Advertisement
ಆದರೆ ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ನಂತರ ಮಿಥಾಲಿ ಅಂಗಳದ ಆಚೆಗೂ ಸದ್ದು ಮಾಡ್ತಿದ್ದಾರೆ. ಅದು ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ. ಇದು ಟೀಕಾಕಾರರಿಗೆ ಆಹಾರವಾಗಿದೆ. ಸಿನಿಮಾದವರು ಬಿಕಿನಿ ತೊಟ್ಟರೆ ಸೂಪರ್ ಅನ್ನುವ ಜನ ಕ್ರೀಡಾಪಟುಗಳು ಸ್ವಲ್ಪ ಬೋಲ್ಡ್ ಆಗಿ ಕಾಣಿಸಿಕೊಂಡರೂ ಸಂಪ್ರದಾಯ, ಸಂಸ್ಕೃತಿ ಹೆಸರಲ್ಲಿ ಕೆಂಡಕಾರುತ್ತಾರೆ ಅನ್ನುವುದು ಮತ್ತೂಮ್ಮೆ ಸಾಬೀತಾಗಿದೆ.
ಟೆನಿಸ್ ಆಟಗಾರ್ತಿಯರು ಹೆಚ್ಚು ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಮರಿಯಾ ಶರಪೋವಾ ತನ್ನ ಆಟದ ಜತೆಗೆ ಸೌಂದರ್ಯದಿಂದಲೂ ಪ್ರಸಿದ್ಧಿಯಾದವರು. ಆಕೆಯ ಪಂದ್ಯವಿದ್ದಾಗ ಅಭಿಮಾನಿಗಳು ಆಕೆಯನ್ನು ನೋಡುವ ಉದ್ದೇಶದಿಂದಲೇ ಕ್ರೀಡಾಂಗಣಕ್ಕೆ ನುಗ್ಗುತ್ತಾರೆ. ಅದೇ ರೀತಿ ಭಾರತೀಯ ಕ್ರೀಡಾಪಟುಗಳ ವಿಷ್ಯಕ್ಕೆ ಬಂದರೆ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್, ಬ್ಯಾಟಿ¾ಂಟನ್ ಪ್ರತಿಭೆ ಜ್ವಾಲಾ ಗುಟ್ಟಾ…ಹೆಚ್ಚು ಗ್ಲಾಮರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ ಹೆಚ್ಚು ಹೆಚ್ಚು ಜಾಹೀರಾತುಗಳಲ್ಲಿ ಅವಕಾಶ ಸಿಕ್ಕಿದೆ ಅಂದ್ರೆ ಅದು ಕೇವಲ ಇವರ ಆಟದಿಂದ ಮಾತ್ರ ಅಲ್ಲ. ಅವರಲ್ಲಿರುವ ಗ್ಲಾಮರ್ ಲುಕ್ ಕೂಡ ಕಾರಣ ಅನ್ನುವುದನ್ನು ಅಲ್ಲಗೆಳೆಯಲಾಗದು.
Related Articles
Advertisement
ಬಾಲಿವುಡ್, ಹಾಲಿವುಡ್ ಅಷ್ಟೇಕೆ ನಮ್ಮ ಸ್ಯಾಂಡಲ್‌ವುಡ್‌ನಲ್ಲಿಯೂ ನಟಿಯರು ಬೋಲ್ಡ್ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ. ಅಲಿಯಾ ಭಟ್, ಶ್ರದ್ಧಾ ಕಪೂರ್ ಬಿಕಿನಿ ತೊಟ್ಟು ಮಾದಕವಾಗಿ ಫೋಟೋ ಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಾಗ ಅವರನ್ನು ಸೌಂದರ್ಯದ ದೇವತೆಗಳು ಎಂದೇ ಕರೆದವರಿದ್ದಾರೆ. ಆದರೆ ಕ್ರೀಡಾಪಟುಗಳಾದ ಸಾನಿಯಾ ಮಿರ್ಜಾ, ಜ್ವಾಲಾ ಗುಟ್ಟಾ…ಸ್ವಲ್ಪ ಹಾಟ್ ಆಗಿ ಕಾಣಿಸಿಕೊಂಡಾಗ ಟೀಕಿಸಿದ್ದಾರೆ. ಇದೀಗ ಮಿಥಾಲಿ ರಾಜ್ ಸರದಿ ಅಷ್ಟೇ.