ಬೆಂಗಳೂರು: ಇನ್‌ಶ್ಯೂರೆನ್ಸ್ ಏಜೆಂಟರ್‌ಗಳಿಗೆ ಗ್ರಾಹಕರ ಲೀಡ್ ಗಳನ್ನು ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹಣವನ್ನು ತನ್ನ ಕಂಪನಿ ಖಾತೆಗೆ ಹಾಕಿಸಿಕೊಂಡು ವಂಚಿಸುತ್ತಿದ್ದ ಖಾಸಗಿ ಕಂಪನಿ ಮಾಲೀಕ ಎಸಿಬಿ ಬೀಸಿದ ಬಲೆಗೆ ಬಿದ್ದಿದ್ದಾನೆ.
ಸ್ಟೇಟ್ ಮ್ಯಾನೇಜ್‌ಮೆಂಟ್ ಸೆಲ್ಯೂಷನ್ ಪ್ರೈಲಿ ಕಂಪನಿಯ ಮಾಲೀಕ ನಿಶ್ಚಿತ್ ಗೌಡ ಬಂಧಿತ. ಇನ್‌ಫೋಸಿಸ್ ಕಂಪನಿ ಎಚ್‌ಆರ್ ಹೆಸರಿನಲ್ಲಿ ನಕಲಿ ಐಡಿ ಸೃಷ್ಟಿಸಿ ಕೊಂಡಿದ್ದ ಈತ ಇ-ಮೇಲ್ ಮೂಲಕ ಮೇಸೆಜ್ ಮಾಡಿ ಕೆಲವರಿಗೆ ಎಲ್‌ಐಸಿ ಲೀಡ್ ಕೂಡಿಸುವುದಾಗಿ ಹೇಳಿ ವಂಚಿಸಿದ್ದೇನೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ:- ಬೆಳೆ ಹಾನಿ; ಎಕರೆಗೆ 40 ಸಾವಿರ ನೀಡಲು ರೈತರ ಆಗ್ರಹ
ತನಿಖೆ ವೇಳೆ ಆರೋಪಿ ತನ್ನ ಕಂಪನಿಯ ಕೆಲಸಗಾರರಿಂದ ದೂರವಾಣಿ ಮೂಲಕ ಪಿರ್ಯಾದುದಾರರನ್ನು ಸಂಪರ್ಕಿಸಿ ಎಲ್‌ಐಸಿ ಗ್ರಾಹಕರ ಲೀಡ್ ಗಳನ್ನು ಕೊಡಿಸುವುದಾಗಿ ಪರಿ ಯಿಸಿಕೊಳ್ಳುತ್ತಿರುವುದು. ಜತೆಗೆ ತನ್ನ ಕಂಪನಿಯ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸುತ್ತಿರುವುದು ಕೂಡ ಬೆಳಕಿಗೆ ಬಂದಿದೆ ಎಂದು ಆಪರಾಧ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಮಲೇಶ್ವರಂ ಮತ್ತು ಕೋರಮಂಗಲದಲ್ಲಿ ಕಂಪನಿ ತೆರೆದು ಹಲವು ಜನರಿಗೆ ಮೋಸ ಮಾಡಿದ್ದು ಬೆಳಕಿಗೆ ಬಂದಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ 2 ಪ್ರಕರಣಗಳು ದಾಖಲಾಗಿದ್ದು ಆರೋಪಿ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೇಳರದ ವೈನಾಡು ಜಿಲ್ಲೆಯ ಕಲ್‌ಪೇಟ್ ಪೊಲೀಸ್ ಠಾಣೆಯಲ್ಲಿ ಕೂಡ ಈತನ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ಮತ್ತಷ್ಟು ತನಿಖೆ ಕೈಗೊಂಡಿದ್ದಾರೆ.