಸಮಾಜವಾದಿ, ಜೆಡಿಎಸ್, ಕಾಂಗ್ರೆಸ್ ಹೀಗೆ ಹೋಗುತ್ತಿದ್ದಾರೆ. ಆಪ್ ಒಂದು ಪಾರ್ಟಿ ಬಾಕಿ ಇದೆ. ಅದಕ್ಕೂ ಹೀ ವಿಲ್ ಗೋ(ಹೋಗುತ್ತಾರೆ) ಎಂದರು.
ಈಗಾಗಲೇ ಕಡೆಯ ಚುನಾವಣೆ. ನನ್ನ ಪ್ರಯತ್ನ ಅಂತಾ ಹೇಳ್ತಿದ್ದಾರೆ.ಚೆಕ್ ಬೌನ್ಸ್ ಕೇಸ್ ಉಳಿಸಿಕೊಳ್ಳೋಕೆ ಇದು ಕಡೆಯ ಚುನಾವಣೆ ಅಂತಿದ್ದಾರೆ. ಇದನ್ನು ನನಗಿಂತ ಚೆನ್ನಾಗಿ ಜೆಡಿಎಸ್ ಅವರೇ ಹೇಳುತ್ತಾರೆ. ಎಂಪಿ ಚುನಾವಣೆಯಲ್ಲಿ ಎನು ಸರ್ಕಸ್ ಮಾಡಿದರು ಎಂದು, ಸೊರಬದಲ್ಲಿ ಏನು ಬದಲಾವಣೆ ಆಗಿದೆ ಎಂದು ಜನ ತೋರಿಸ್ತಾರೆ ಎಂದರು.
Related Articles
ವರ್ಗಾವಣೆ ಮಾಡೋದು ನನ್ನ ಕೈಯಲ್ಲಿ ಇಲ್ಲ.ಅದು ಒಂದು ಸರ್ಕಾರದ ಪ್ರಕ್ರಿಯೆ. ಅವರು ಕೊಟ್ಟ ಅಧಿಕಾರಿಗಳ ಜೊತೆ ನಾವು ಕೆಲಸ ಮಾಡಿದ್ದೆವೆ.ನಾನು ತಾಲೂಕಿನಲ್ಲಿ ಕೆಲಸಗಳು ಕ್ರಮಬದ್ಧವಾಗಿ ಆಗಬೇಕು ಅಷ್ಟೇ. ಈ ಹಿಂದೆ ಸೊರಬದಲ್ಲಿ ಹಕ್ಕುಪತ್ರಗಳ ನಕಲು, ಗೋಲ್ ಮಾಲ್ ಸಂಬಂಧ ಕ್ರಮಕ್ಕೆ ಮನವಿ ಮಾಡಿದ್ದೆ.ಸೊರಬದಲ್ಲಿದ್ದ ತಹಸೀಲ್ದಾರ್, ಬೇರೆಡೆಗೆ ವರ್ಗಾವಣೆಯಾದ ಮೇಲೆ ಸಸ್ಪೆಂಡ್ ಆದರು.ಹಿಂದಿನ ಡಿಸಿ ಶಿವಕುಮಾರ್ ದಾಖಲೆಗಳನ್ನ ವಶಪಡಿಸಿಕೊಂಡು ತಹಶೀಲ್ದಾರ್ ಮೇಲೆ ಕ್ರಮ ಜರುಗಿಸಿದ್ದಾರೆ. ಹತ್ತಕ್ಕೂ ಅಧಿಕ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಎಂದು ಈಗಲೂ ಒತ್ತಾಯ ಮಾಡುತ್ತಿದ್ದೇನೆ. ಅಂತಹದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಟ್ರೈಕ್ ಮಾಡಲಿಲ್ಲ.ಹಿಂದಿನ ಶಾಸಕ ಮಾಡಿದ ಅಕ್ರಮಗಳ ದಾಖಲೆ ಇವೆ. ಐದು ವರ್ಷಗಳ ಹಿಂದೆ, ಸೊರಬದಲ್ಲಿ ಶೌಚಾಲಯಗಳನ್ನ ತೊಳೆಯುವರೂ ಇರಲಿಲ್ಲ.ಈಗ ಉತ್ಕೃಷ್ಟ ವ್ಯವಸ್ಥೆ ಸೊರಬದಲ್ಲಿ ಇದೆ.ಕಂದಾಯ ಇಲಾಖೆಯಲ್ಲಿ ಗುರುತರವಾದ ಬದಲಾವಣೆ ತಂದಿದ್ದೇನೆ. ಸೊರಬ ತಾಲೂಕಿಗೆ ಬಂದಿದ್ದೇ ಮೂವರು ಗ್ರೇಡ್ -೧ ತಹಶೀಲ್ದಾರ್ ಗಳು. ಉಳಿದವರು ಪ್ರೊಬೆಶನರಿ ಹಾಗೂ ಗ್ರೇಡ್ -೨ ತಹಶೀಲ್ದಾರ್ ಗಳು.ಪ್ರಿನ್ಸಿಪಲ್ ಸೆಕ್ರೇಟರಿಗಳು ಎಷ್ಟು ಜನ ಟ್ರಾನ್ಸ್‌ಫರ್ ಆಯ್ತು.ಯಾಕೇ ರಾಜ್ಯ ಸಂಘ ಪ್ರತಿಭಟನೆ ಮಾಡಲಿಲ್ಲ.ವರ್ಗಾವಣೆ ಸರ್ಕಾರದ ಪರಮಾಧಿಕಾರ ಅದು.ನೀವು ಮಾಡಬಾರದು ಅಂದರೂ ಹೇಗೆ?ಚಾಲೆಂಜ್ ಮಾಡೋಕೆ ಹೈಕೋರ್ಟ್ ಇದೆ. ಕೆಎಟಿ ಇದೆ.ನೀವು ಸರಿಯಾಗಿದ್ದರೇ ಮತ್ತೇ ಅದೇ ಸ್ಥಾನಕ್ಕೆ ಬರಬಹುದು ಅಲ್ವಾ? ಎಂದು ಪ್ರಶ್ನೆಗಳ ಸುರಿಮಳೆಗೈದರು.
ನಾನು ನನ್ನ ತಾಲೂಕಿನ ಕಂದಾಯ ಇಲಾಖೆ ನೌಕರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೊರಬದಿಂದ ಯಾರು ಕೂಡ ಪ್ರತಿಭಟನೆಗೆ ಬಂದಿಲ್ಲ.ಅವರಿಗೆ ಸತ್ಯ ಗೊತ್ತು.ನಾನು ಕೊಟ್ಟಿದ್ದರೆ ಅಧ್ಯಕ್ಷರುಗಳು ಪ್ರೂವ್ ಮಾಡಲಿ.ಬೇರೆ ಎಲ್ಲಾ ಇಲಾಖೆಯಲ್ಲೂ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.ಕೃಷಿ, ಲೋಕೋಪಯೋಗಿ ಸೇರಿದಂತೆ ಎಲ್ಲಾ ಇಲಾಖೆಯಲ್ಲಿ ಮುರ್ನಾಲ್ಕು ವರ್ಷದಿಂದ ಕೆಲಸ ಮಾಡ್ತಿದ್ದಾರೆ.ಅವರು ಮಾಡಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರ ಎಂದರು.