ಕೇಂಬ್ರಿಜ್: ಸಾಗರ ತಳದ ಪರಿಸರ ಹಾಗೂ ಜೀವಿಗಳ ಅಧ್ಯಯನ, ಮನುಷ್ಯನ ಹಸ್ತಕ್ಷೇಪದಿಂದ ಸಾಗರಕ್ಕೊದಗುವ ಸಂಚಕಾರ ಹಾಗೂ ಹವಾಮಾನ ವೈಪರೀತ್ಯದಿಂದ ಸಾಗರ ತಳದಲ್ಲಿ ಆಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲು ವಿಜ್ಞಾನಿಗಳು ರೋಬೋ ಮೀನನ್ನು ತಯಾರಿಸಿ, ಸಾಗರಕ್ಕಿಳಿಸಿದ್ದಾರೆ. ಇದಕ್ಕೆ “ಸೊಫೈ’ ಎಂದು ಹೆಸರಿಡಲಾಗಿದೆ.
ಈ ಯಾಂತ್ರಿಕ ಮೀನನ್ನು ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತದೆ. ಸಾಗರದಲ್ಲಿ ಯಾವುದೇ ಸಮುದ್ರ ಪ್ರಾಣಿಯಿಂದ ತೊಂದರೆ ಆಗದಿರಲೆಂದು ಇದನ್ನು ಕರ್ಕಶ ಶಬ್ದ ಸೂಸುವ ಯಂತ್ರವನ್ನಾಗಿ ರೂಪಿಸಲಾಗಿದೆ. ಇದೊಂದು ದುಬಾರಿ ಯಂತ್ರ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇದರಲ್ಲೇನಿದೆ? ಕಣ್ಣಿನಲ್ಲಿ ಫಿಶ್ ಎ ಲೆನ್ಸ್ ಅಳವಡಿಸಲಾಗಿದ್ದು, ಆ ಮೂಲಕ ಸಾಗರ ತಳದ ಚಿತ್ರಣ ಮಾಡಬಹುದಾಗಿದೆ. ಇನ್ನು, ಇದರ ದೇಹ ರಚನೆಗಾಗಿ 3ಡಿ ಪ್ರಿಂಟೆಡ್ ಮೆದು ಪ್ಲಾಸ್ಟಿಕ್ ಉಪಯೋಗಿಸಲಾಗಿದೆ. ಹೊಟ್ಟೆಯ ಭಾಗದಲ್ಲಿ “ಸಂಕುಚಿತ ವಾಯು’ (ಕಂಪ್ರಸ್ಡ್ ಏರ್) ತುಂಬಲಾಗಿದ್ದು, ಇದರಿಂದ ರೋಬೋ ಮೆದು ಪ್ಲಾಸ್ಟಿಕ್, ಮೀನಿ ನಂತೆ ಹೊರಳುತ್ತಾ, ಬಳುಕುತ್ತಾ ಸಾಗಲು ಸಾಧ್ಯವಿದೆ. ಇದಲ್ಲದೆ, ಕ್ಯಾಮೆರಾಗಳು, ಪರಿಸರ ಸಂವೇದಿ ಸೆನ್ಸರ್‌ಗಳು, ಸಂವಹನ ಪರಿಕರಗಳನ್ನು ಅಳವಡಿಸಲಾಗಿದೆ. “ಸೂಪರ್ ನಿಂಟೆಂಡೊ ಕಂಟ್ರೋಲ್’ ವ್ಯವಸ್ಥೆ ಮೂಲಕ ಇದನ್ನು ನಿಯಂತ್ರಿಸಲಾಗುತ್ತದೆ.
1.5 ಅಡಿ ಉದ್ದ
60 ಅಡಿ ಸಾಗಬಲ್ಲ ದೂರ
1.5 ಕೆ.ಜಿ ತೂಕ
65 ಅಡಿ ಸಂವಹನ ಸಾಮರ್ಥ್ಯ