Advertisement

ಮಜೂರು: ಕಲಬೆರಕೆ ಜೇನುತುಪ್ಪ ಮಾರಾಟ ಜಾಲವನ್ನು ಭೇದಿಸಿದ ಸ್ಥಳೀಯರು!ಯುವಕರು ಪೊಲೀಸರ ವಶಕ್ಕೆ

04:21 PM Nov 16, 2020 | sudhir |

ಕಾಪು: ಕಾಪು ತಾಲೂಕಿನ ಮಜೂರು ಪರಿಸರದಲ್ಲಿ ಕಲಬೆರಕೆ ಜೇನು ತುಪ್ಪವನ್ನು ಮಾರಾಟ ಮಾಡುತ್ತಿದ್ದ ಯುವಕರ ಜಾಲವನ್ನು ಸ್ಥಳೀಯರು ಸೋಮವಾರ ಭೇದಿಸಿದ್ದಾರೆ.

Advertisement

ಬಿಹಾರ ಮೂಲದ ರೋಹನ್, ಪರಮ್ ಸಿಂಗ್, ವಿಕಾಸ್, ಬಾದ್ ಶಾ ಸ್ಥಳೀಯರಿಗೆ ಮೋಸ ಮಾಡಲೆಂದು ಬಂದು ಸಿಕ್ಕಿ ಬಿದ್ದವರು.

ಒಂದು ತಿಂಗಳ ಹಿಂದೆ ಮಜೂರು ಪರಿಸರದಲ್ಲಿ ಜೇನು ಮಾರಾಟ ಮಾಡುತ್ತಾ ಬಂದಿದ್ದು, ಸ್ಥಳೀಯರು‌ ಮುಗಿಬಿದ್ದು ಖರೀದಿಸಿದ್ದರು. ಖರೀದಿಸಿದ ಬಳಿಕ ಅದು ಕಲಬೆರಕೆ ಮಿಶ್ರಣದ್ದೆಂದು ಗಮನಕ್ಕೆ ಬಂದಿತ್ತು.

ಸೋಮವಾರ ಮತ್ತೆ ಬಂದ ತಂಡವನ್ನು ಸ್ಥಳೀಯರು ನಿಲ್ಲಿಸಿ, ಪ್ರಶ್ನಿಸಿದ್ದು ಈ ಸಂದರ್ಭ ಯುವಕರು ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಚಿನ್ನಾಭರಣ ಕಿತ್ತುಕೊಂಡ ಪ್ರಕರಣ:ಇನ್ಸ್‌ಪೆಕ್ಟರ್‌ ವಿರುದ್ಧವೇ ದೂರು ನೀಡಿದ ನಿವೃತ್ತ ನೌಕರ

Advertisement

ತಾವು ಜೇನು ಗೂಡಿನಿಂದ ಜೇನು ತೆಗೆದು ಬಳಿಕ ಅದಕ್ಕೆ ಸಕ್ಕರೆ, ಬೆಲ್ಲ ಮತ್ತಿತರ ಸಾಮಾಗ್ರಿಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದೇವೆ. ಹೆಚ್ಚಾಗಿ ಹಳ್ಳಿ ಪ್ರದೇಶದ ಜನರನ್ನೇ ಟಾರ್ಗೆಟ್ ಮಾಡಿ ಜೇನು ತುಪ್ಪ ಮಾರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಬಳಿಕ‌ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next