ಬಾಗೇಪಲ್ಲಿ: ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಕಾಲದಲ್ಲಿ ಆದ ಶಾಶ್ವತ ಯೋಜನೆಗಳು ಬಿಟ್ಟರೆ, ಹಾಲಿ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಅವರ ವೈಯಕ್ತಿಕ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಅವರ 8 ವರ್ಷ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ ಎಂದು ಪಿಎಸ್‌ಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಿಥುನ್‌ರೆಡ್ಡಿ ಆರೋಪಿಸಿದರು.
ಗೂಳೂರು ಹೋಬಳಿಯ ಮುಲ್ಲಂಗಿಚೆಟ್ಲಪಲ್ಲಿ ಗ್ರಾಮದಲ್ಲಿ ಪಿಎಸ್‌ಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಮಿಥುನ್‌ರೆಡ್ಡಿ ಅವರು ಕಾರ್ಯಕರ್ತರ ಸಮಾವೇಶ ಮತ್ತು ವಿವಿಧ ಪಕ್ಷಗಳಿಂದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕ್ಷೇತ್ರ ಯಾವುದೇ ಅಭಿವೃದ್ಧಿ ಆಗದೇ ಕುಂಠಿತವಾಗಿಯೇ ಉಳಿದಿದೆ. ನಾನು ಯಾವುದೇ ಕಾರಣಕ್ಕೂ ಮುಂಬರುವ 2023ರ ವಿಧಾನಸಭೆ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ವಿವರಿಸಿದರು.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮಿಥುನ್‌ರೆಡ್ಡಿ ಬರುವುದಿಲ್ಲ ಎಂಬ ಊಹಾಪೋಹಗಳು ಕೇಳಿ ಬರುತ್ತಿದ್ದು, ಅದೆಲ್ಲಕ್ಕೂ ಉತ್ತರ ಎಂಬಂತೆ ಬಿಜೆಪಿ, ಕಾಂಗ್ರೆಸ್ ಸೇರಿ ಪಕ್ಷೇತರವಾಗಿ ನನ್ನನ್ನು ಬೆಂಬಲಿಸಿ, ಈ ಸಮಾವೇಶಕ್ಕೆ ಸೇರಿರುವ ಕಾರ್ಯಕರ್ತರೇ ಸಾಕ್ಷಿ ಎಂದು ಹೇಳಿದರು.
ಈ ಕ್ಷೇತ್ರದಲ್ಲಿ ಶಾಶ್ವತವಾದ ನೀರಾವರಿ ಯೋಜನೆಗಳು, ರಸ್ತೆ, ಉದ್ಯೋಗ, ಶಿಕ್ಷಣ ಎಲ್ಲವೂ ಕುಂಠಿತವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಇವರು ಮಾಡಿರುವ ಅಭಿವೃದ್ಧಿ ಶೂನ್ಯ. ದಿವಂಗತ ಮಾಜಿ ಶಾಸಕ ಶ್ರೀರಾಮರೆಡ್ಡಿ ಅವರ ತತ್ವಾದರ್ಶ, ಗುರಿ ಇಟ್ಟು ಕೊಂಡು ನಾನು ಈ ಭಾಗದ ಜನರ ಸೇವೆ ಮಾಡಲು ನಿಮ್ಮೆಲ್ಲರ ಮುಂದೆ ನಿಂತಿದ್ದೇನೆ. ಮುಂದಿನ ಚುನಾವಣೆಯಲ್ಲಿ ನನಗೆ ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಮಿಥುನ್ ರೆಡ್ಡಿ ಬಳಗಕ್ಕೆ ಸೇರ್ಪಡೆ: ಮುಲ್ಲಂಗಚಟ್ಲಪಲ್ಲಿ ಗ್ರಾಮದ ಬಾಬುರೆಡ್ಡಿ, ವೆಂಕಟರೆಡ್ಡಿ ಸೂರಿ, ಮಲ್ಲಿ, ನಾರಾಯಣಪ್ಪ, ಬಾಬು, ಬೈರಾರೆಡ್ಡಿ, ಕುಮಾರ, ಮಂಜು, ರವಿ, ಬೈರಾರೆಡ್ಡಿ, ಸತ್ತಿ, ಆದಿನಾರಾಯಣ, ನಂಜಪ್ಪ, ರಾಮಾಂಜಿ, ನಾಗೇಶ್, ಉತ್ತಪ್ಪ ವಿವಿಧ ಪಕ್ಷಗಳಿಂದ ಮಿಥುನ್ ರೆಡ್ಡಿ ಬಳಗಕ್ಕೆ ಸೇರ್ಪಡೆಯಾದರು.
ಮುಖಂಡರಾದ ಕಿರಣ್‌ಕುಮಾರ್, ಇನಾಯತುಲ್ಲಾ, ವೆಂಕಟರೆಡ್ಡಿ, ಸುಬ್ಬಿರೆಡ್ಡಿ, ರಾಮು, ಆಂಜಿನಪ್ಪ, ಬಾಗೇಪಲ್ಲಿಯ ಪಿ.ಡಿ.ವೆಂಕಟೇಶ್, ನರಸಿಂಹಪ್ಪ, ರಾಜಾರೆಡ್ಡಿ, ಬಾಬುರೆಡ್ಡಿ, ಚನ್ನರಾಯಪ್ಪ, ರಾಮಾಂಜಿ, ಮದ್ದಿಲೇಟ್‌ರೆಡ್ಡಿ, ಗೋಪಾಲರೆಡ್ಡಿ, ಬಾವರೆಡ್ಡಿ, ನರಸಿಂಹಪ್ಪ, ಶ್ರೀನಿವಾಸ್, ಮಧುಸೂದನ್, ರಾಮು, ರಾಮಾಂಜಿ, ನಾರಾಯಣಪ್ಪ, ನಂಜುಂಡಪ್ಪ, ಶ್ರೀನಿವಾಸ್, ಮಣಿ ಕುಮಾರ್, ಸಂತೋಷ್ ಉಪಸ್ಥಿತರಿದ್ದರು.