Advertisement

ಆಪ್‌ನಿಂದ ಮಿಷನ್‌ 5ಕೆ ಕಾರ್ಯಸೂಚಿ: ಜಗದೀಶ್‌

03:06 PM Jun 07, 2017 | Harsha Rao |

ಮಡಿಕೇರಿ: ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯ ನಡುವೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ಮೂಲಕ ರಾಷ್ಟ್ರದಲ್ಲಿ ಬದಲಾವಣೆಯನ್ನು ಕಾಣಲು ಮಿಷನ್‌ 5ಕೆ ಕಾರ್ಯಸೂಚಿಯಂತೆ ಮುಂದಿನ 2018ರಲ್ಲಿ ಎದುರಾಗುವ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಸಕ್ರಿಯವಾಗಿ ಪಾಲ್ಗೊಳ್ಳಲಿದೆ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಹ ಸಂಚಾಲಕ ಜಗದೀಶ್‌ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರಾದ ಕೇಜ್ರಿವಾಲ್‌ ಅವರು ಹಾಕಿ ಕೊಟ್ಟ ಮಿಷನ್‌ 5 ಕೆ ಕಾರ್ಯಸೂಚಿಯಂತೆ ರಾಜ್ಯದ 210 ಪಟ್ಟಣ ಪಂಚಾಯತ್‌, ಪುರಸಭೆ, ನಗರಸಭೆ ಹಾಗೂ ಮಹಾನಗರ ಪಾಲಿಕೆ ಸೇರಿದಂತೆ 5,000 ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸುವ ಮೂಲಕ ತಳ ಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಲಿದೆ. ಇದರ ಭಾಗವಾಗಿ ಕೊಡಗಿನ ಮಡಿಕೇರಿ ನಗರಸಭೆೆ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಪಟ್ಟಣ ಪಂಚಾಯತ್‌ಗಳಿಂದಲೂ ಎಎಪಿಯಿಂದ ಶುದ್ಧ ಹಸ್ತರಾದ ಪ್ರಾಮಾಣಿಕ ಸ್ಪರ್ಧಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.

ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಪಕ್ಷವನ್ನು ಬಲಪಡಿಸಲಾಗು ವುದು. ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಆಪ್‌ ಪಕ್ಷ ಸ್ಪರ್ಧಿಸಲಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಗದೀಶ್‌, ಎಎಪಿ ಪಕ್ಷದ ಕಪಿಲ್‌ ಮಿಶ್ರಾ ಅವರು ಕೆೇಜ್ರಿವಾಲ್‌ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದ್ದು, ಯಾವುದಕ್ಕೂ ಸಾûಾÂಧಾರ ಗಳಿಲ್ಲವೆಂದು ತಿಳಿಸಿದರು.

ಎಎಪಿಯ ಜಿಲ್ಲಾ ಪ್ರಮುಖರಾದ ಬಾಲ ಸುಬ್ರಹ್ಮಣ್ಯ ಮಾತನಾಡಿ, ಕಪಿಲ್‌ ಮಿಶ್ರಾ ಅವರು 2 ಕೋಟಿ ರೂ. ಭ್ರಷ್ಟಾಚಾರದ ವಿಚಾರವನ್ನು ಕೇಜ್ರಿವಾಲ್‌ ಅವರಿಗೆ ತಳಕು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಅದೇ ಕೇಜ್ರಿವಾಲ್‌ ಅವರು ತಮಗೆ ದೊರೆತ ಪ್ರಶಸ್ತಿಯೊಂದರ ಕೋಟ್ಯಂತರ ರೂ. ಹಣವನ್ನು ದೆಹಲಿಯ ಸ್ಲಂ ನಿವಾಸಿಗಳ ಏಳಿಗೆಗೆ ಬಳಸಿದ್ದಾರೆ. ಇಂತಹ ವ್ಯಕ್ತಿಯಿಂದ ಭ್ರಷ್ಟಾಚಾರ ನಡೆದಿದೆ ಎನ್ನುವುದು ಕೇವಲ ನಿರಾಧಾರ ಆರೋಪವೆಂದು ಸ್ಪಷ್ಟಪಡಿಸಿದರು.

Advertisement

ಜಿಲ್ಲಾ ಪ್ರಮುಖ ಮಂಜುನಾಥ್‌ ಮಾತನಾಡಿ, ಲಂಚ ಮುಕ್ತ ಕರ್ನಾಟಕ-ಲಂಚ ಮುಕ್ತ ಭಾರತ ನಿರ್ಮಾಣ ತಮ್ಮ ಗುರಿಯಾಗಿದೆ ಎಂದರು. 

ಸ್ಥಳೀಯ ಸಂಸ್ಥೆ‌ಗಳ ಚುನಾವಣೆಯಲ್ಲು ಬಿಜೆಪಿ ಪಕ್ಷ ಕೇಂದ್ರದ ಮೋದಿ ಅವರ ಸಾಧನೆಗಳನ್ನು ಮುಂದು ಮಾಡಿ ಓಟು ಕೇಳುವುದಕ್ಕೆ ಬದಲಾಗಿ ತಾವು ಗ್ರಾಮೀಣ ಭಾಗದಲ್ಲಿ ಮಾಡಿರುವ ಸಾಧನೆಯನ್ನು ಆಧರಿಸಿ ಮತ ಕೇಳಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಪ್ರಮುಖರಾದ ಜ್ಞಾನಸಾಗರ್‌ ರೈ ಹಾಗೂ ಪೃಥ್ವಿ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next