Advertisement

ಭಾರತದ ಸಮುದ್ರಗಡಿ ಉಲ್ಲಂಘನೆ ಸಮರ್ಥಿಸಿಕೊಂಡ ಅಮೆರಿಕ!

10:01 PM Apr 10, 2021 | Team Udayavani |

ವಾಷಿಂಗ್ಟನ್‌: ಅಮೆರಿಕದ ನೌಕಾಪಡೆಯು ಭಾರತದ ಸಮುದ್ರಗಡಿ ಉಲ್ಲಂಘಿಸಿದ ಪ್ರಕರಣದಲ್ಲಿ ಪೆಂಟಗನ್‌ ತನ್ನ ನೌಕಾಪಡೆಯನ್ನು ಸಮರ್ಥಿಸಿಕೊಂಡು ಅಚ್ಚರಿಯ ಹೇಳಿಕೆ ನೀಡಿದ್ದು, “ನಮ್ಮ ನೌಕೆಗಳು ಅಂತಾರಾಷ್ಟ್ರೀಯ ಕಾನೂನಿಗೆ ಅನ್ವಯವಾಗಿಯೇ ನಡೆದುಕೊಂಡಿದೆ’ ಎಂದಿದೆ.

Advertisement

ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಯೇ ಸಂಚರಿಸುವ, ಹಾರಾಟ ನಡೆಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲೂ ಅದೇ ರೀತಿ ನಾವು ನಡೆದುಕೊಂಡಿದ್ದೇವೆ ಎಂದು ಪೆಂಟಗನ್‌ ವಕ್ತಾರ ಜಾನ್‌ ಕಿರ್ಬಿ ಹೇಳಿಕೆ ನೀಡಿದ್ದಾರೆ.

ಈ ಮೂಲಕ, ತಮ್ಮ ನೌಕಾಪಡೆ ತಪ್ಪೇ ಮಾಡಿಲ್ಲ ಎಂಬಂತೆ ಅವರು ಮಾತನಾಡಿದ್ದಾರೆ. ಹಿಂದೂ ಮಹಾಸಾಗರದಲ್ಲಿ ಸಮರಾಭ್ಯಾಸ ವೇಳೆ ಅಮೆರಿಕದ ಕೆಲವು ನೌಕೆಗಳು ಭಾರತದ ವಿಶೇಷ ಆರ್ಥಿಕ ವಲಯದೊಳಕ್ಕೆ ಅನುಮತಿಯಿಲ್ಲದೇ ಪ್ರವೇಶಿದ್ದವು. ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ಆಕ್ಷೇಪ ವ್ಯಕ್ತಪಡಿಸಿತ್ತು.

ಇದನ್ನೂ ಓದಿ :ಸಂಪೂರ್ಣ ಲಾಕ್‍ ಡೌನ್ ಒಂದೇ ನಮಗಿರುವ ಪರಿಹಾರ : ಸಿಎಂ ಉದ್ಧವ್ ಠಾಕ್ರೆ

Advertisement

Udayavani is now on Telegram. Click here to join our channel and stay updated with the latest news.

Next