Advertisement

ಮುಂದಿನ ವರ್ಷದಿಂದಲೇ ಮಹಿಳಾ ಐಪಿಎಲ್ ನಡೆಯಬೇಕು: ಮಿಥಾಲಿ ರಾಜ್ ಆಗ್ರಹ

09:43 AM Mar 28, 2020 | keerthan |

ಹೊಸದಿಲ್ಲಿ: ಆಸ್ಟ್ರೇಲಿಯಾದಲ್ಲಿ ಪ್ರತೀ ವರ್ಷ ನಡೆಯುವ ಮಹಿಳಾ ಬಿಗ್ ಬಾಷ್ ಕೂಟ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಬೆನ್ನಲ್ಲೇ ಭಾರತದಲ್ಲೂ ಪೂರ್ಣ ಪ್ರಮಾಣದಲ್ಲಿ ಮಹಿಳಾ ಐಪಿಲ್ ಟಿ20 ಕೂಟವನ್ನು ನಡೆಸುವಂತೆ ಒತ್ತಾಯ ಕೇಳಿಬಂದಿದೆ. ಈ ಬಗ್ಗೆ ಮಾತನಾಡಿರುವ ಭಾರತ ಏಕದಿ ತಂಡದ ನಾಯಕಿ ಮಿಥಾಲಿ ರಾಜ್ ಬಿಸಿಸಿಐ ಮುಂದಿನ ವರ್ಷಕ್ಕೆ ಮಹಿಳಾ ಐಪಿಎಲ್ ಕೂಟವನ್ನು ಆಯೋಜಿಸಬೇಕು, ಈ ವಿಷಯದಲ್ಲಿ ಮತ್ತಷ್ಟು ಕಾಯಬಾರದು ಎಂದು ಒತ್ತಾಯಿಸಿದ್ದಾರೆ.

Advertisement

“ವೈಯಕ್ತಿಕವಾಗಿ ನನಗೆ ಅನ್ನಿಸುತ್ತಿರುವ ವಿಚಾರವನ್ನು ಇಲ್ಲಿ ಹೇಳುತ್ತಿದ್ದೇನೆ. ಬಿಸಿಸಿಐ ಮುಂದಿನ ವರ್ಷದಿಂದಲೇ ಮಹಿಳಾ ಕೂಟವನ್ನು ಆಯೋಜಿಸಬೇಕು. ನಿಯಮದಲ್ಲಿ ಕೆಲವೊಂದು ಬದಲಾವಣೆ ತಂದು, ಸಣ್ಣ ಪ್ರಮಾಣದಲ್ಲಾದರೂ ನಡೆಸಬೇಕು ಎಂದು ಮಿಥಾಲಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಮೂರು ತಂಡಗಳ ಪ್ರಾಯೋಗಿಕ ಮಹಿಳಾ ಐಪಿಎಲ್ ನಡೆಸಲಾಗಿತ್ತು. ವೆಲಾಸಿಟಿ, ಟ್ರೈಲ್ ಬ್ಲೇಜರ್ಸ್ ಮತ್ತು ಸೂಪರ್ ನೋವಾ ಎಂಬ ಹೆಸರಲ್ಲಿ ತಂಡಗಳು ಸೆಣಸಾಡಿದ್ದವು. ಮಿಥಾಲಿ ರಾಜ್, ಸ್ಮೃತಿ ಮಂಧನಾ, ಹರ್ಮನ್ ಪ್ರೀತ್ ಕೌರ್ ತಂಡಗಳ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next