Advertisement
ಎಂಐಟಿಯ ವೈಮಾನಿಕ ಮತ್ತು ಮೋಟಾರು ತಂತ್ರಜ್ಞಾನ ಮತ್ತು ಯಂತ್ರ-ವಿದ್ಯುತ್ ವಿಭಾಗಗಳು ಈ ಚಾಂಪಿಯನ್ಶಿಪ್ಅನ್ನು ಜಂಟಿಯಾಗಿ ಆಯೋಜಿಸುತ್ತಿವೆ. ಈ ಕಾರ್ಯಕ್ರಮವು ಸುಸ್ಥಿರ ಸಂಚಾರ ಕಾರ್ಯಯೋಜನೆಗೆ ಸಂಬಂಧಿಸಿ
ಪ್ರಮುಖ ಹೆಜ್ಜೆಗುರುತಾಗಿದೆ ಎಂದರು.
Related Articles
ಕೈಗಾರಿಕ ತಜ್ಞರು, ಶಿಕ್ಷಣತಜ್ಞರ ನಡುವೆ ಅನುಭವಗಳ ಜ್ಞಾನ ವಿನಿಮಯವನ್ನು ಉತ್ತೇಜಿಸಲಿದೆ. ನವೀಕರಿಸಬಹುದಾದ
ಇಂಧನ ಮತ್ತು ಸುಸ್ಥಿರ ಸಾರಿಗೆ ಕಾರ್ಯಯೋಜನೆಗಳನ್ನು ಉತ್ತೇಜಿಸಿರುವುದರ ಮೂಲಕ ಎಂಐಟಿಯು ಮುಂದಿನ ತಲೆಮಾರಿನ ತಂತ್ರಜ್ಞಾನಿಗಳು ಮತ್ತು ನವೀನ ಸಂಶೋಧಕರಲ್ಲಿ ಧನಾತ್ಮಕ ಪ್ರಭಾವ ಬೀರುವ ಆಶಯ ಹೊಂದಲಿದೆ ಎಂದರು. ಹಸುರು ಮತ್ತು ಹೆಚ್ಚು ಪರಿಸರ ಪ್ರಜ್ಞೆಯ ಭವಿಷ್ಯದತ್ತ ಪ್ರಗತಿಯನ್ನು ವೇಗವರ್ಧಿಸುವ ಗುರಿಯನ್ನು ನಾವು ಹೊಂದಿದ್ದೇವೆ.
Advertisement
ಚೆಫ್ಸ್ ಟಚ್, ಅಂಪೇರ್, ಪ್ರಗ್ನಾ ಮೈಕ್ರೋಡಿಸೈನ್ಸ್ ಸಂಸ್ಥೆಗಳ ಬೆಂಬಲದೊಂದಿಗೆ ಎಸ್‌ಇವಿಸಿ-2024ಯ ಆಯೋಜನೆಸಾಧ್ಯವಾಗಲಿದೆ. ಹಸುರು, ಸ್ವತ್ಛ ಭವಿಷ್ಯಕ್ಕಾಗಿ ಆಯೋಜಿಸುತ್ತಿರುವ ಸೌರ ವಿದ್ಯುತ್ ವಾಹನ ಚಾಂಪಿಯನ್‌ಶಿಪ್-2024ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ತಿಳಿಸಿದರು. ವಿಭಿನ್ನ ರೈಡ್, ರ್ಯಾಲಿ
ನೀರಿನ ಹೊಂಡಗಳು, ಮಳೆಯ ನಡುವೆ, ಸೂರ್ಯನ ಬೆಳಕು ಇಲ್ಲದಾಗ, ಕಾರನ್ನು ಬೇರೆ ಬೇರೆ ಕಡೆಗೆ ತಿರುಗಿಸುವುದು, ಒಮ್ಮೆ ಚಾರ್ಜ್ ಮಾಡಿದ ಬಳಿಕ ಮುಗಿಯುವವರೆಗೆ ಸಂಚರಿಸುವುದು ಹೀಗೆ ಹಲವಾರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಎಂಐಟಿ ಕ್ರಿಕೆಟ್ ಮೈದಾನ, ಎಂಎಸ್‌ಎಪಿ ಪಾರ್ಕಿಂಗ್ ಪ್ರದೇಶ, ಐಆರ್‌ಸಿ ಮೈದಾನ, ಎಂಐಟಿ ಸ್ಟೂಡೆಂಟ್ಸ್ ಪ್ಲಾಝಾದಲ್ಲಿ ಸ್ಪರ್ಧೆಗಳು ನಡೆಯಲಿವೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಣಿಪಾಲದಿಂದ ಕರಾವಳಿ ಬೈಪಾಸ್‌ವರೆಗೆ ಎಲೆಕ್ಟ್ರಿಕ್ ವಾಹನಗಳ ರ್ಯಾಲಿಯು ಮಾ.31ರಂದು ಬೆಳಗ್ಗೆ 8ರಿಂದ 9ರವರೆಗೆ ನಡೆಯಲಿದೆ ಎಂದರು. ಎಂಐಟಿ ಜಂಟಿ ನಿರ್ದೇಶಕ ಸೋಮಶೇಖರ ಭಟ್, ಮೆಕಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ| ಡಿ.ವಿ.ಕಾಮತ್, ಆರೋನಾಟಿಕಲ್
ಹಾಗೂ ಅಟೋಮೊಬೈಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ| ದಯಾನಂದ ಪೈ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಧ್ಯಾಪಕ ಡಾ| ಬಾಲಕೃಷ್ಣ ಮಧ್ದೋಡಿ, ಮಾಹೆಯ ಪಿಆರ್ ಆ್ಯಂಡ್ ಮೀಡಿಯಾ ವಿಭಾಗದ ಮಿಥುನ್ ರಾಜ್ ಪತ್ರಿಕಾಗೋಷ್ಠಿಯಲ್ಲಿದ್ದರು.