ಸಿಡ್ನಿ: ಆಸ್ಟ್ರೇಲಿಯಾದ ಪ್ರಮಖ ವೇಗಿ ಮಿಚೆಲ್ ಸ್ಟಾರ್ಕ್ ಅವರು ಈ ಬಾರಿಯೂ ಐಪಿಎಲ್ ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಎರಡು ಸೀಸನ್ ಆಡಿದ್ದ ಸ್ಟಾರ್ಕ್ ನಂತರ ಸತತವಾಗಿ ವಿಶ್ವದ ಶ್ರೀಮಂತ ಲೀಗ್ ನಿಂದ ದೂರವಿದ್ದಾರೆ.
ಈ ಬಾರಿಯೂ ಮಿಚೆಲ್ ಸ್ಟಾರ್ಕ್ ಅವರು ಐಪಿಎಲ್ ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಫೈನಲ್ ಡ್ರಾಫ್ಟ್ ಗೆ ತನ್ನ ಹೆಸರನ್ನು ನೀಡದ ಸ್ಟಾರ್ಕ್ ಇದೀಗ ತಾನೇಕೆ ಐಪಿಎಲ್ ನಿಂದ ದೂರ ಉಳಿದಿದ್ದೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಹೊಸ ನಿಯಮಗಳು: ನಾಳೆಯಿಂದ ಏನೇನು ಬದಲಾವಣೆ?
“ ಐಪಿಎಲ್ ಗೆ ಹೆಸರು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಾನು ಬಹಳ ಸನಿಹವಿದ್ದೆ. ಆದರೆ ಮತ್ತೆ 22 ವಾರಗಳ ಕಾಲ ಬಯೋಬಬಲ್ ನಲ್ಲಿ ಕಾಲ ಕಳೆಯಲು ನನಗೆ ವೈಯಕ್ತಿಕವಾಗಿ ಇಷ್ಟವಿಲ್ಲ.” ಎಂದಿದ್ದಾರೆ.
ಆರ್ ಸಿಬಿ ಪರವಾಗಿ ಎರಡು ಸೀಸನ್ ಆಡಿರುವ ಮಿಚೆಲ್ ಸ್ಟಾರ್ಕ್ 27 ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ. 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 9.4 ಕೋಟಿ ರೂ.ಗೆ ಸ್ಟಾರ್ಕ್ ರನ್ನು ಖರೀದಿ ಮಾಡಿತ್ತು, ಆದರೆ ಗಾಯದ ಕಾರಣದಿಂದ ಅವರು ಆಡಿರಲಿಲ್ಲ.