Advertisement

ಪರಿಷತ್ ಉಪ ಸಭಾಪತಿಯಾಗಿ ಎಂ.ಕೆ ಪ್ರಾಣೇಶ್ ಆಯ್ಕೆ

01:33 PM Dec 23, 2022 | Team Udayavani |

ಬೆಳಗಾವಿ: ವಿಧಾನ ಪರಿಷತ್ ಉಪ ಸಭಾಪತಿಯಾಗಿ ಎಂ.ಕೆ ಪ್ರಾಣೇಶ್  ಆಯ್ಕೆಯಾಗಿದ್ದಾರೆ.

Advertisement

ಇಂದು ವಿಧಾನ ಪರಿಷತ್ ಉಪಸಭಾಪತಿ ಆಯ್ಕೆಗೆ ಚುನಾವಣೆ ನಡೆಯಿತು. ಎಂ,ಕೆ ಪ್ರಾಣೇಶ್ 39 ಮತ ಪಡೆಯುವ ಮೂಲಕ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಅರವಿಂದ ಅರಳಿ 26 ಮತ ಪಡೆದರು.

ಬಿಜೆಪಿಯಿಂದ ಉಪಸಭಾಪತಿ ಸ್ಥಾನಕ್ಕೆ ಎಂ.ಕೆ ಪ್ರಾಣೇಶ್ ಹೆಸರನ್ನು ಕೋಟಾ ಶ್ರೀನಿವಾಸ್ ಪೂಜಾರಿ, ಎಸ್. ರುದ್ರೇಗೌಡ, ತಳವಾರ್ ಸಾಬಣ್ಣ, ಅರುಣ್ ಡಿಎಸ್ ಅವರು ಪ್ರಸ್ತಾಪ ಮಾಡಿದರು. ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಅರವಿಂದ ಕುಮಾರ್ ಅರಳಿ ಅವರ ಹೆಸರನ್ನು ಬಿ.ಕೆ. ಹರಿಪಸ್ರಾದ್ ಪ್ರಸ್ತಾಪ ಮಾಡಿದರು.

ಜೆಡಿಎಸ್ ನ ಯಾರೊಬ್ಬರೂ ಕೂಡ ಮತ ಚಲಾಯಿಸದೆ ತಟಸ್ಥವಾಗಿದ್ದರು. ಸದನದಲ್ಲಿ 39 ಬಿಜೆಪಿ ಸದಸ್ಯರು, 26 ಕಾಂಗ್ರೆಸ್ ಸದಸ್ಯರು, 8 ಜೆಡಿಎಸ್ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು.

ಇದನ್ನೂ ಓದಿ:ಟೀಂ ಇಂಡಿಯಾ ಆಯ್ಕೆ ಸಮಿತಿಗಾಗಿ ಅರ್ಜಿ ಸಲ್ಲಿಸಿದ ಧೋನಿ, ಸಚಿನ್, ಇಂಝಮಾಮ್ ಉಲ್ ಹಕ್!

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಶುಭ ಹಾರೈಸಿದ್ದು, ವಿಧಾನ ಪರಿಷತ್ ನ ನೂತನ ಉಪ ಸಭಾಪತಿಯಾಗಿ ಆಯ್ಕೆಯಾಗಿರುವ ಎಂ.ಕೆ ಪ್ರಾಣೇಶ್ ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಅನುಭವ ಸದನದ ಕಲಾಪಗಳ ಘನತೆಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಜವಾಬ್ದಾರಿಯುತ ವ್ಯಕ್ತಿ, ಸಜ್ಜನ, ಪ್ರಗತಿಪರ ಚಿಂತನೆ ಇರುವ ರಾಜಕಾರಣಿಯಾದ ಎಂ.ಕೆ. ಪ್ರಾಣೇಶ್ ಅವರಿಂದ ವಿಧಾನಪರಿಷತ್ ಉಪಸಭಾಪತಿ ಸ್ಥಾನಕ್ಕೆ ಬೆಲೆ ಸಿಗಲಿದೆ. ಆ ಮೂಲಕ ಕರ್ನಾಟಕದ ಜನರ ಸಮಸ್ಯೆಗಳಿಗೆ  ಉತ್ತರ ಸಿಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next