Advertisement

ಮಿಚೆಲ್‌ ಮಾರ್ಷ್‌ಗೆ 9 ತಿಂಗಳು ವಿಶ್ರಾಂತಿ

03:40 AM Mar 14, 2017 | Karthik A |

ಸಿಡ್ನಿ: ಭುಜದ ನೋವಿನಿಂದಾಗಿ ಭಾರತ ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಆಸ್ಟ್ರೇಲಿಯದ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದರಿಂದ ಅವರು 9 ತಿಂಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ ಎಂದೂ ತಿಳಿದು ಬಂದಿದೆ. ವೆಸ್ಟರ್ನ್ ಆಸ್ಟ್ರೇಲಿಯದ ಪತ್ರಿಕೆಯೊಂದರ ಪ್ರಕಾರ, ಮಾರ್ಷ್‌ ಭುಜದ ಸಮಸ್ಯೆ ಗಂಭೀರ ವಾಗಿದೆ. ಇದಕ್ಕೆ ಶಸ್ತ್ರ ಚಿಕಿತ್ಸೆಯೊಂದೇ ಪರಿಹಾರ. ಹೀಗಾಗಿ ವರ್ಷಾಂತ್ಯದ ಆ್ಯಶಸ್‌ ಸರಣಿಯಲ್ಲಿ ಆಡುವುದು ಅಸಾಧ್ಯ ಎನ್ನಲಾಗಿದೆ.

Advertisement

2014ರಲ್ಲಿ ಟೆಸ್ಟ್‌ಕ್ಯಾಪ್‌ ಧರಿಸಿದ ಮಿಚೆಲ್‌ ಮಾರ್ಷ್‌ ಆಸ್ಟ್ರೇಲಿಯದ ಟೆಸ್ಟ್‌ ಆಲ್‌ರೌಂಡರ್‌ಗಳ ಕೊರತೆಯನ್ನು ನೀಗಿಸುತ್ತಾರೆಂದು ಭಾವಿಸ ಲಾಗಿತ್ತು. ಆದರೆ ಈವರೆಗೆ ಇದು ನಿರೀಕ್ಷಿತ ಮಟ್ಟದಲ್ಲಿ ಫ‌ಲ ಕೊಟ್ಟಿಲ್ಲ. 21 ಟೆಸ್ಟ್‌ಗಳಿಂದ ಕೇವಲ 674 ರನ್‌ ಹಾಗೂ 29 ವಿಕೆಟ್‌ ಸಂಪಾದಿಸಿದ್ದಾರೆ. ಪ್ರಸಕ್ತ ಸರಣಿಯ ಮೊದಲೆರಡು ಟೆಸ್ಟ್‌ಗಳ 4 ಇನ್ನಿಂಗ್ಸ್‌ಗಳಲ್ಲಿ ಮಿಚೆಲ್‌ ಮಾರ್ಷ್‌ ಗಳಿಸಿದ್ದು ಕೇವಲ 48 ರನ್‌ ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next