ಸಿಡ್ನಿ: ಆ್ಯರೋನ್ ಫಿಂಚ್ ಅವರಿಂದ ತೆರವಾಗಿದ್ದ ಟಿ20 ತಂಡದ ನಾಯಕತ್ವಕ್ಕೆ ಇದೀಗ ಆಸ್ಟ್ರೇಲಿಯಾ ಅಚ್ಚರಿಯ ಆಯ್ಕೆ ಮಾಡಿದೆ. ಆಲ್ ರೌಂಡರ್ ಮಿಚೆಲ್ ಮಾರ್ಶ್ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಸ್ಟ್ರೇಲಿಯಾ ಟಿ20 ತಂಡದ ನಾಯಕನಾಗಿ ನೇಮಿಸಲಾಗಿದೆ.
ಮುಂದಿನ ವರ್ಷದ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಕ್ರಿಕೆಟ್ ಆಸ್ಟ್ರೇಲಿಯಾ ಈ ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ.
ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್ ಅವರು ಮೊದಲ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಮೂರು ಪಂದ್ಯಗಳ ಸರಣಿಗೆ ಆ್ಯರೋನ್ ಹಾರ್ಡಿ ಮತ್ತು ಮ್ಯಾಟ್ ಶಾರ್ಟ್ ತಂಡಕ್ಕೆ ಮರಳಿದ್ದಾರೆ.
ಈ ಸರಣಿಯು ಆಸ್ಟ್ರೇಲಿಯಾ ತಂಡವು ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಆಡುತ್ತಿರುವ ಮೊದಲ ಟಿ20 ಸರಣಿಯಾಗಿದೆ. ಟಿ20 ವಿಶ್ವಕಪ್ ಬಳಿಕ ಆ್ಯರೋನ್ ಫಿಂಚ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡಬೈ ಹೇಳಿದ್ದರು.
ಈ ವರ್ಷದ ಏಕದಿನ ವಿಶ್ವಕಪ್ ನ ನಂತರ ಆಯ್ಕೆಗಾರರು ದೀರ್ಘಾವಧಿಯ ನಾಯಕನ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸುತ್ತಾರೆ. ವಿಶ್ವಕಪ್ ಬಳಿಕ ಏಕದಿನ ತಂಡದ ನಾಯಕತ್ವವೂ ಮಾರ್ಶ್ ಅವರ ಹೆಗಲೇರುವ ಸಾಧ್ಯತೆಯಿದೆ.
ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮಿನ್ಸ್, ಕ್ಯಾಮರೂನ್ ಗ್ರೀನ್ ಮತ್ತು ಡೇವಿಡ್ ವಾರ್ನರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಏಕದಿನಕ್ಕೆ ಸೇರಿಕೊಳ್ಳಲಿದ್ದಾರೆ.
ದ.ಆಫ್ರಿಕಾ ಪ್ರವಾಸಕ್ಕೆ ತಂಡ
ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆ್ಯರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಂಪಾ