ಚೆನ್ನೈ : ಡಿಎಂಕೆಯಲ್ಲಿ ಹೊಸ ಯುಗದ ಆರಂಭವೆಂಬಂತೆ ಇಂದು ಬುಧವಾರ ಎಂ ಕರುಣಾನಿಧಿ ಅವರ ಪುತ್ರ ಎಂ ಕೆ ಸ್ಟಾಲಿನ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ದ್ರಾವಿಡ ಪಕ್ಷವಾಗಿರುವ ಡಿಎಂಕೆಯ ನೀತಿ ನಿರ್ಧಾರ ಕೈಗೊಳ್ಳುವ ಜನರಲ್ ಕೌನ್ಸಿಲ್ ಮೀಟಿಂಗ್‌ನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.
ಸ್ಟಾಲಿನ್ ಅವರು ತಮಿಳು ನಾಡು ವಿಧಾನಸಭೆಯಲ್ಲಿ ವಿಪಕ್ಷ ನಾಯಕರೂ ಆಗಿದ್ದಾರೆ. ತಮ್ಮ ತಂದೆಯಿಂದ ಪಕ್ಷದ ಪರಮೋಚ್ಚ ಅಧಿಕಾರವನ್ನು ಸ್ಟಾಲಿನ್ ಶೀಘ್ರವೇ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಜನರಲ್ ಕೌನ್ಸಿಲ್ ಮೀಟಿಂಗ್‌ನಲ್ಲಿ ಇಂದು ಕೈಗೊಳ್ಳಲಾಗಿರುವ ನಿರ್ಧಾರವು ಸ್ಟಾಲಿನ್ ಅವರ ನಾಯಕತ್ವಕ್ಕೆ ದೊರಕಿರುವ ಅಧಿಕೃತ ಮುದ್ರೆ ಎಂದು ತಿಳಿಯಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸ್ಟಾಲಿನ್ ಅವರೇ ಡಿಎಂಕೆ ಪಕ್ಷವನ್ನು ಮುನ್ನಡೆಸಿದ್ದರು.
ಅತ್ತ “ಚಿನ್ನಮ್ಮ’ ಶಶಿಕಲಾ ಅವರು ಎಂಎಡಿಎಂಕೆಯ ಹೊಸ ನಾಯಕರಾಗಿ ಮೂಡಿ ಬಂದಿದ್ದು ಇತರ ಡಿಎಂಕೆಯಲ್ಲೀಗ ಸ್ಟಾಲಿನ್ ಹೊಸ ನಾಯಕರಾಗಿ ಗದ್ದುಗೆಯನ್ನೇರಿದ್ದಾರೆ.