Advertisement

ಶಾಸಕ ಸಿ.ಟಿ.ರವಿಗೆ ಕೊಲೆ ಬೆದರಿಕೆ ಪತ್ರ

09:06 AM Jan 31, 2018 | |

ಚಿಕ್ಕಮಗಳೂರು: ಮುಸ್ಲಿಂ ಸಂಘಟನೆಯ ಹೆಸರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಅವರಿಗೆ ಕೊಲೆ ಬೆದರಿಕೆ ಪತ್ರವೊಂದು ಬಂದಿದ್ದು, ಈ ಕುರಿತು ಅವರು ಮಂಗಳವಾರ ಜಿಲ್ಲಾ ರಕ್ಷಣಾಧಿಕಾರಿ ಕೆ. ಅಣ್ಣಾಮಲೈ ಅವರಿಗೆ ದೂರು ಸಲ್ಲಿಸಿದರು. ಬೆರಳಚ್ಚು ಮಾಡಲಾಗಿರುವ ಪತ್ರ ಸಿ.ಟಿ. ರವಿ ಅವರ ಮನೆಗೆ ಸೋಮವಾರ ಬಂದಿದೆ. ಬೆಂಗಳೂರಿನಿಂದ ಈ ಪತ್ರ ಬಂದಿದ್ದು, ಪತ್ರದಲ್ಲಿ ಯಾರ ಸಹಿ ಇಲ್ಲ. ಪತ್ರವನ್ನು ಅಹೆ ಹದೀಸ್‌ ಗ್ರೂಪ್‌ ಆಫ್‌ ಕರ್ನಾಟಕ (ಲಾಲ್‌ ಮಸ್ಜಿದ್‌, ಶಿವಾಜಿನಗರ್‌) ಎಂಬ ಸಂಘಟನೆ ಹೆಸರಿನಲ್ಲಿ ಕಳುಹಿಸಲಾಗಿದೆ.

Advertisement

ಪತ್ರದೊಂದಿಗೆ ಓರ್ವ ವ್ಯಕ್ತಿಯ ಭಾವಚಿತ್ರದ ಜೆರಾಕ್ಸ್‌ ಪ್ರತಿಯನ್ನು ಲಗತ್ತಿಸಲಾಗಿದ್ದು, ಭಾವಚಿತ್ರದ ಪಕ್ಕದಲ್ಲಿ ರೌಡಿ ಪರ್ವಿನ್‌ ಎಂದು
ಬರೆಯಲಾಗಿದೆ. ಇಡೀ ಪತ್ರದಲ್ಲಿ ರೌಡಿ ಪರ್ವಿನ್‌ ಹೆಸರನ್ನು ಹಲವು ಬಾರಿ ಬಳಸಲಾಗಿದ್ದು, ಮಂಗಳೂರಿನ ದೀಪಕ್‌ ರಾವ್‌ನನ್ನು ಕೊಲೆ ಮಾಡಿರುವುದು ಈತನೇ ಎಂದು ಹೇಳಲಾಗಿದೆ. ದಾಬೋಲ್ಕರ್‌, ಪನ್ಸಾರೆ, ಗೌರಿ ಲಂಕೇಶ್‌, ಕಲಬುರ್ಗಿಯವರನ್ನು ಕೊಂದಿರುವುದು ಆರ್‌ ಎಸ್‌ಎಸ್‌, ವಿಎಚ್‌ಪಿ ಹಾಗೂ ಬಿಜೆಪಿ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. “ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ಸುರತ್ಕಲ್‌ನ ಸತ್ಯಜಿತ್‌, ಗೋಪಾಲ್‌, ಜಗದೀಶ್‌, ಪ್ರಮೋದ್‌ ಮುತಾಲಿಕ್‌ ಇವರು ತಮ್ಮ ಸಮುದಾಯಕ್ಕೆ ತೊಂದರೆ ನೀಡುತ್ತಿದ್ದಾರೆ. ನಿಮಗೆ ನಮ್ಮ ಹುಡುಗರ ಜೊತೆ ಬಡಿದಾಡಲು ತಾಕತ್ತು ಇಲ್ಲ. ದೀಪಕ್‌ರಾವ್‌ನನ್ನು ಕೊಂದಿದ್ದು ನಮ್ಮ ಹುಡು  ಗರೇ. ನಮ್ಮ ಹುಡುಗರನ್ನು ಏನೂ ಮಾಡಲು ಸಾಧ್ಯವಿಲ್ಲ. ನೀವು ನಮ್ಮ ಸಮುದಾಯದ ಹುಡುಗರಿಗೆ ತೊಂದರೆ ನೀಡುತ್ತಿದ್ದೀರ’ ಎಂದು ಪತ್ರದಲ್ಲಿ ಬರೆಯಲಾಗಿದೆ.  ಕೊಲೆ ಬೆದರಿಕೆ ಹಾಕಿದ ಪತ್ರ ಕೈಸೇರುತ್ತಿದ್ದಂತೆ ಪತ್ರದೊಂದಿಗೆ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಸಲ್ಲಿಸಿರುವ ಸಿ.ಟಿ. ರವಿ, ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವಿಶೇಷ ತನಿಖಾ ತಂಡ: ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಕೆ. ಅಣ್ಣಾಮಲೈ, ಶಾಸಕ ಸಿ.ಟಿ.ರವಿ ನೀಡಿರುವ
ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಗೆ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲಿಯೇ ಪ್ರಕರಣ ಬೇಧಿಸಲಾಗುವುದು ಎಂದರು. 

ಬಿಜೆಪಿ ಶಾಸಕ ಸಿ.ಟಿ.ರವಿ ಅವರಿಗೆ ಪೊಲೀಸ್‌ ಭದ್ರತೆ ಸೇರಿದಂತೆ ಎಲ್ಲ ರೀತಿಯ ಸುರಕ್ಷತೆ ಒದಗಿಸಲು ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
 ●ರಾಮಲಿಂಗಾರೆಡ್ಡಿ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next