Advertisement

Gangavathiಸಮಗ್ರ ಅಭಿವೃದ್ಧಿಗಾಗಿ ಕೆಕೆಡಿಬಿ ಅಧ್ಯಕ್ಷರನ್ನು ಭೇಟಿಯಾದ ಶಾಸಕ ಜನಾರ್ದನ ರೆಡ್ಡಿ

09:26 PM Oct 20, 2023 | Team Udayavani |

ಗಂಗಾವತಿ: ಗಂಗಾವತಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯ್ ಸಿಂಗ್ ರವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಗಂಗಾವತಿ ಕ್ಷೇತ್ರದ ಕೃಷಿ ಮಹಾವಿದ್ಯಾಲಯಕ್ಕೆ ಸ್ವಂತ ಕಟ್ಟಡ ಹಾಗೂ ಹಾಸ್ಟೆಲ್ ನಿರ್ಮಾಣ, ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಕಾಂಪೌಂಡ್ ಹಾಗೂ ಪ್ರತೇಕ ಹಾಸ್ಟೆಲ್ ನಿರ್ಮಾಣ, ಕೊಪ್ಪಳ ವಿವಿಯ ಪಿಜಿ ಕೇಂದ್ರವನ್ನು ಗಂಗಾವತಿಯಲ್ಲಿ ಆರಂಭಿಸಲು ಅನುದಾನ ಬಿಡುಗಡೆ. ಸರಕಾರಿ ಉಪವಿಭಾಗ ಮತ್ತು ತಾಯಿ ಮಕ್ಕಳ ಆಸ್ಪತ್ರೆಗೆ ಇನ್ನಷ್ಟು ಅನುದಾನ, ನಗರಸಭೆಯ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಮಳೆಕೊಯ್ಲು ಯೋಜನೆ, ಅಂಗನವಾಡಿ ಕಟ್ಟಡಗಳು, ಕೃಷಿ ಇಲಾಖೆ ಕಚೇರಿ, ಶಿಶು ಅಭಿವೃದ್ಧಿ ಕಚೇರಿ, ಸಮಾಜ ಕಲ್ಯಾಣ ಇಲಾಖೆಯ ಕಚೇರಿ, ಕಾರ್ಮಿಕ ಇಲಾಖೆಯ ಕಚೇರಿ, ಬಿಇಒ ಕಚೇರಿಗಳನ್ನು ನೂತನವಾಗಿ ನಿರ್ಮಿಸಲು ಅನುದಾನ.

ಇತಿಹಾಸ ಪ್ರಸಿದ್ಧ ಕಿಷ್ಕಿಂಧಾ ಅಂಜನಾದ್ರಿ, ಆನೆಗೊಂದಿ ಭಾಗದಲ್ಲಿರುವ ಗ್ರಾಮಗಳು ಮತ್ತು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು, ಸಾಣಾಪೂರ ಫಾಲ್ಸ್, ಲೇಕ್ ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ, ಕುಮಾರ ರಾಮನಬೆಟ್ಟ, ಹಿರೇಬೆಣಕಲ್ ಮೋರ್ಯ ಶಿಲಾಸಮಾಧಿಗಳು, ಎಚ್.ಆರ್.ಜಿ.ನಗರದ ಬೆಟ್ಟ ಮತ್ತು ಆಗೋಲಿ ಬೆಟ್ಟದ ಮೇಲಿರುವ ಶಿಲಾಯುಗದ ಮನೆಗಳ ವೀಕ್ಷಣೆಗೆ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ರಸ್ತೆ, ಕುಡಿಯುವ ನೀರು, ಶೌಚಾಲಯ ನಿರ್ಮಿಸಲು ಕಲ್ಪಿಸಲು ಅನುದಾನ, ದುರುಗಮ್ಮನಹಳ್ಳ ತಡೆಗೋಡೆ ಹೂಳೆತ್ತಲು ಚರಂಡಿ ನೀರನ್ನು ಶುದ್ಧೀಕರಣ ಮಾಡಿ ನದಿಗೆ ಬಿಡುವ ಯೋಜನೆ ಸೇರಿ ನೀರಾವರಿ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಕುರಿತು ಅನುದಾನ ನೀಡುವ ಸಲುವಾಗಿ ಮನವಿ ಸಲ್ಲಿಸಲಾಯಿತು. ಇದಕ್ಕೆ ಅಜಯ್ ಸಿಂಗ್ ರವರು ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚಿನ ರೀತಿಯಲ್ಲಿ ಅನುದಾನ ನೀಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next