Advertisement

Teacher’s Day: ತಮ್ಮ ಶಿಕ್ಷಕಿಯನ್ನು ನೆನಪಿಸಿಕೊಂಡು ಭಾವುಕರಾದ ಶಾಸಕ ಗಾಲಿ ಜನಾರ್ದನ ರೆಡ್ಡಿ

03:11 PM Sep 05, 2023 | Team Udayavani |

ಗಂಗಾವತಿ: ಬಳ್ಳಾರಿ ಮುನ್ಸಿಪಲ್ ಶಾಲೆಯ ಶಿಕ್ಷಕಿ ಶಾರದಮ್ಮ ಅವರನ್ನು ನೆನಪು ಮಾಡಿಕೊಂಡು ಶಾಸಕ ಗಾಲಿ ಜನಾರ್ದನರೆಡ್ಡಿ ಭಾವುಕರಾದ ಪ್ರಸಂಗ ಗಂಗಾವತಿಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಸೆ.5ರ ಮಂಗಳವಾರ ಜರುಗಿತು.

Advertisement

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಮನುಷ್ಯ ಯಾವುದೇ ಕ್ಷೇತ್ರದಲ್ಲಿ ಸಾಧನೆ ಕಂಡು ಕೊಳ್ಳಲು ಶಿಕ್ಷಕ-ಶಿಕ್ಷಕಿಯ ಮಾರ್ಗದರ್ಶನ ಆಶೀರ್ವಾದ ಅವಶ್ಯವಾಗಿದೆ. ತಾನು ರಾಜಕಾರಣಿ, ಉದ್ಯಮಿಯಾಗಲು ಹೊಸಪೇಟೆ ಬಳ್ಳಾರಿ ಶಿಕ್ಷಕರ ಆಶೀರ್ವಾದ ಕಾರಣ. ಪರೀಕ್ಷೆ ಬರೆಯುವಲ್ಲಿ ವಿಫಲವಾದ ಸಂದರ್ಭದಲ್ಲಿ ಮುನ್ಸಿಪಲ್ ಶಾಲೆಯ ಶಾರದಮ್ಮ ಟೀಚರ್ ಚೆನ್ನಾಗಿ ಹೊಡೆದಿದ್ದರು. ನಮ್ಮ ತಂದೆ ಪೊಲಿಸ್ ಆಗಿದ್ದರು. ನಾನು ಶಾಲೆಯಿಂದ ಪೊಲೀಸ್ ಠಾಣೆಗೆ ತೆರಳಿ ನಮ್ಮಪ್ಪನಿಗೆ ದೂರು ಹೇಳಿದ್ದೆ. ನಮ್ಮ ತಂದೆ ಶಾಲೆಗೆ ಆಗಮಿಸಿ ಹೊಸಪೇಟೆಯಿಂದ ವರ್ಗಾ ಆಗಿ ಬಂದಿದ್ದರಿಂದ ಮಗನಿಗೆ ಓದಲು ಆಗಿಲ್ಲ ಕ್ಷಮಿಸಿ ಮುಂದಿನ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆಯಲಿದ್ದಾನೆ ಎಂದು ಹೇಳಿದರು.

ನಂತರ ಶಾರದಮ್ಮ ಟೀಚರ್ ತರಗತಿಯಲ್ಲಿ ಜನಸೇವೆ ಜನಾರ್ದನನ ಸೇವೆ ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದಾಗ ನಾನು ಪ್ರಥಮ ಬಹುಮಾನ ಪಡೆದಾಗ ಶಾರದಮ್ಮ ಟೀಚರ್ ತುಂಬಾ ಸಂತೋಷಪಟ್ಟಿದ್ದರು ಎಂದು ತಮ್ಮ ಬಾಲ್ಯದ ನೆನಪನ್ನು ಸ್ಮರಿಸಿಕೊಂಡರು. ಶಿಕ್ಷಕರ ಮನವಿ ಮೇರೆಗೆ ಬಿಇಒ ಕಚೇರಿ ಹಾಗೂ ಗುರುಭವನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಸಿಂಗನಾಳ, ಉದ್ಯಮಿ ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿಬಾಬು, ಸಿಂಗನಾಳ ಸುರೇಶ,ಬಿಇಒ ವೆಂಕಟೇಶ, ರಾಘವೇಂದ್ರ, ಹನುಮಂತಪ್ಪ, ಬಲಭೀಮಸೇನರಾವ್ ಜೋಶಿ, ಚಾಂದಪಾಷಾ, ರಂಗಸ್ವಾಮಿ, ಮಂಜುನಾಥ ವಸ್ತ್ರದ್, ಸರ್ದಾರ್ ಅಲಿ, ಸೇರಿ ಅನೇಕರಿದ್ದರು.

Advertisement

ನಿವೃತ್ತ ಶಿಕ್ಷಕರು, ಜಿಲ್ಲಾ ತಾಲೂಕು ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next