Advertisement

ಕ್ರಿಕೆಟಿಗ ಮಿಚೆಲ್‌ ಜಾನ್ಸನ್‌ ಹಠಾತ್‌ ವಿದಾಯ

06:00 AM Aug 20, 2018 | |

ಸಿಡ್ನಿ: ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್‌ ಮಿಚೆಲ್‌ ಜಾನ್ಸನ್‌ ಎಲ್ಲ ಮಾದರಿ ವೃತ್ತಿ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ವಿದಾಯ ಘೋಷಿಸಿದ್ದಾರೆ. 

Advertisement

36 ವರ್ಷದ ಮಿಚೆಲ್‌ ಜಾನ್ಸನ್‌ ಟಿ20 ಬಿಗ್‌ಬಾಶ್‌ ಕೂಟದಲ್ಲಿ  ಕಳೆದ ತಿಂಗಳು ಭಾಗವಹಿಸಿ ಪರ್ಥ್ ಸ್ಕಾರ್ಚರ್ ತಂಡದ ಪರ ಆಡಿದ್ದರು. ಈ ವೇಳೆ ಗಾಯಕ್ಕೆ ತುತ್ತಾಗಿದ್ದರಿಂದ ನಿವೃತ್ತಿ ಹೇಳುವ ನಿರ್ಧಾರ ಮಾಡಿದ್ದಾರೆ. ಆದರೆ ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮತ್ತು ದೇಶಿಯ ಕೆಲವು ಟಿ20 ಕೂಟಗಳ ಆಯ್ಕೆಯಲ್ಲಿ ಲಭ್ಯವಿರುವುದಾಗಿ ತಿಳಿಸಿದ್ದಾರೆ. 

ಮಿಚೆಲ್‌ 73 ಟೆಸ್ಟ್‌ ಪಂದ್ಯವನ್ನಾಡಿದ್ದು ಒಟ್ಟಾರೆ 313 ವಿಕೆಟ್‌ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 153 ಪಂದ್ಯಗಳಿಂದ 239 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೂ ಟಿ20ಯಲ್ಲಿ 30 ಪಂದ್ಯದಿಂದ 38 ವಿಕೆಟ್‌ ಉರುಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next