Advertisement

ಮಿಜೋರಾಂ: ಕನಿಷ್ಠ ಅಂತರದ ಜಯ 3 ಮತ, ಗರಿಷ್ಠ ಅಂತರದ ಜಯ 2,720

04:30 PM Dec 13, 2018 | Team Udayavani |

ಐಜಾಲ್‌ : ಈಚೆಗೆ ನಡೆದ ಮಿಜೋರಾಂ ವಿಧಾನಸಭೆ ಚುನಾವಣೆಯಲ್ಲಿ  ಕನಿಷ್ಠ ಅಂತರದ ಜಯ 3 ಮತಗಳಲ್ಲೂ ಗರಿಷ್ಠ ಅಂತರದ ಜಯ 2,720 ಮತಗಳ ಅಂತರದಲ್ಲಿ ದಾಖಲಾಗಿರುವುದು ಗಮನಾರ್ಹವಾಗಿದೆ. 

Advertisement

ಕೇವಲ ಮೂರು ಮತಗಳ ಅಂತರದಲ್ಲಿ ಜಯ ಸಾಧಿಸಿದವರು ಮಿಜೋರಾಂ ನ್ಯಾಶನಲ್‌ ಫ್ರಂಟ್‌ (ಎಂಎನ್‌ಎಫ್)ನ  ಲಾಲ್‌ಛಂದಮಾ ರಾಲ್ಟೆ.  ಅವರಿಗೆ ತುಯಿವಾಲ್‌ ಕ್ಷೇತ್ರದಿಂದ ಈ ಅತ್ಯಂತ ಕಡಿಮೆ ಅಂತರದ ಜಯ ದೊರಕಿತು.

ರಾಲ್ಟೆ ಅವರಿಗೆ 5,207 ಮತಗಳು ಸಿಕ್ಕಿದ್ದವು. ಇವರ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್‌ ನ ಆರ್‌ ಎಲ್‌ ಪಿಯನಾವಿಯಾ ಅವರು 5,204 ಮತ ಗಳಿಸಿದ್ದರು.

ಕೇವಲ 3 ಅಂತರಗಳಲ್ಲಿ ದಾಖಲಾದ ಈ ಜಯವನ್ನು ಪ್ರಶ್ನಿಸಿ  ಪಿಯನಾವಿಯಾ ಅವರು ಮತ ಮರು ಎಣಿಕೆಯನ್ನು ಆಗ್ರಹಿಸಿದ್ದರು. ಆ ಪ್ರಕಾರ ನಡೆದ ಮರು ಎಣಿಕೆಯಲ್ಲಿ ಕೂಡ 3 ಮತಗಳಲ್ಲೇ ಜಯದ ಅಂತರ ದೃಢಪಟ್ಟಿತು.

ಗರಿಷ್ಠ 2,720 ಮತಗಳ ಅಂತರದಲ್ಲಿ ಜಯಸಾಧಿಸಿದವರೆಂದರೆ ಹಾಲಿ ಎಂಎನ್‌ಎಫ್ ಶಾಸಕ ಲಾಲ್‌ರುವಾತ್ಕಿಮಾ ಅವರು. 

Advertisement

ಲಾಲ್‌ರುವಾತ್ಕಿಮಾ ಅವರಿಗೆ ಐಜಾಲ್‌ 2ನೇ ಪಶ್ಚಿಮ ಕ್ಷೇತ್ರದ ಸ್ಪರ್ಧೆಯಲ್ಲಿ 7,626 ಮತಗಳು ಬಂದಿದ್ದವು; ಅವರ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್‌ ನ ಲಾಲ್‌ಮಾಲ್‌ಸ್ವಾಮಾ ಅವರಿಗೆ 2,720 ಮತಗಳು ದೊರಕಿದವು. ಹೀಗಾಗಿ ಲಾಲ್‌ರುವಾತ್ಕಿಮಾ ಅವರ ವಿಜಯ ಗರಿಷ್ಠ ಅಂತರದ 2,720 ಮತಗಳಲ್ಲಿ ದಾಖಲಾಯಿತು. 

ಮಿಜೋರಾಂ ನಲ್ಲಿ ಏಕೈಕ ಸ್ಥಾನಗೆದ್ದು ಖಾತೆ ಆರಂಭಿಸಿದ್ದ ಬಿಜೆಪಿ ಅಭ್ಯರ್ಥಿ ಬುದ್ಧ ಧನ ಚಕಾ ಅವರಿಗೆ ಎಂಎನ್‌ಎಫ್ ನ ರಸಿಕ ಮೋಹನ ಛಕಾ ವಿರುದ್ಧ 1,594 ಮತಗಳ ಅಂತರದ ಜಯ ಪ್ರಾಪ್ತವಾಯಿತು. 

40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಯಲ್ಲಿ ಎಂಎನ್‌ಎಫ್ 26 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್‌ ಕೇವಲ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next