Advertisement
ಪಟ್ಟಣದ ರಾಜೀವ್ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ಕೊರಟಗೆರೆ ಪಟ್ಟಣದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊಹಮ್ಮದ್ ಜುಬೇರ್ ಬೆಂಗಳೂರು ಸೇರಿದಂತೆ ಹಲವು ಕಡೆ ಗೃಹ ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಅವರ ಜತೆಯಲ್ಲಿ ಹಿಂದೆ ಅವರು ಶಾಸಕರಾಗಿದ್ದ ಕಾಲದಲ್ಲಿ ತೆಗೆಸಿಕೊಂಡಿದ್ದ ಪೋಟೋವನ್ನು ತೋರಿಸಿ ವಂಚಿಸಿರುವುದಾಗಿ ತಿಳಿದುಬಂದಿದೆ. ಇಂತಹ ವಂಚಕರನ್ನು ಗೃಹ ಸಚಿವರು ಎಂದೂ ಕ್ಷೆಮಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಇಂತಹ ನಯವಂಚಕರನ್ನು ಸಹಿಸುವುದಿಲ್ಲ. ಆರೋಪಿ ಜುಬೇರ್ ರಾಜ್ಯಪಾಲರ ಲೆಟರ್, ಅಧಿಕಾರಿಗಳ ಸಹಿ ಮತ್ತು ಹೆಸರುಗಳನ್ನು ಸಹ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದ್ದು ಆದ್ದೆರಿಂದ ಈ ಕೋಡಲೆ ಅವನನ್ನು ಪಕ್ಷದಿಂದ ವಜಾಗೊಳಿಸಿ, ಉಚ್ಚಾಟಿಸಲಾಗಿದೆ ಎಂದರು.
Related Articles
Advertisement
ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಮಾತನಾಡಿ ‘ಡಾ.ಜಿ.ಪರಮೇಶ್ವರ್ ಪಕ್ಷದಲ್ಲಿ ಮತ್ತು ಸಾರ್ವಜನಿಕವಾಗಿ ನಡೆಯುವ ತಪ್ಪುಗಳನ್ನು ಸಹ ಸಹಿಸುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಇಂತಹ ಅಪರಾಧಿಯನ್ನು ನಮ್ಮ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಈ ವಂಚಕ ಜುಬೇರ್ ಮನಸ್ಸಿನಲ್ಲೇ ಲೆಕ್ಕಾಚಾರ ಮಾಡಿಕೊಂಡು ಹಿಂದೆ ಡಾ.ಜಿ.ಪರಮೇಶ್ವರ್ ರವರು ಶಾಸಕರಾದ ಕಾಲದಲ್ಲಿ ತೆಗೆಸಿಕೊಂಡ ಪೋಟೋವನ್ನು ಇಟ್ಟಿಕೊಂಡು ಇಷ್ಟು ದೊಡ್ಡ ವಂಚನೆ ಮಾಡಿದ್ದಾನೆ ಎಂದರೆ ಅವನಿಗೆ ತಕ್ಕ ಶಿಕ್ಷೆ ಆಗಬೇಕು ಈ ಘಟನೆಯನ್ನು ಗೃಹ ಸಚಿವರಿಗೆ ವಿನಾಕಾರಣ ತಾಳೆಹಾಕಿದರೆ ಮಹಿಳಾ ಕಾಂಗ್ರೆಸ್ ಸುಮ್ಮನಿರುವುದಿಲ್ಲ’ ಎಂದರು.
ಸುದ್ದಿಗೋಷ್ಠಿಯಲ್ಲಿ ಪ.ಪಂ.ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ನಂದೀಶ್, ಪಕ್ಷದ ಮುಖಂಡರುಗಳಾದ ಮಹಾಲಿಂಗಪ್ಪ, ಗಣೇಶ್, ನಾಜೀರ್ ಅಹಮದ್, ಕವಿತಾ, ಲಕ್ಷ್ಮಿದೇವಮ್ಮ, ಸುಮಾ, ನಾಸೀರ್, ಇಸ್ಮಾಯಿಲ್, ಇರ್ಷಾದ್, ಜಮೀರ್, ಮುರಳಿ, ಯುವಕಾಂಗ್ರೆಸ್‌ನ ವಿನಯ್‌ಕುಮಾರ್, ಅರವಿಂದ್, ದೀಪಕ್, ರಘುವೀರ್, ಎರ್‌ಟೆಲ್ ಗೋಪಿ ಸೇರಿದಂತೆ ಇನ್ನಿತರರು ಹಾಜರಿದ್ದರು.