ಹೊಸದಿಲ್ಲಿ : ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಪತ್ನಿ, ಮಾಜಿ ಬಾಲಿವುಡ್ ನಟಿ ಯೋಗಿತಾ ಬಾಲಿ ಮತ್ತು ಪುತ್ರ ಮಹಾಕ್ಷಯ್ ವಿರುದ್ಧ ರೇಪ್, ಚೀಟಿಂಗ್ ಮತ್ತು ಅನುಮತಿ ಇಲ್ಲದ ಬಲವಂತದ ಗರ್ಭಪಾತದ ಆರೋಪದ ಮೇಲೆ ಎಫ್ಐಆರ್ ದಾಖಲಿಸುವಂತೆ ದಿಲ್ಲಿ ನ್ಯಾಯಾಲಯ ಇಂದು ಸೋಮವಾರ ಆದೇಶಿಸಿದೆ.
ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ದಿಲ್ಲಿಯ ರೋಹಿಣಿ ನ್ಯಾಯಾಲಯ ಆದೇಶಿಸಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಿಥುನ್ ಪುತ್ರ ಮಹಾಕ್ಷಯ್, ಮದಾಲಸಾ ಶರ್ಮಾ ಅವರನ್ನು ವರಿಸಲಿದ್ದಾರೆ ಎಂಬ ವದಂತಿ ಕಳೆದ ಜೂನ್ ತಿಂಗಳ ಆದಿಯಲ್ಲಿ ಕೇಳಿ ಬಂದಿತ್ತು. ಮದಾಲಸಾ ಶರ್ಮಾ ಅವರು ಎಸ್ ಬಾಸ್ ಖ್ಯಾತಿಯ ಶೀಲಾ ಶರ್ಮಾ ಅವರ ಪುತ್ರಿ.
ಮದಾಲಸಾ ಅವರು ಮಾಡೆಲ್ ಆಗಿದ್ದು ಬಳಿಕ ನಟನೆಗೆ ಇಳಿದವರು. ಈಕೆ ಹಿಂದಿ, ತೆಲುಗು, ಕನ್ನಡ, ತಮಿಳು, ಜರ್ಮನ್ ಮತ್ತು ಪಂಜಾಬಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Related Articles
ಮಹಾಕ್ಷಯ್ ಅವರು “ದ ಹಾಂಟೆಡ್ – 3ಡಿ’, ಜಿಮ್ಮಿ ಮತ್ತು ದ ಮರ್ಡರ್ ಚಿತ್ರಗಳಿಂದ ಪರಿಚಿತರಾಗಿದ್ದಾರೆ. ಮದಾಲಸಾ ಜತೆಗಿನ ಇವರ ವಿವಾಹ ಇದೇ ಜುಲೈ 7ರಂದು ನಡೆಯುವುದೆಂದು ಗೊತ್ತಾಗಿತ್ತು.