Advertisement
ರಂಗಚೇತನ ಸಂಸ್ಕೃತಿ ಟ್ರಸ್ಟ್, ಆಶಯ ಪಬ್ಲಿಕೇಷನ್ಸ್ ಮತ್ತು ಚೌಟ ಟ್ರಸ್ಟ್ ವತಿಯಿಂದ ಭಾನುವಾರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಡಿ.ಕೆ.ಚೌಟರ ತುಳು ಕಾದಂಬರಿ ಮಿತ್ತಬೈಲು ಯಮುನಕ್ಕ ಇಂಗ್ಲಿಷ್ ಅನುವಾದ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
Related Articles
Advertisement
ತುಳು ಭಾಷೆಯಲ್ಲಿ ಸಮರ್ಥವಾದ ಶಕ್ತಿಯುತ ಸಾಹಿತ್ಯ ಅಥವಾ ಕಾದಂಬರಿ ಇದೆ ಎನ್ನುವುದು ಇದು ತೋರಿಸಿಕೊಡುತ್ತದೆ. 2005ರಲ್ಲಿ ತುಳುವಿನಲ್ಲಿ ರಚನೆಯಾಗಿದ್ದ ಈ ಕಾದಂಬರಿ, 2008ರಲ್ಲಿ ಕನ್ನಡಕ್ಕೆ ಅನುವಾದಗೊಂಡು ಈಗ ಇಂಗ್ಲಿಷ್‌ಗೆ ತರ್ಜುಮೆ ಗೊಂಡಿದೆ. ತುಳುವಿನಲ್ಲಿರುವ ಮೂಲ ಕೃತಿಯ ಆಶಯಕ್ಕೆ ಯಾವುದೇ ಧಕ್ಕೆಯಾಗದಂತೆ ಮೂಲ ಓದುಗರಿಗೆ ಸಿಗುವಷ್ಟೇ ಸತ್ವವನ್ನು ಭಾಷಾಂತರ ಕೃತಿಯಲ್ಲೂ ನೀಡಿದ್ದಾರೆ ಎಂದು ಕೃತಿಯ ವೈಶಿಷ್ಟéವನ್ನು ತಿಳಿಸಿದರು.
ಕಾದಂಬರಿಕಾರ ಡಾ.ಡಿ.ಕೆ.ಚೌಟ, ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಮತ್ತು ತುಳು ವಿದ್ವಾಂಸ ಪ್ರೊ.ಬಿ.ಎ.ವಿವೇಕ್ ರೈ, ಕೃತಿಯ ಅನುವಾದಕರಾದ ಪ್ರೊ.ಬಿ.ಸುರೇಂದ್ರ ರಾವ್, ಪ್ರೊ.ಕೆ.ಚಿನ್ನಪ್ಪಗೌಡ, ರಂಗಚೇತನ ಸಂಸ್ಕೃತಿ ಟ್ರಸ್ಟ್‌ನ ನಂಜುಂಡಸ್ವಾಮಿ ತೊಟ್ಟವಾಡಿ ಮೊದಲಾದವರು ಉಪಸ್ಥಿತರಿದ್ದರು.
ತುಳು ಭಾಷೆಯನ್ನು ಇನ್ನೊಬ್ಬರಿಗೆ ತಿಳಿಸುವ ಉದ್ದೇಶದಿಂದ ಇಂಗ್ಲಿಷ್ ಅನುವಾದ ಕಾರ್ಯ ಮಾಡಿದ್ದೇವೆ. ಇದು ತುಳು ಭಾಷೆಯ ಅತ್ಯಂತ ಪವರ್‌ಫುಲ್ ಕಾದಂಬರಿ. ಇಂತಹ ಕಾದಂಬರಿಗಳ ಸಂಖ್ಯೆ ಬಹಳ ಕಡಿಮೆ.-ಪ್ರೊ.ಬಿ.ಸುರೇಂದ್ರ ರಾವ್, ಅನುವಾದಕ ತುಳು ಭಾಷೆ ಮತ್ತು ಸಾಹಿತ್ಯದ ಉಳಿವಿಗಾಗಿ 114 ತುಳು ಕವನಗಳನ್ನು ಇಂಗ್ಲಿಷ್‌ಗೆ ಭಾಷಾಂತರ ಮಾಡಿದ್ದೇವೆ. 60 ಕಥೆಗಳು ಇಂಗ್ಲಿಷ್‌ಗೆ ಅನುವಾದ ಆಗುತ್ತಿವೆ. ತುಳು ಅತ್ಯಂತ ಪುರಾತನ ಭಾಷೆಯಾದರೂ, ಸಾಹಿತ್ಯ ರೂಪದಲ್ಲಿರುವುದು ಕಡಿಮೆ.
-ಪ್ರೊ.ಕೆ.ಚಿನ್ನಪ್ಪಗೌಡ, ಅನುವಾದಕ ಶೇ.75ಕ್ಕೂ ಹೆಚ್ಚು ತುಳು ಭಾಷಿಕರು ಇಂಗ್ಲಿಷ್ ಬಲ್ಲರಾಗಿದ್ದಾರೆ. ಅಂಥವರಿಗೆ ಸುಲಭವಾಗಿ ತುಳುನಾಡಿನ ಇತಿಹಾಸ ತಿಳಿಸುವ ಉದ್ದೇಶದಿಂದ ಇಂಗ್ಲಿಷ್‌ಗೆ ಅನುವಾದ ಮಾಡಲಾಗಿದೆ. ಯುವಪೀಳಿಗೆ ಈ ಕಾದಂಬರಿ ಓದಿದರೆ ತುಳುನಾಡಿ ಇತಿಹಾಸದ ಅರಿವಾಗುತ್ತದೆ.
-ಡಿ.ಕೆ.ಚೌಟ, ಕಾದಂಬರಿಕಾರ